Posts

Showing posts from January, 2016

ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆ ಖಾಲಿ:*

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 25 ಸಾವಿರದ 749 ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು ಹೈಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಅಂಕಿಅಂಶ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು ತರಬೇತಿ ವಿಭಾಗ) ರಾಘವೇಂದ್ರ ಔರಾದ್ಕರ್ ಹೈಕೋರ್ಟ್ ಶುಕ್ರವಾರ ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಎಯಿಂದ ಡಿ ವೃಂದದವರೆಗೆ ಒಟ್ಟು 99 ಸಾವಿರದ 189 ಪೊಲೀಸ್ ಕಾರ್ಯ ನಿರ್ವಾಹಕ ಹುದ್ದೆಗಳು ಭರ್ತಿಯಾಗಿದ್ದು, 25 ಸಾವಿರದ 749 ಹುದ್ದೆಗಳು ಖಾಲಿಯಿವೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ ಎಂದು ಮಾಹಿತಿ ನೀಡಿದ್ದಾರೆ. ಸಚಿವಾಲಯ ಸೇರಿದಂತೆ ತಾಂತ್ರಿಕ ವಿಭಾಗದಲ್ಲಿ 1, 03, 457 ಹುದ್ದೆಗಳು ಮಂಜೂರಾಗಿದ್ದು, 74 ಸಾವಿರದ 389 ಭರ್ತಿಯಾಗಿವೆ. 27 ಸಾವಿರದ 068 ಹುದ್ದೆಗಳು ಖಾಲಿಯಿವೆ. ಒಟ್ಟಾರೆ ಎಯಿಂದ ಡಿ ವೃಂದದವರೆಗೆ ಶೇಕಡಾ 25ರಷ್ಟು ಕಾರ್ಯನಿರ್ವಾಹಕ ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವುದಾಗಿ ತಿಳಿಸಲಾಗಿದೆ.

ಸಾನಿಯಾಮಿರ್ಜಾ- ಮಾರ್ಟೀನಾ ಜೋಡಿಗೆ ಆಸ್ಟ್ರೇಲಿಯನ್ ಡಬಲ್ಸ್ ಪ್ರಶಸ್ತಿ:-

ಮೆಲ್ಬೋರ್ನ್, ಜ.29- ಇಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಡ್ಜರ್ಲ್ಯಾಂಡ್ನ ಮಾರ್ಟೀನಾ ಹಿಂಗೀಸ್ ಜೋಡಿ ಮುಡಿಗೇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಚೆಕ್ ರಿಪಬ್ಲಿಕ್ನ ಆಂಡ್ರಿಯಾ ಮತ್ತು ಲ್ಯೂಸಿ ಜೋಡಿಯನ್ನು 7-6, 6-3 ಸೆಟ್ಗಳಿಂದ ಮಣಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ. ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಸಾನಿಯಾ-ಹಿಂಗೀಸ್ ಜೋಡಿಯನ್ನು ಪ್ರಬಲವಾಗಿ ಎದುರೇಟು ನೀಡುವಲ್ಲಿ ಚೆಕ್ನ ಜೋಡಿ ಯಶಸ್ವಿಯಾಗಿತ್ತು. ಆದರೆ, ಟೈಬ್ರೇಕರ್ನಲ್ಲಿ ಚುರುಕಾದ ಆಟದಿಂದ ಪ್ರಥಮ ಸೆಟ್ಅನ್ನು ಕೈ ವಶಪಡಿಸಿಕೊಂಡಿತು. ಆದರೆ, ಎರಡನೆ ಸೆಟ್ನಲ್ಲಿ ಪ್ರಾಬಲ್ಯ ಮೆರೆದು ಸುಲಭವಾಗಿಯೇ ಪಂದ್ಯವನ್ನು ತನ್ನತ್ತ ತೆಗೆದುಕೊಂಡು ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡರು. ಸತತ ಮೂರು ಗ್ರ್ಯಾಂಡ್ಸ್ಲ್ಯಾಮ್ಗಳನ್ನು ಗೆದ್ದ ಕೀರ್ತಿ (ವಿಂಬಲ್ಡನ್, ಯು.ಎಸ್.ಓಪನ್ ಈಗ ಆಸ್ಟ್ರೇಲಿಯನ್ ಓಪನ್) ಮಹಿಳಾ ಡಬಲ್ಸ್ ಪ್ರಶಸ್ತಿ ಸಾನಿಯಾ- ಮಾರ್ಟಿನಾ ಹಿಂಗೀಸ್ಗೆ ಸಲ್ಲುತ್ತದೆ. ಸತತ ಗೆಲುವಿನ ನಾಗಾಲೋಟದಲ್ಲಿರುವ ಈ ಜೋಡಿ ಈಗ ಹೊಸ ದಾಖಲೆಗೂ ಪಾತ್ರವಾಗಿದೆ..

ಮಾಹಿತಿ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಯ ವಿವರ ಬಹಿರಂಗಕ್ಕೆ ಅವಕಾಶವಿಲ್ಲ... ಎಂದು ಕೇಂದ್ರ ಮಾಹಿತಿ ಆಯೋಗವು ಶಾಲೆಗಳಿಗೆ ಮತ್ತು ಶಿಕ್ಷಣ ಇಲಾಖೆಗೆ ಆದೇಶಿಸಿದೆ

Image
Scanned by CamScanner

ರೇಖಾಗೆ ಯಶ್ ಛೋಪ್ರಾ ಪ್ರಶಸ್ತಿ

Image

IIFA ಉತ್ಸವದಲ್ಲಿ ಆರು ಪ್ರಶಸ್ತಿ ಬಾಚಿದ್ದ 'ರಂಗಿತರಂಗ'

Image

ಇನ್ಮುಂದೆ ಪೂರ್ಣ ನಾಡಗೀತೆ

Image

೬೭ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಸಿಯಲ್ಲಿ ಉದಯಿಸಿದ ಭಾರತ GHPS BANAHATTI TOTA, Dt : BAGALKOT

Image

ಪದ್ಮ ಪ್ರಶಸ್ತಿ ಕರ್ನಾಟಕದವರು:

