Posts

ವಾಟ್ಸಾಪ್ನಲ್ಲಿ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊ ಸೆಂಡ್ ಹೇಗೆ?

| Thu, Sep 22, 2016, 9:09 [IST] ವಾಟ್ಸಾಪ್ ಪ್ರಪಂಚದಲ್ಲೇ ಪ್ರಖ್ಯಾತವಾಗಿರುವ ಮೆಸೇಜಿಂಗ್ ಆಪ್ ಆಗಿದೆ. ಅಲ್ಲದೇ ಬಹುತೇಕ ಸ್ಮಾರ್ಟ್ಫೋನ್ ವೇದಿಕೆಗಳಲ್ಲಿ ಲಭ್ಯವಿದ್ದು, ಆದರೆ ಕೆಲವು ನಿರ್ಬಂಧಗಳು ಸಹ ಇವೆ. ಇತ್ತೀಚೆಗೆ ವಾಟ್ಸಾಪ್ ಹಲವು ಬದಲಾವಣೆಗಳನ್ನು ತಂದಿದ್ದು, ಅವುಗಳೆಂದರೆ ರಿಫ್ರೆಶ್ಡ್ UI, ಕರೆ ಆಪ್ಶನ್, ಹೆಚ್ಚಿನ ಎಮೋಜಿಗಳು ಮತ್ತು ಅಕ್ಷರಗಳ ವಿನ್ಯಾಸಗಳು. ಅಲ್ಲದೇ ವೀಡಿಯೊ, ಆಡಿಯೋ ಮತ್ತು ಸ್ಥಳದ ಮಾಹಿತಿಯನ್ನು ಇತರರಿಗೆ ಕಳುಹಿಸುವ ಫೀಚರ್ ಅನ್ನು ಸಹ ಹೊಂದಿದೆ. ವಾಟ್ಸಾಪ್ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್ ಮಾಡಿದರೆ ಏನಾಗಬಹುದು ಗೊತ್ತೇ? ವಾಟ್ಸಾಪ್(WhatsApp) ಹಲವು ಫೀಚರ್ಗಳನ್ನು ಹೊಂದಿದ್ದರೂ ಸಹ ವೀಡಿಯೊ, ಆಡಿಯೋ ಫೈಲ್ಗಳು 16MB ಗಿಂತ ಹೆಚ್ಚಿನ ಸೈಜ್ ಇದ್ದಲ್ಲಿ ಇತರರಿಗೆ ಕಳುಹಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ , ವಿಂಡೋಸ್ ಮತ್ತು ಐಓಎಸ್ ಬಳಕೆದಾರರು ತಮ್ಮ ವಾಟ್ಸಾಪ್ ಆಪ್ ಮೂಲಕ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊವನ್ನು ಇತರರಿಗೆ ಕಳುಹಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಕೆಳಗಿನ ಹಂತಗಳನ್ನು ಓದಿ ತಿಳಿಯಿರಿ. www.freegksms.blogspot.in ಹಂತ 1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಿಂದ 'ಆಂಡ್ರಾಯ್ಡ್ ವೀಡಿಯೊ ಕನ್ವರ್ಟರ್' ಆಪ್ ಅನ್ನು ನಿಮ್ಮ ಡಿವೈಸ್ಗೆ ಇನ್ಸ್ಟಾಲ್ ಮಾಡಿಕ

*ಮಕ್ಕಳ ಆಧಾರ್‌ ನೋಂದಣಿಗೆ ಬಂತು ಟ್ಯಾಬ್ಲೆಟ್‌*! Sep 22, 2016,

*ಮಕ್ಕಳ ಆಧಾರ್‌ ನೋಂದಣಿಗೆ 2 ಸಾವಿರ ಟ್ಯಾಬ್ಲೆಟ್‌* * *ಅಂಗನವಾಡಿ ಮೇಲ್ವಿಚಾರಕರಿಗೆ ವಿತರಣೆ** *ಟ್ಯಾಬ್ಲೆಟ್‌ ಖರೀದಿಗೆ 4.08 ಲಕ್ಷ ರೂ. ವೆಚ್ಚಅಂಗನವಾಡಿ ಕೇಂದ್ರಗಳಲ್ಲಿ ಆರಂಭವಾಗಿರುವ ನೋಂದಣಿ*ಡಿ. 31ರ ವೇಳೆಗೆ 41 ಲಕ್ಷ ಮಕ್ಕಳ ನೋಂದಣಿ ಗುರಿ* ಬೆಂಗಳೂರು ನವಜಾತ ಶಿಶು ಸೇರಿದಂತೆ ಆರು ವರ್ಷದೊಳಗಿನ ಎಲ್ಲ ಮಕ್ಕಳ ಆಧಾರ್‌ ನೋಂದಣಿ ಕಾರ್ಯಕ್ಕೆ 2 ಸಾವಿರ ಟ್ಯಾಬ್ಲೆಟ್‌ಗಳನ್ನು (ಕಿರು ಕಂಪ್ಯೂಟರ್‌) ಇ-ಆಡಳಿತ ಇಲಾಖೆ ಖರೀದಿಸಿದೆ. ಈಗಾಗಲೇ ಅಂಗನವಾಡಿಗಳಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಿದ್ದು, ನೋಂದಣಿ ಕಾರ್ಯ ಆರಂಭವಾಗಿದೆ. (Mallikarjun Hulasur) ಸರಕಾರಿ ಸವಲತ್ತು ಪಡೆಯಲು ಬಹುಮುಖ್ಯ ಆಧಾರವಾಗಿರುವ 'ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಆಧಾರ್‌) ಡಿ. 31ರೊಳಗೆ ಎಲ್ಲ ಮಕ್ಕಳಿಗೆ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜತೆಗೂಡಿ 'ಇಂಟೆಲಿಕ್‌ ಸಿಸ್ಟಂ' ಎಂಬ ಕಂಪೆನಿಯಿಂದ 2 ಸಾವಿರ ಟ್ಯಾಬ್ಲೆಟ್‌ಗಳನ್ನು ಖರೀದಿಸಲಾಗಿದೆ. ಟ್ಯಾಬ್ಲೆಟ್‌ ಮತ್ತು ಬೆರಳಚ್ಚು ಮುದ್ರಣದ ಪರಿಕರಗಳ ಖರೀದಿಗೆ 4.08 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಮೊತ್ತವನ್ನು ಇ-ಆಡಳಿತ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಭರಿಸಿವೆ. ರಾಜ್ಯದಲ್ಲಿ 61,187 ಅಂಗನವಾಡಿಗಳು ಮತ್ತು 3331 ಮಿನಿ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸುಮಾರು 41 ಲಕ್ಷ ಮಕ

ಮೆಟ್ರೊ ನೇಮಕ 'ಕೀ-ಉತ್ತರ ಪ್ರಕಟ' Sep 22, 2016, 04.00 AM IST

Image
metro A A A ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ ಖಾಲಿ ಇರುವ ಮೇಂಟೇನರ್ಸ್‌, ಟ್ರೈನ್ ಆಪರೇಟರ್ಸ್‌ ಮತ್ತು ಸೆಕ್ಷನ್ ಎಂಜಿನಿಯರ್‌ಗಳ ಹುದ್ದೆ ಭರ್ತಿಗೆ ಸೆ. 18ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ - ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕೀ- ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಸಕ್ತರು ಇ-ಮೇಲ್ ವಿಳಾಸ:.  keauthority-ka@nic.in  (mail should be titled as BMRCL-2016 - Objection - Subject) on or before 26-09-2016 before 5.30 pm.   ಮೂಲಕ ಸೆ. 26ರಂದು ಸಂಜೆ 5.30ರೊಳಗೆ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸುವಾಗ ಪರೀಕ್ಷಾ ವಿಷಯ, ಮಾಸ್ಟರ್ ಪತ್ರಿಕೆಯ ಪ್ರಶ್ನೆ ಸಂಖ್ಯೆಯ ಜತೆಗೆ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಧಾರರಹಿತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಪ್ರಾಧಿಕಾರದ ವೆಬ್‌ಸೈಟ್ ವಿಳಾಸ. kea.kar.nic.in