ಪದ್ಮ ಪ್ರಶಸ್ತಿ ಕರ್ನಾಟಕದವರು 26 Jan, 2016       ಶ್ರೀ ಶ್ರೀ ರವಿಶಂಕರ ಗುರೂಜಿ (ಅಧ್ಯಾತ್ಮ) ತಮಿಳುನಾಡು ಮೂಲದ ಶ್ರೀ ಶ್ರೀ ರವಿಶಂಕರ ಗುರೂಜಿ ಬೆಂಗಳೂರಿನಲ್ಲಿ 1981ರಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ಜಗತ್ತಿನಾದ್ಯಂತ ಯೋಗ ಹಾಗೂ ಅಧ್ಯಾತ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ. ಒತ್ತಡಮುಕ್ತ, ಹಿಂಸೆಮುಕ್ತ ಸಮಾಜ ನಿರ್ಮಾಣದ ಕನಸು ಹೊಂದಿರುವ ಅವರು, ಶಾಂತಿ ಸ್ಥಾಪನೆಗಾಗಿಯೂ ಶ್ರಮಿಸುತ್ತಿದ್ದಾರೆ. ದೇಶ–ವಿದೇಶಗಳ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಗುರೂಜಿ ಹೊಂದಿದ್ದಾರೆ. 155 ದೇಶಗಳಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಕಾರ್ಯಕ್ರಮ ನಡೆಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಲು ಅಂತರರಾಷ್ಟ್ರೀಯ ದತ್ತಿ ಸಂಸ್ಥೆಯೊಂದನ್ನೂ ಸ್ಥಾಪಿಸಿದ್ದಾರೆ. ಇದರ ಕೇಂದ್ರ ಸ್ಥಾನ ಜಿನಿವಾದಲ್ಲಿದೆ. ವಾಸುದೇವ ಕಳಕುಂಟೆ ಅತ್ರೆ (ವಿಜ್ಞಾನ ಮತ್ತು ತಂತ್ರಜ್ಞಾನ) ದೇಶದ ಪ್ರಖ್ಯಾತ ವಿಜ್ಞಾನಿಯಾಗಿರುವ ಅತ್ರೆಯವರು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಅಧ್ಯಕ್ಷರು. ಅವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. 1939ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಯುವಿಸಿಇಯಲ್ಲಿ ಬಿ.ಇ (ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌) ಪದವಿ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸ್ನಾತಕೋ...

ಸೈನಾಗೆ ಪದ್ಮಶ್ರೀ ಪ್ರಶಸ್ತಿ:-

Image
ನವದೆಹಲಿ, ಜ. ೨೫- ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸುವ ಪದ್ಮಶ್ರೀ ಪ್ರಶಸ್ತಿಗೆ ಕ್ರೀಡಾಪಟು ಸೈನಾ ನೆಹ್ವಾಲ್, ಚಲನಚಿತ್ರ ನಟ ಅನುಪಮ್ ಖೇರ್ ಸೇರಿದಂತೆ ಹಲವಾರು ಮಂದಿಗೆ ಪ್ರಶಸ್ತಿ ನೀಡಲಾಗಿದೆ. ಹಿರಿಯ ಪತ್ರಕರ್ತ ವಿನೋದ್ ರಾಯ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿತ್ರನಟ ಮನೋಜ್ ಕುಮಾರ್, ಹಿನ್ನಲೆ ಗಾಯಕ ಉದಿತ್ ನಾರಾಯಣ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಿಂಧು ಮುಡಿಗೆ ಮಲೇಷ್ಯಾ ಬ್ಯಾಡ್ಮಿಂಟನ್ ಗರಿ:*

Image
ಪೆನಾಂಗ್/ಮಲೇಷ್ಯಾ (ಪಿಟಿಐ): 2013ರಲ್ಲಿ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ್ದ ಭಾರತದ ಪಿ.ವಿ ಸಿಂಧು ಈಗ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಈ ಮೂಲಕ 2016ರ ಋತುವನ್ನು ಭರ್ಜರಿಯಾಗಿಯೇ ಆರಂಭಿದ್ದಾರೆ. ಭಾನುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು 21– 15, 21–9ರ ನೇರ ಗೇಮ್ಗಳಿಂದ ಸ್ಕಾಟ್ಲೆಂಡ್ನ ಕ್ರಿಸ್ಟಿ ಗಿಲ್ಮೌರ್ ಅವರನ್ನು ಮಣಿಸಿದರು. ಇದು ಸಿಂಧು ಅವರ ವೃತ್ತಿ ಜೀವನದ ಐದನೇ ಹಾಗೂ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯಾಗಿದೆ.

👉👉Counselling Time table of Belagavi Dist Teachers Recruitment: ಆಯ್ಕೆಯಾದ ಪ್ರಾಥಮಿಕ ಶಾ.ಶಿಕ್ಷಕರ ಕೌನ್ಸಿಲಿಂಗ ವೇಳಾಪಟ್ಟಿ (ಬೆಳಗಾವಿ ಜಿಲ್ಲೆ)

Image

ವಿಮಾನ ದುರಂತದಲ್ಲೇ ನೇತಾಜಿ ಸಾವು :-

Image
ನವದೆಹಲಿ (ಪಿಟಿಐ): ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಕಣ್ಮರೆಗೆ ಸಂಬಂಧಪಟ್ಟ 100 ರಹಸ್ಯ ದಾಖಲೆಗಳ ಡಿಜಿಟಿಲ್ ರೂಪವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. 1945ರ ಅಗಸ್ಟ್ 18ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು 1995ರಲ್ಲಿ ಕೇಂದ್ರ ಸಚಿವ ಸಂಪುಟದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಇದರಲ್ಲಿ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಈ ಕಡತಗಳನ್ನು ದೆಹಲಿಯ ರಾಷ್ಟ್ರೀಯ ಪತ್ರಾಗಾರದಲ್ಲಿ ಇನ್ನು ಸಾರ್ವಜನಿಕರೂ ನೋಡಬಹುದಾಗಿದೆ. 1995ರ ಫೆ.6ರಂದು ಗೃಹ ಕಾರ್ಯದರ್ಶಿ ಕೆ. ಪದ್ಮನಾಭಯ್ಯ ಅವರು ಸಹಿ ಮಾಡಿದ ಸಂಪುಟದ ಟಿಪ್ಪಣಿಯಲ್ಲಿ, 'ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ಮೃತಪಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದೆ' ಎಂದು ಉಲ್ಲೇಖಿಸಲಾಗಿದೆ. ಜಪಾನ್ನಿಂದ ಭಾರತಕ್ಕೆ ನೇತಾಜಿ ಅವರ ಅಸ್ಥಿಯನ್ನು ತರುವ ಬಗ್ಗೆ ಕೇಂದ್ರದ ನಿಲುವು ತಿಳಿಸಲು ಈ ಟಿಪ್ಪಣಿ ತಯಾರಿಸಲಾಗಿತ್ತು. 1991ರಲ್ಲಿ ಅಧಿಕಾರದಲ್ಲಿದ್ದ ಚಂದ್ರಶೇಖರ್ ಅವರ ಸರ್ಕಾರ ಸಹ ವಿಮಾನ ಅಪಘಾತದಲ್ಲೇ ನೇತಾಜಿ ಮೃತಪಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು ಎನ್ನುವುದು ಕಡತಗಳ ಮೂಲಕ ಬಹಿರಂಗಗೊಂಡಿದೆ. ಬೋಸ್ ಅವರ ಸಾವಿನ ಕುರಿತು ತನಿಖೆ ನಡೆಸಲು ಮತ್ತೊಂದು ತನಿಖಾ ಆಯೋಗ ರಚಿಸ...
Image
👉👉Counselling Time table of Bagalkot dist teachers recruitment :-