ಸ್ವಾತಂತ್ರ್ಯ ಯೋಧರ ಪಿಂಚಣಿ ಏರಿಕೆ ಏಜೆನ್ಸೀಸ್ | Sep 22, 2016, 04.00 AM IST

Image
hike-contribution-to-ensure-rs-1000-minimum-pension-epfo-to-government A A A ಹೊಸದಿಲ್ಲಿ: ಸ್ವಾತಂತ್ರ್ಯ ಯೋಧರ ಮಾಸಿಕ ಪಿಂಚಣಿಯನ್ನು ಶೇಕಡ 20ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅಸ್ತು ಎಂದಿದೆ. ಈ ಬಾರಿ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 'ಫ್ರೀಡಂ ಫೈಟರ್‌'ಗಳ ಪಿಂಚಣಿ ಹೆಚ್ಚಿಸುವ ಭರವಸೆ ನೀಡಿದ್ದರು. ಅದೀಗ ಈಡೇರಿದ್ದು, ಪರಿಷ್ಕೃತ ಪಿಂಚಣಿಯು ಆಗಸ್ಟ್‌ಗೆ ಪೂರ್ವಾನ್ವಯವಾಗುವಂತೆ ಸ್ವಾತಂತ್ರ್ಯ ಯೋಧರಿಗೆ, ವಿಧವಾ ಪತ್ನಿಯರಿಗೆ, ಇಲ್ಲವೇ ಕುಟುಂಬದ ಅವಲಂಬಿತರ ಕೈಸೇರಲಿದೆ. ಅಂಡಮಾನ್‌ ಜೈಲು ಸೇರಿದ್ದ ಹೋರಾಟಗಾರರ ಪಿಂಚಣಿಯನ್ನು 24,775 ರೂ.ನಿಂದ 30,000ರೂ.ಗೆ ಏರಿಸಲಾಗಿದ್ದರೆ, ಬ್ರಿಟಿಷ್‌ ವ್ಯಾಪ್ತಿಯ ಹೊರತಾದ ಪ್ರದೇಶಗಳಲ್ಲಿ ಶಿಕ್ಷೆ ಅನುಭವಿಸಿದ ದೇಶಭಕ್ತರ ಪಿಂಚಣಿಯನ್ನು 23,085 ರೂ.ನಿಂದ 28,000 ರೂ.ಗೆ ಏರಿಕೆ ಮಾಡಲಾಗಿದೆ. ಉಳಿದಂತೆ ಇಂಡಿಯನ್‌ ನ್ಯಾಷನಲ್‌ ಆರ್ಮಿ ಸದಸ್ಯರೂ ಸೇರಿ ಇತರ ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು 21,395 ರೂ.ನಿಂದ 26,000 ರೂ.ಗೆ ಹೆಚ್ಚಿಸಲಾಗಿದೆ

ಕೆ–ಸೆಟ್‌: ಡಿಸೆಂಬರ್‌ 11ಕ್ಕೆ ಪರೀಕ್ಷೆ 21 Sep, 2016:-ಪ್ರಜಾವಾಣಿ ವಾರ್ತೆ

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಗೆ (ಕೆ–ಸೆಟ್‌) ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಪರೀಕ್ಷೆ ಡಿ. 11ರಂದು ನಡೆಯಲಿದೆ. ಪ್ರಕ್ರಿಯೆ ಸೆ. 26ರಂದು ಆರಂಭವಾಗಲಿದ್ದು, ದಂಡಶುಲ್ಕ ರಹಿತವಾಗಿ ಅ. 25 ಮತ್ತು ದಂಡ ಸಹಿತವಾಗಿ ನ. 4ರ ವರೆಗೆ (ಸಂಜೆ 5 ಗಂಟೆ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ವರ್ಗ ₹ 1,050, ಪ್ರವರ್ಗ 2ಎ, 2ಬಿ, 3ಎ, 3ಬಿ ₹ 850 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1, ಅಂಗವಿಕಲ ಅಭ್ಯರ್ಥಿಗಳಿಗೆ ₹ 550 ಪರೀಕ್ಷಾ ಶುಲ್ಕ ನಿಗಪಡಿಸಲಾಗಿದೆ. ₹ 150 ದಂಡಶುಲ್ಕ ಪಾವತಿಸಿ ನ. 4ರ ವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸ್ವವಿವರ ಮತ್ತು ಶೈಕ್ಷಣಿಕ ಮಾಹಿತಿ ನೋಂದಣಿ ಮಾಡಿದ ನಂತರ, ಕೆನರಾ ಬ್ಯಾಂಕ್‌ ಶಾಖೆಗಳಲ್ಲಿ ಅಥವಾ ಡೆಬಿಟ್‌, ಕ್ರೆಡಿಟ್‌, ನೆಟ್‌ಬ್ಯಾಂಕಿಂಗ್‌, ನೆಫ್ಟ್‌ ಮೂಲಕ ಶುಲ್ಕ ಪಾವತಿಸಬಹುದು. ಶುಲ್ಕ ಪಾವತಿಸಿದ ನಂತರ ಅರ್ಜಿ ಮತ್ತು ರಸೀತಿ, ಚಲನ್‌, ಹಾಜರಾತಿ ಪ್ರತಿಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅರ್ಜಿ ಪ್ರತಿ, ಹಾಜರಾತಿ ಪತ್ರ, ಅಂಕಪಟ್ಟಿ, ಇತರ ದಾಖಲೆಗಳನ್ನು ಎ–4 ಲಕೋಟೆಯಲ್ಲಿ ನ. 10ರ ಒಳಗೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ನೋಡೆಲ್‌ ಅಧಿಕಾರಿಗೆ ಸಲ್ಲಿಸಬೇಕು. ವಿವಿಧ 39 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ,

*ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯಕ್ಕೆ "ಅಕ್ಕಮಹಾದೇವಿ ವಿಶ್ವವಿದ್ಯಾಲಯ" ಎಂದು ಸರ್ಕಾರ ನಾಮಕರಣ ಮಾಡಿದೆ*☝

Image

5,311 ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕ

Image
Sep 21, 2016, 04.00 AM IST police-costables A A A ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ / ಈ ಬಾರಿ ಲಿಖಿತ ಪರೀಕ್ಷೆ ಮೊದಲು * ನಾಗರಿಕ ಪೊಲೀಸ್‌ ಕನ್ಸ್‌ಟೇಬಲ್‌ -3477 * ಸಶಸ್ತ್ರ ಪೊಲೀಸ್‌ ಕನ್ಸ್‌ಟೇಬಲ್‌- 1834 ರಾಜ್ಯ ಪೊಲೀಸ್‌ ಇಲಾಖೆಯಲ್ಲೀಗ ಉದ್ಯೋಗ ಸುಗ್ಗಿ. ಎರಡು ದಿನಗಳ ಹಿಂದೆ 544 ಸಬ್‌ಇನ್ಸ್‌ ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದ ಇಲಾಖೆಯು ಇದೀಗ ಬರೋಬ್ಬರಿ 5,311 ಪೊಲೀಸ್‌ ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್‌ 21ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್‌ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹತೆಗಳೇನು? ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 19ರಿಂದ 27 ವರ್ಷ. ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ರಿಂದ 27 ವರ್ಷ. ಎಸ್‌ಎ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 2 ವರ್ಷ ಹಾಗೂ ಬುಡಕಟ್ಟು ಜ

Breaking News - *SSA TO NONPLAN POST ಗೆ ಹೋಗಲು ಕೆ ಎ ಟಿ ಆದೇಶ*: KAT ಗೆ ಹೋಗಿ *ಮಧ್ಯಂತರ ಆದೇಶ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ* ಸೀಮಿತಗೊಳಿಸಿ ಇಲಾಖೆ ಅನುಮತಿ ನೀಡಿದೆ.