ಆಯ್ಕೆಯಾದ ಅರ್ಹ ಶಿಕ್ಷಕ ಅಭ್ಯರ್ಥಿಗಳಿಗೆ ಜ. 25, 27, 28ರಂದು ಕೌನ್ಸೆಲಿಂಗ್ @DDPI OFFICE : ನೀಡಬೇಕಾದ ದಾಖಲೆಗಳು ೧)ಅಭ್ಯರ್ಥಿಗಳ ವಿರುದ್ಧ ಕಾಯಂ ವಾಸ ಸ್ಥಳದ ವ್ಯಾಪ್ತಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ಪ್ರಮಾಣ ಪತ್ರ ೨)5 ಭಾವಚಿತ್ರ, ೩)ಎಲ್ಲ ಮೂಲ ದಾಖಲೆಗಳು ಹಾಗೂ ೪)ಮೂಲ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿ

Image
9,511 ಶಾಲಾ ಶಿಕ್ಷಕರ ಆಯ್ಕೆ: ಅಂತಿಮ ಪಟ್ಟಿ ಪ್ರಕಟ ವಿಕ ಸುದ್ದಿಲೋಕ | Jan 23, 2016, 04.00 Am -ಅರ್ಹ ಅಭ್ಯರ್ಥಿಗಳಿಗೆ ಜ. 25, 27, 28ರಂದು ಕೌನ್ಸೆಲಿಂಗ್- ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಆಯ್ಕೆಗೆ ಅರ್ಹತೆ ಪಡೆದಿರುವ 9,511 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಶುಕ್ರವಾರ ಅಂತರ್ಜಾಲದಲ್ಲಿ ಪ್ರಕಟಿಸಿದೆ. 1ರಿಂದ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆಯ 2,511 ಹಾಗೂ 6ರಿಂದ 8ನೇ ತರಗತಿವರೆಗಿನ ಹಿರಿಯ ಪ್ರಾಥಮಿಕ ಶಾಲೆಗಳ 7,000 ಹುದ್ದೆಗಳೂ ಸೇರಿದಂತೆ ಒಟ್ಟು 9,511 ಹುದ್ದೆಗಳ ಆಯ್ಕೆಗೆ ಈ ನೇಮಕ ನಡೆಯಲಿದೆ. ಅರ್ಹರಿಗೆ ಡಿಡಿಪಿಐಗಳ ಕಚೇರಿಯಲ್ಲಿ ಜ. 25, 27 ಮತ್ತು 28ರಂದು ಕೌನ್ಸೆಲಿಂಗ್ ನಡೆಯಲಿದೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪಟ್ಟಿಯನ್ನು ಜಿಲ್ಲಾವಾರು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ತಾತ್ಕಾಲಿಕ ಕೌನ್ಸೆಲಿಂಗ್ನ ದಿನಾಂಕ ಹಾಗೂ ಸ್ಥಳ ತಿಳಿಸುವಂತೆ ಆಯಾ ಡಿಡಿಪಿಐಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಕೌನ್ಸೆಲಿಂಗ್, ರೋಸ್ಟರ್/ ಮೆರಿಟ್ ಆಧರಿತ ಪಟ್ಟಿ ಹಾಗೂ ಖಾಲಿ ಹುದ್ದೆಗಳ ವಿವರವನ್ನು ಆಯಾ ಜಿಲ್ಲೆಯ ಉಪನಿರ್ದೇಶಕರ(ಆಡಳಿತ) ಕಚೇರಿಯ ನಾಮಫಲಕದಲ್ಲಿ 25ರಂದು ಬೆಳಗ್ಗೆ 8 ಗಂಟೆಯೊಳಗೆ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ ಎಂದು ಆ...

ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಶಿಕ್ಷಕರ ಕೌನ್ಸಲಿಂಗ ದಿನಾಂಕ.25 ಜನೇವರಿ ಯಿಂದ 28 ವರೆಗೆ.( May be ಎಲ್ಲ ಜಿಲ್ಲೆಗಳಲ್ಲಿ)

Image

FINAL SELECTION LIST OF ASSISTANT TEACHERS IN GOVERNMENT PRIMARY AND HIGHER PRIMARY SCHOOLS AT DISTRICT LEVEL – 2014-15 NOW AVAILABLE ON WEB

Click below to get District wise selection list with cutoff percentage http://myapp.pstr15.caconline.in/FinalSelectionList.aspx Click below to know your selection status:* http://myapp.pstr15.caconline.in/FinalKeyAnswers.aspx

9500 ಶಿಕ್ಷಕರ ನೇಮಕ ನಾಳೆ ಪ್ರಕಟ:-ಸಂಜೆವಾಣಿ

Image
ಬೆಂಗಳೂರು, ಜ. ೨೨- ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 9,511 ಮಂದಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನಾಳೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆರತ್ನಾಕರ ಅವರು ಇಂದಿಲ್ಲಿ ತಿಳಿಸಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ತಾಕೀತು ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್ಕೆಜಿ ಮತ್ತು ಯುಕೆಜಿಯಿಂದಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ತಾಕೀತು ಮಾಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವ ತರಗತಿಯಿಂದ ಶಿಕ್ಷಣ ಸೌಲಭ್ಯ ಕಲ್ಪಿಸಲಾಗಿದೆಯೋ ಆ ರೀತಿ ಶಿಕ್ಷಣ ಕಾಯ್ದೆ ಅನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಅವರು ಹೇಳಿದರು. 1 ರಿಂದ 12ನೇ ತರಗತಿವರೆಗೂ ಬರುವ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಪಠ್ಯಕ್ರಮ ಜಾರಿಗೆ ಬರಲಿದೆ ಎಂದರು. ಶೂ ಭಾಗ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ನೀಡಲು ಆಯಾ ಶಾಲೆಗಳ ಅಭಿವೃದ್ಧಿ ಸಮಿತಿಗಳು (ಬೆಟರ್ಮೆಂಟ್ ಕಮಿಟಿ) ಈಗಾಗಲೇ ಹಣ ಕಳುಹಿಸಿರುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದುವರೆಗೂ ರಾಜ್ಯದಲ್ಲಿನ ಶೇ. 50 ರಷ್ಟು ಶಾಲಾ ಅಭಿವೃದ್ಧಿ...

ಕೊಹ್ಲಿ ಮತ್ತೊಂದು ದಾಖಲೆ.. ವೇಗವಾಗಿ 25 ಶತಕ ಸಿಡಿಸಿದ ಡೆಲ್ಲಿ ಡ್ಯಾಶರ್:*

Image
: ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರನೇಯ ಏಕದಿನ ಪಂದ್ಯದ ವೇಳೆ ವೇಗವಾಗಿ 7 ಸಾವಿರ ಪೂರೈಸಿದ ದಾಖಲೆ ನಿರ್ಮಿಸಿದ್ದ ಬೆನ್ನಲ್ಲೇ ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ಅತಿ ವೇಗವಾಗಿ 25 ಶತಕ ಸಿಡಿಸಿದ ಪ್ರಥಮ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 170 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 162ನೇ ಇನ್ನಿಂಗ್ಸ್ನಲ್ಲಿ 25 ಶತಕ ಸಿಡಿಸಿ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿಯಿಂದ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ನಂತರದ ಸ್ಥಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 234 ಇನ್ನಿಂಗ್ಸ್ನಲ್ಲಿ 25 ಶತಕ ಸಿಡಿಸಿದ್ರೆ, ಆಸ್ಟ್ರೇಲಿಯಾದ ಪಾಂಟಿಂಗ್ 279 ಇನ್ನಿಂಗ್ಸ್, ಜಯಸೂರ್ಯ 373 ಇನ್ನಿಂಗ್ಸ್ ಹಾಗೂ ಕುಮಾರ್ ಸಂಗಕ್ಕಾರ್ 379 ಇನ್ನಿಂಗ್ಸ್ನಲ್ಲಿ 25 ಶತಕ ದಾಖಲಿಸಿದ್ದರು. ಆದರೆ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದವರೆಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.

ಇನ್ಕ್ರೆಡಿಬಲ್ ಇಂಡಿಯಾ:ಅಮಿತಾಭ್, ಪ್ರಿಯಾಂಕಾ ಬ್ರಾಂಡ್ ಅಂಬಾಸಡರ್*

Image
ಉದಯವಾಣಿ, Jan 21, 2016, 3:24 PM IST ಮುಂಬಯಿ: ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ಹೊಸ ಬ್ರಾಂಡ್ ಅಂಬಾಸಡರ್ಗಳಾಗಿ ಬಾಲಿವುಡ್ನ ಬಿಗ್ ಬಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಜಾ ವರದಿಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಇನ್ಕ್ರೆಡಿಬಲ್ ಇಂಡಿಯಾದ ಬ್ರಾಂಡ್ ಅಂಬಾಸಡರ್ ಆಗಿ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಕೆಲಸ ಮಾಡುತ್ತಿದ್ದರು. ಈ ಅಭಿಯಾನ ನಡೆಸುತ್ತಿದ್ದ ಕಂಪೆನಿಯಿಂದ ಗುತ್ತಿಗೆ ಮುಗಿದ ತರುವಾಯ ನಿರ್ಗಮಿಸಿರುವ ಆಮೀರ್ ಅವರ ಸ್ಥಾನಕ್ಕೆ ಇದೀಗ ನೂತನ ಬ್ರಾಂಡ್ ಅಂಬಾಸಡರ್ಗಳಾಗಿ ಅಮಿತಾಭ್ ಬಚ್ಚನ್ ಮತ್ತು ಮಾಜಿ ಮಿಸ್ ವರ್ಲ್ಡ್ ಆಗಿರುವ ಪ್ರಿಯಾಂಕಾ ಚೋಪ್ರಾ ಮೂಡಿ ಬರಲಿದ್ದಾರೆ. ಮೂರು ವರ್ಷಗಳ ಈ ಗುತ್ತಿಗೆಗೆ ನೂತನ ಅಂಬಾಸಡರ್ಗಳಾಗಿ ಕೆಲಸ ಮಾಡುವ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಚಿಕ್ಕಾಸನ್ನೂ ಚಾರ್ಜ್ ಮಾಡಿಲ್ಲ. ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ಅಂಬಾಸಡರ್ಗಳಾಗಿ ಈ ತಾರೆಯರು ಭಾರತೀಯ ಪ್ರವಾಸೋದ್ಯಮಕ್ಕಾಗಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ಬ್ರಾಂಡ್ ಅಂಬಾಸಡರ್ ಆಗಿದ್ದ ಆಮೀರ್ ಖಾನ್ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಫಲಶ್ರುತಿಯಾಗಿ ಈ ಅಭಿಯಾನದಿಂದ ಹೊರಬಿದ್ದಿದ್ದರು ಎಂದು ತಪ್ಪಾಗಿ...

ಪುಸ್ತಕ ಪ್ರಾಧಿಕಾರದ 2014ನೇ ಸಾಲಿನ ಪ್ರಶಸ್ತಿ ಪ್ರಕಟ

Image

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Image

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ:ಫೆಬ್ರುವರಿ 13 ಮತ್ತು 20 ರಂದು

Image

ದೈಹಿಕ ನ್ಯೂನತೆ ಇದ್ದರೂ ಚಿತ್ರಕಲೆಯಲ್ಲಿ ಸಾಧನೆ ಮಾಡಿ ತೋರಿಸಿದ ಅನು ಜೈನ್

Image
Published: 18 Jan 2016 10:07 AM IST ಅನು ಕಲೆಗೆ ವಿಕಲಚೇತನವೇ ನಿಬ್ಬೆರಗಾಯಿತು! ಬೆಂಗಳೂರು: ದೈಹಿಕ ವಿಕಲಚೇತನಕ್ಕೆ ಸವಾಲೆಸೆದು ಸಹಜ ಬದುಕಿನತ್ತ ಸಾಗಿ ಸಾಹಸ ಮಾಡುತ್ತಿರುವವರೆಂದರೆ ಚಿತ್ರ ಕಲಾವಿದೆ ಅನುಜೈನ್. ಇವರು ಗುರಿ ಸಾಧಿಸುವ ಛಲವಿದ್ದರೆ ದೈಹಿಕ ನ್ಯೂನತೆಗಳು ನಗಣ್ಯ ಎಂದು ಕೊಂಡವರು. ಕಾಲಿನ ಸಂಪೂರ್ಣ ಸ್ವಾಧrನ ಕಳೆದುಕೊಂಡಿರುವ ಅನು ತಮ್ಮ ಎರಡು ಮೊಣಕೈ ಜೋಡಿಸಿ ಕುಂಚ ಹಿಡಿದು ಚಿತ್ರ ಬಿಡಿಸುವ ರೀತಿಯನ್ನು ನೋಡಿದರೆ ಬರೀ ಸಾಮಾನ್ಯ ಜನತೆ ಮಾತ್ರವಲ್ಲ, ಕಲಾವಿದರಿಗೂ ಅಚ್ಚರಿ ಆಗುತ್ತದೆ. ಇವರ ಕೌಶಲ ನೋಡಿ ವಿಕಲಚೇತನವೇ ನಾಚುತ್ತದೆ. ಅನುಜೈನ್ ಮೂಲತಃ ಪಶ್ಚಿಮ ಬಂಗಾಳದವರು, 33 ವರ್ಷದ ಅನು ಕಳೆದ 20ವರ್ಷಗಳಿಂದ ಚಿತ್ರಕಲೆಯನ್ನು ಹವ್ಯಾಸ ಹಾಗೂ ವೃತ್ತಿಯಾಗಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನೂರಾರು ಮಕ್ಕಳಿಗೆ ಕಲೆಯನ್ನು ಧಾರೆಯೆರೆದಿದ್ದಾರೆ. ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ಚಿತ್ರಕಲೆಯನ್ನು ಪ್ರದರ್ಶಿಸಿದ್ದರು. ಚಂಡೀಘಡದ ಪ್ರಾಚೀನ ಕಲಾಕೇಂದ್ರದಿಂದ ಅವರಿಗೆ ಪುರಸ್ಕಾರ ದೊರೆತಿದೆ. ಇದುವರೆಗೆ ಕಢಕ್ ಪುರದಲ್ಲಿ ತರಬೇತಿ ನೀಡುತ್ತಿದ್ದು, ಇನ್ನು ಇವರು ಬೆಂಗಳೂರಿನಲ್ಲಿಯೇ ನೆಲೆಸಲಿದ್ದು ಇಲ್ಲಿಯೂ ತರಬೇತಿಯನ್ನು ನೀಡುವ ಅಭಿಲಾಷೆ ಹೊಂದಿದ್ದಾರೆ. ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಫೌಂಡೇಶನ್ ಇಂತಹ ಕಲಾವಿದರನ್ನು ಗುರುತಿಸಿ ಪೊ್ರೀತ್ಸಾಹ...

ಮೈಸೂರು ರಾಜ್ಯದ ಹೆಸರನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಿದ ಬಗ್ಗೆ ಅಧಿಕೃತವಾಗಿ ಹೊರಡಿಸಿದ ಆದೇಶದ ಪ್ರತಿ☝🏻☝:-

Image

ಧಾರವಾಡಕ್ಕೆ ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಮಂಜೂರು:-

Published 16-Jan-2016 20:12 IST ಬೆಂಗಳೂರು: ಐಐಟಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಧಾರವಾಡಕ್ಕೆ ಮತ್ತೊಂದು ಬಂಪರ್ ಕೊಡುಗೆ ಸಿಕ್ಕಿದೆ. ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರವನ್ನ ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ದಕ್ಷಿಣ ಪ್ರಾದೇಶಿಕ ಸಮಾಲೋಚನೆ ಸಭೆ ನಡೆಯಿತು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಧಾರವಾಡದಲ್ಲಿ ತೆರೆಯುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಅದರಂತೆ ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ಡಿಪಿಆರ್ ಸಲ್ಲಿಸಿದರೆ. ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ದೇಶದಲ್ಲಿ ವಾರ್ಷಿಕ 226 ಲಕ್ಷ ಟನ್ ಆಹಾರ ಧಾನ್ಯ ಬೇಕಾಗಿದೆ, ಆದರೆ 40 ಲಕ್ಷ ಟನ್ ಆಹಾರ ಧಾನ್ಯಗಳ ಕೊರತೆ ಉಂಟಾಗಿದೆ. ಉತ್ಪಾದನೆ ಕುಂಠಿತವಾಗಿರುವುದರಿಂದ ಆಹಾರ ಧಾನ್ಯದ ಬೆಲೆ ಗಗನಕ್ಕೇರಿದೆ. ಕಾಳಸಂತೆಯಲ್ಲಿ ಆಹಾರ ಧಾನ್ಯದ ಮಾರಾಟವೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಅಕ್ರಮ ಆಹಾರ ದಾಸ್ತಾನು ಪತ್ತೆ ಹಚ್ಚುವ ಅಭಿಯಾನ ...

2016ರ ಫಿಲ್ಮ್ಫೇರ್ ಪ್ರಶಸ್ತಿ ಪ್ರಕಟ : ರಣವೀರ್, ದೀಪಿಕಾ ಅತ್ಯುತ್ತಮ ನಟ, ನಟಿ:*-

Image
ಮುಂಬೈ, ಜ.16-ಭಾರತೀಯ ಚಲನಚಿತ್ರರಂಗದಲ್ಲಿ ಅತ್ಯುತ್ತಮ ನಟನೆಗೆ ನೀಡಲಾಗುವ ಪ್ರತಿಷ್ಠಿತ ಫಿಲ್ಮ್ಫೇರ್ ಪ್ರಶಸ್ತಿಯು ಈ ಬಾರಿ ಕನ್ನಡದ ನಟಿ ದೀಪಿಕಾ ಪಡುಕೋಣೆಗೆ ಲಭಿಸಿದೆ. ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ಬಾಜಿರಾವ್ಮಸ್ತಾನಿ ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ 2016ನೆ ಸಾಲಿನ ಫಿಲ್ಮ್ಫೇರ್ ಪ್ರಶಸ್ತಿಯು ದೀಪಿಕಾ ಪಡುಕೋಣೆಗೆ ಸಿಕ್ಕಿದೆ. ಕಳೆದ ರಾತ್ರಿ ಮುಂಬೈನ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಜಿರಾವ್ ಮಸ್ತಾನಿ ಒಟ್ಟು 9 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಸುಜಿತ್ ಸಿರ್ಕರ್ ನಿರ್ದೇಶನದ ಪಿಕು ಚಿತ್ರ ಐದು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡರೆ, ಧೂಮ್ ಲಗಾಕಾ ಐಸಾ ಚಿತ್ರಕ್ಕೂ ಪ್ರಶಸ್ತಿ ಲಭಿಸಿದೆ. 2015ನೆ ಸಾಲಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯು ಬಾಜಿರಾವ್ ಮಸ್ತಾನಿ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆಗೆ ಬಂದರೆ, ಅತ್ಯುತ್ತಮ ನಟ ಪ್ರಶಸ್ತಿಯು ಪಿಕು ಚಿತ್ರಕ್ಕಾಗಿ ರಣವೀರ್ ಸಿಂಗ್ರ ಪಾಲಾಗಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ ಸೇರಿದಂತೆ ಒಟ್ಟು 9 ವಿಭಾಗಗಳಲ್ಲಿ ಬಾಜೀರಾವ್ ಮಸ್ತಾನಿ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಜೀವಮಾನ ಸಾಧನ ಪ್ರಶಸ್ತಿಯು ಈ ಬಾರಿ ಹಿರಿಯ ನಟ ಮೌಶಮಿ ಚಟರ್ಜಿಗೆ ಬಂದರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂಜಯ್ಲೀಲಾ ಬನ್ಸಾಲಿ, ಉತ್ತಮ ಸಂಭಾಷಣೆಗಾಗಿ...

ಜಾರ್ಖಂಡ್ ರಾಜ್ಯ ಪಠ್ಯದಲ್ಲಿ ಧೋನಿ, ದೀಪಿಕಾ ಅಧ್ಯಾಯ:-

ರಾಂಚಿ: ಶಾಲಾ ಪಠ್ಯದಲ್ಲಿ ರಾಂಚಿ ಮೂಲದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಆರ್ಚರಿ ಪಟು ದೀಪಿಕಾ ಕುಮಾರಿ ಮತ್ತು ಮಾಜಿ ಹಾಕಿ ನಾಯಕ ಜೈಪಾಲ್ ಸಿಂಗ್ ಮುಂಡಾ ಕುರಿತು ಜಾರ್ಖಂಡ್ ವಿದ್ಯಾಥಿರ್ರ್ಗಳು ಶೀಘ್ರದಲ್ಲೇ ಅಧ್ಯಯನ ನಡೆಸಲಿದ್ದಾರೆ ಎಂದು ಅಲ್ಲಿನ ಶೈಕ್ಷಣಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೂತನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ಹೊಸ ಪಠ್ಯದಲ್ಲಿ ಎರಡರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಇವರ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. 1928ರಲ್ಲಿ ಭಾರತ ಹಾಕಿ ತಂಡದ ನಾಯಕರಾಗಿದ್ದ ಮುಂಡಾ ಅದೇ ವರ್ಷ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ನಂತರ ಅವರು ಆದಿವಾಸಿ ಮಹಾಸಭಾ ಎಂಬ ಬುಡಕಟ್ಟು ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಇವರಲ್ಲದೆ, ಹೊಸ ಪುಸ್ತಕದಲ್ಲಿ ಪರ್ವತರೋಹಿ ಬಚೇಂದ್ರಿಯಾ ಪಾಲ್ ಮತ್ತು ಪ್ರೇಮಲತಾ ಅಗರ್ವಾಲ್ ಅವರ ಬಗ್ಗೆಯೂ ತಿಳಿಸಲಾಗಿದೆ.

ಟೆನಿಸ್: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸತತ 29 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ಬರೆದ ಸಾನಿಯಾ-ಹಿಂಗಿಸ್ ಜೋಡಿ

Image

ಸಿಕ್ಕಿಂ ಸಂಪೂರ್ಣ ಸಾವಯವ ರಾಜ್ಯ

Image

ದೇಶದಲ್ಲಿ ಅತಿ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ :

Image

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಮಾರ್ಚ್ 1 ರಿಂದ 5, 2016

Image

Wanted 102 Asst Professors in SHIMOGA INSTITUTE OF MEDICAL SCIENCE

Image

Bangalore city civil police constable recruitment -2014, 2 nd provisional selection list announced ☝🏻☝🏻☝🏻 *

Image
www.bcp.gov.in/doc/BCP%20PROVISIONAL%20SELECTION%20LIST.pdf

ಸಿಇಟಿ: ಇಂದಿನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2016-17ನೇ ಸಾಲಿನ ವೈದ್ಯ, ದಂತ ವೈದ್ಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರಂಸೈನ್ಸ್, ಬಿ-ಫಾರ್ಮಾ, ಫಾರ್ಮಾ-ಡಿ ಮತ್ತಿತರ ವೃತ್ತಿಪರ ಪದವಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಪ್ರವೇಶಾರ್ಹತೆಯ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡುವ ಕುರಿತು ಮಾರ್ಗದರ್ಶನ ನೀಡುವ ಮಾಹಿತಿ ಪುಸ್ತಿಕೆಯನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಜ.13ರಿಂದ ಫೆ.13ರವರೆಗೆ ಒಂದು ತಿಂಗಳ ಕಾಲಾವಧಿ ಇದೆ. ಅಭ್ಯರ್ಥಿಗಳು ಮಾರ್ಗಸೂಚಿಯನ್ನು ಓದಿ ಖಾಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡುವ ಬಗ್ಗೆ ಪೂರ್ಣ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡ ನಂತರವೇ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಲು ಸೂಚಿಸಲಾಗಿದೆ. ಅರ್ಜಿ ತುಂಬುವಾಗ ಎಚ್ಚರಿಕೆ ವಹಿಸಿ ಅರ್ಜಿಯಲ್ಲಿ ಅಭ್ಯರ್ಥಿ ನೀಡುವ ವಿವರ ಅವಲಂಬಿಸಿ ಮುಂದಿನ ಸೀಟು ಹಂಚಿಕೆಯ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆ ಸಲ್ಲಿಸಿದ ವಿವರ ಬದಲಾಯಿಸಲು ಅವಕಾಶವಿಲ್ಲ. ಚಲನ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವನ್ನು ನಿಗದಿತ ಬ್ಯಾಂಕ್‌ನಲ್ಲಿ ಪಾವತಿಸುವ ಕೊನೆಯ ದಿನ ಫೆ.15 ಮತ್ತು ಪ್ರವೇಶಪತ್ರವನ್ನು ಏ.15ರಿಂದ ಡೌನ...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ - 2016:-

Image
🎄ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ. 👇🏻👇🏻👇🏻👇🏻👇🏻 🌷 ಸಹಾಯಕ ಲೆಕ್ಕಿಗ 👉🏻 71 ಹುದ್ದೆಗಳು. 🎓ವಿದ್ಯಾರ್ಹತೆ 👉🏻 ಅಂಗೀಕೃತವಾದ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ವಿಷಯದಲ್ಲಿ ಪಡೆದ ಪದವಿ ಹಾಗೂ ಗಣಕ ಯಂತ್ರದ ಜ್ಞಾನವನ್ನು ಹೊಂದಿರಬೇಕು. 🌷 ಸಹಾಯಕ ಸಂಚಾರ ನಿರೀಕ್ಷಕ👉🏻 128 ಹುದ್ದೆಗಳು. 🎓 ವಿದ್ಯಾರ್ಹತೆ 👉🏻 ಪಿ.ಯು.ಸಿ ಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗಿರಬೇಕು. 🎓 ದೇಹದಾರ್ಡ್ಯತೆ👉🏻  ಎತ್ತರ 163 ಸೆಂ.ಮೀ ಹಾಗೂ ತೂಕ 55 ಕೆ.ಜಿ (ಪುರುಷರಿಗೆ), ಎತ್ತರ 153 ಸೆಂ.ಮೀ ಹಾಗೂ ತೂಕ 50 ಕೆ.ಜಿ ( ಮಹಿಳೆಯರಿಗೆ) 🌷 ಸಹಾಯಕ ಉಗ್ರಾಣ ರಕ್ಷಕ 👉🏻 34 ಹುದ್ದೆಗಳು. 🎓 ವಿದ್ಯಾರ್ಹತೆ 👉🏻 ಸರ್ಕಾರದಿಂದ ಮಾನ್ಯತೆ ಪಡೆದ ಒಂದು ಸಂಸ್ಥೆಯಿಂದ ಮೆಕ್ಯಾನಿಕಲ್ / ಆಟೋಮೊಬೈಲ್ ನಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು. 🌷 ಅಂಕಿ ಅಂಶ ಸಹಾಯಕ 👉🏻 41 ಹುದ್ದೆಗಳು. 🎓ವಿದ್ಯಾರ್ಹತೆ👉🏻ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಒಂದು ಸಂಸ್ಥೆಯಿಂದ ಸಂಖ್ಯಾಶಾಸ್ತ್ರ,  ಬಿ.ಸಿ.ಎ, ಬಿ.ಎಸ್.ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಮೂರು ವರ್ಷದ ಪದವಿ ಹೊಂದಿರಬೇಕು. 🌷 ವಯೋಮಿತಿ 👉🏻 35 ವರ್ಷ [GM] 38 ವರ್ಷ👉🏻2 A,  2 B, 3 A, 3 B] 40 ವರ್ಷ 👉🏻 SC, ST, CAT -1 [ಕನಿಷ್ಟ 18 ವರ್ಷ ] ...

ಆಧ್ಯಾತ್ಮಿಕ ಸಂದೇಶದ ಸಂಕ್ರಾಂತಿ

Image

ಸ್ಪರ್ಧಾತ್ಮಕ ಪರೀಕ್ಷೆ :ರೀಸನಿಂಗ ಪ್ರಶ್ನೋತ್ತರಗಳು

Image

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯುಲ್ಲಿ ಖಾಲಿ ಇರುವ 441 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ :ಸಂಪೂರ್ಣ ಮಾಹಿತಿ ದಿ 16/01/2016 ರಿಂದ ವೆಬ್ನಲ್ಲಿ ಲಭ್ಯ

www.mesco.in

ತ್ರಿಪುರಾ ಸಿ.ಎಂ ಗೆ ‘ಬಸವ ಕೃಷಿ ಪ್ರಶಸ್ತಿ’

Image
10 Jan, 2016 ಪ್ರಜಾವಾಣಿ ವಾರ್ತೆ ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ನೀಡಲಾಗುವ 'ಬಸವ ಕೃಷಿ ಪ್ರಶಸ್ತಿ'ಗೆ ಈ ಬಾರಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು, ತಾಮ್ರ ಪತ್ರದ ಸ್ಮರಣಿಕೆಯನ್ನು ಒಳಗೊಂಡಿದೆ. ಮಾರ್ಚ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾಣಿಕ್ ಅವರು ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೆಸರಾಗಿದ್ದಾರೆ. ಕೃಷಿಕರು, ಕಾರ್ಮಿಕರು ಹಾಗೂ ಶ್ರಮಿಕರ ಪರವಾಗಿ ಕೆಲಸ ಮಾಡುತ್ತಿರುವ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

Notification for Recruitment to various posts of Teachers(88 posts) in UAS, Raichur

Image

Circular regarding celeberation of Republic Day in all the schools on 26-01-2016.

Image
www.schooleducation.kar.nic.in/pdffiles/RepublicDay080116.pdf

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ - 2016 ಸಶಸ್ತ್ರ ಮೀಸಲು ಪೊಲೀಸ್ ಪಡೆಗಳಲ್ಲಿ ( CAR/ DAR) ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ.

Image
🏻🏻🏻🏻🏻 ಮೈಸೂರು ನಗರ 🏻 300 ಹುಬ್ಬಳ್ಳಿ - ಧಾರವಾಡ ನಗರ 🏻 236 ಮಂಗಳೂರು ನಗರ 🏻 342 ಬೆಂಗಳೂರು ಜಿಲ್ಲೆ 🏻 95 ಬೆಳಗಾವಿ ನಗರ🏻 147 ಚಿಕ್ಕಮಗಳೂರು 🏻 32 ಕೋಲಾರ 🏻 44 ಮಂಡ್ಯ 🏻 98 ದಕ್ಷಿಣ ಕನ್ನಡ ( ಮಂಗಳೂರು) 🏻 24 🌷 ಶಿವಮೊಗ್ಗ 👉🏻 104 🌷 ತುಮಕೂರು 👉🏻 74 🌷 ಬೆಂಗಳೂರು ನಗರ [CAR, ಉತ್ತರ ] 👉🏻 142 📢 ಒಟ್ಟು 1638 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಇನ್ನೂ1146 ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಮುಂದಿನ ಅಧಿಸೂಚನೆಯಲ್ಲಿ ತುಂಬಿಕೊಳ್ಳಲಾಗುವುದು. ಇಲ್ಲಿ ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. 🎄ನಾಗರಿಕ ( ಸಿವಿಲ್) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಜಿಲ್ಲಾವಾರು ವರ್ಗೀಕರಣ ಈ ಕೆಳಗಿನಂತಿದೆ 👇🏻👇🏻👇🏻👇🏻👇🏻 🌷 ಮೈಸೂರು ನಗರ 👉🏻 367 [ ಪುರುಷ 294, ಮಹಿಳೆಯರು 73] 🌷 ಹುಬ್ಬಳ್ಳಿ - ಧಾರವಾಡ ನಗರ 👉🏻 170 [ ಪುರುಷ 136, ಮಹಿಳೆಯರು 34] 🌷 ಮಂಗಳೂರು ನಗರ 👉🏻 169 [ ಪುರುಷ 136, ಮಹಿಳೆಯರು 33] 🌷 ಬೆಂಗಳೂರು ನಗರ 👉🏻119 [ ಪುರುಷ 96, ಮಹಿಳೆಯರು 23] 🌷 ಬೆಳಗಾವಿ 👉🏻 355 [ ಪುರುಷ 284, ಮಹಿಳೆಯರು 71] 🌷 ಚಿಕ್ಕಮಗಳೂರು 👉🏻114 [ ಪುರುಷ 91, ಮಹಿಳೆಯರು 23] 🌷 ಕೋಲಾರ 👉🏻 48 [ ಪುರುಷ 39, ಮಹಿ...

ಎತ್ತಿನಹೊಳೆಗೆ ಗ್ರೀನ್ ಸಿಗ್ನಲ್ ಕಾಮಗಾರಿ ಆರಂಭಕ್ಕೆ ಹಸಿರು ಪೀಠ ಷರತ್ತಿನ ಅಸ್ತು;

Image
ಎತ್ತಿನಹೊಳೆ ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಹಾದಿ ಸುಗಮವಾಗಿದೆ. ನೇತ್ರಾವತಿ ನದಿಯಿಂದ ಬಯಲು ಸೀಮೆಯ ಪ್ರದೇಶಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಚೆನ್ನೈನ ಹಸಿರುಪೀಠ ಹಸಿರು ನಿಶಾನೆ ತೋರಿಸಿದೆ. ಇದರೊಂದಿಗೆ ಅರ್ಧಕ್ಕೆ ನಿಂತಿದ್ದ ಬಹು ನಿರೀಕ್ಷಿತ ಯೋಜನೆಗೆ ಎದುರಾಗಿದ್ದ ಎಲ್ಲಾ ಅಡ್ಡಿ, ಆತಂಕಗಳೂ ನಿವಾರಣೆಯಾಗಿದೆ. ಎರಡು ದಿನಗಳ ಹಿಂದಷ್ಟೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಯೋಜನೆಯನ್ನು ಮುಂದುವರಿಸಲು ಅನುಮತಿ ನೀಡಿದ್ದು, ಇದನ್ನಾಧರಿಸಿ ಹಸಿರು ಪೀಠ ಕೂಡ ಯೋಜನೆ ಗೆ ಅಸ್ತು ಎಂದಿದೆ. ಇದರಿಂದಾಗಿ ಕಾಮಗಾರಿ ಮುಂದು ವರಿಸಲು ಅವಕಾಶ ಸಿಕ್ಕಿದಂತಾಗಿದೆ. ಆದರೆ 13.93 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಆರಂಬಿsಸಲು ಇನ್ನೂ ಕೆಲವು ಸಮಯ ಬೇಕು. ಕಾರಣ ಅರಣ್ಯ ಭಾಗದಲ್ಲಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರ ಪರಿಸರ ಇಲಾಖೆ ವಿಧಿಸಿರುವ ಕೆಲವು ಷರತ್ತುಗಳನ್ನು ಪೂರೈಸಬೇಕಿದೆ. ಇದೇ ವೇಳೆ, ಯೋಜನೆ ವಿರೋಧಿಸಿ ಮಂಗಳೂರು, ತುಮಕೂರು ಮತ್ತು ಹಾಸನದಿಂದ ಯತಿರಾಜ್, ಕಿಶೋರ್ ಮತ್ತು ಸೋಮಶೇಖರ್ ಎಂಬ ಪರಿಸರವಾದಿಗಳು ಹಸಿರು ಪೀಠಕ್ಕೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಕೂಡ ವಜಾಗೊಂಡಿದ್ದು, ಉಳಿದಿರುವ ಕೆಲವು ತಾಂತ್ರಿಕ ವಿಚಾರಗಳ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದೆ. ಹೀಗಾಗಿ ಯೋಜ...

ಪ್ರಿಯಾಂಕಾ ಚೋಪ್ರಾ, ಅಮೆರಿಕದ ಜನಪ್ರಿಯ ಧಾರಾವಾಹಿ ‘ಕ್ವಾಂಟಿಕೊ’ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ

Image
ನಟಿ ಪ್ರಿಯಾಂಕಾಗೆ ಪ್ರಶಸ್ತಿ 8 Jan, 2016 ಲಾಸ್‌ ಏಂಜಲಿಸ್‌ (ಪಿಟಿಐ):  ಹಿಂದಿ ಚಿತ್ರ ತಾರೆ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಜನಪ್ರಿಯ ಧಾರಾವಾಹಿ 'ಕ್ವಾಂಟಿಕೊ'ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಲಿವುಡ್‌ ತಾರೆಯರಾದ ಎಮ್ಮಾ ರಾಬರ್ಟ್ಸ್‌, ಜಾಮಿ ಲೀ ಕರ್ಟಿಸ್‌, ಲೀ ಮಿಷೆಲೆ ಮತ್ತು ಮಾರ್ಸಿಯಾ ಹಾರ್ಡನ್‌ರಂತಹ ನಟಿಯರನ್ನು ಹಿಂದಿಕ್ಕಿ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 'ಜನರ ಆಯ್ಕೆಯ ಪ್ರಶಸ್ತಿ'ಗೆ ಭಾಜನರಾದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ತಮಗೆ ಮತ ಹಾಕಿ ಬೆಂಬಲಿಸಿದ ಎಲ್ಲರಿಗೂ ಪ್ರಿಯಾಂಕಾ ಟ್ವಿಟ್ಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. 'ನಾನು ತುಂಬಾ ಅದೃಷ್ಟವಂತೆ. ನನಗೆ ಮತಹಾಕಿದ ಎಲ್ಲರಿಗೂ ಧನ್ಯವಾದಗಳು. ನೀವಿಲ್ಲದೆ ನಾನು ಏನೂ ಅಲ್ಲ' ಎಂದು ಪ್ರಿಯಾಂಕಾ, ಪ್ರಶಸ್ತಿ ಹಿಡಿದುಕೊಂಡ ಚಿತ್ರದೊಂದಿಗೆ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ 'ಕ್ವಾಂಟಿಕೊ' ಸರಣಿಯಲ್ಲಿ ಪ್ರಿಯಾಂಕಾ, ಭಯೋತ್ಪಾದನಾ ದಾಳಿಯ ಪ್ರಮುಖ ಶಂಕಿತ ಆರೋಪಿ ಅಲೆಗ್ಸಾಂಡ್ರಾ ಪಾರಿಶ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.