Image

1999 ರೂ.ಗೆ ಜಿಯೊ 4G ಹಾಟ್ ಸ್ಪಾಟ್ ಡಿವೈಸ್ September 18, 2016

Image
ಮುಂಬೈ. ಸೆ.18 :  ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಖರೀದಿ ಕಷ್ಟದ ಕೆಲಸ. ನಿರೀಕ್ಷೆಗಿಂತ ಹೆಚ್ಚು ಬೇಡಿಕೆ ಇರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಸಿಮ್ ನೀಡಲಾಗುತ್ತಿಲ್ಲ. ಈ ನಡುವೆ ರಿಲಾಯನ್ಸ್ ತನ್ನ ಹೊಸ ಸಾಧನ Jiofai 4G ಹಾಟ್ ಸ್ಪಾಟ್ ಪ್ರಾರಂಭಿಸಿದೆ. ಭಾರತದ ರಿಲಾಯನ್ಸ್ ಸ್ಟೋರ್ ನಲ್ಲಿ Jiofai 4G ಹಾಟ್ ಸ್ಪಾಟ್ 1999 ರೂಪಾಯಿಗೆ ಸಿಗ್ತಾ ಇದೆ. ಈ ಡಿವೈಸ್ ನಲ್ಲಿ Oled ಡಿಸ್ ಪ್ಲೇ ಹಾಗೂ 2600 mAh ಬ್ಯಾಟರಿ ಇದೆ. ಈ ಹಿಂದಿನ Jiofai ನಲ್ಲಿ 2300 mAh ಬ್ಯಾಟರಿ ನೀಡಲಾಗಿತ್ತು. ಮನೆಯಲ್ಲಿ ಅನೇಕರು ನೆಟ್ ಬಳಸುತ್ತಿದ್ದರೆ ಈ Jiofai 4G ಬಹಳ ಉಪಯೋಗಕಾರಿ. ಈ Jiofai 4G ನಲ್ಲಿ 10 ಡಿವೈಸ್ ಕನೆಕ್ಟ್ ಮಾಡಿ ನೆಟ್ ಬಳಸಬಹುದಾಗಿದೆ.  ರಿಲಾಯನ್ಸ್ ಮಳಿಗೆಯಲ್ಲಿ Jiofai 4G ಡಿವೈಸ್ ಖರೀದಿಸಿದರೆ. ಇದರ ಜೊತೆ ನಿಮಗೊಂದು ಜಿಯೋ ಸಿಮ್ ಸಿಗಲಿದೆ.

Job ನ್ಯೂಸ್‌: ದೆಹಲಿ ಮೆಟ್ರೊದಲ್ಲಿ ಭರ್ಜರಿ ಉದ್ಯೋಗ :-

ಅಸಿಸ್ಟೆಂಟ್‌ ಮ್ಯಾನೇಜರ್‌, ಸ್ಟೇಷನ್‌ ಕಂಟ್ರೋಲರ್‌, ಕಸ್ಟಮರ್‌ ರಿಲೇಷನ್ಸ್‌ ಆಫೀಸರ್‌, ಜೂನಿಯರ್‌ ಎಂಜಿನಿಯರ್‌, ಅಕೌಂಟ್‌ ಅಸಿಸ್ಟೆಂಟ್‌ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. *ಖಾಲಿ ಹುದ್ದೆಗಳು 3431 ದೆಹಲಿ ಮೆಟ್ರೊ ರೈಲು ಕಾರ್ಪೋರೇಷನ್‌ ಭರ್ಜರಿ ಉದ್ಯೋಗಾವಕಾಶದ ಆಫರ್‌ ನೀಡಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌, ಸ್ಟೇಷನ್‌ ಕಂಟ್ರೋಲರ್‌, ಕಸ್ಟಮರ್‌ ರಿಲೇಷನ್ಸ್‌ ಆಫೀಸರ್‌, ಜೂನಿಯರ್‌ ಎಂಜಿನಿಯರ್‌, ಅಕೌಂಟ್‌ ಅಸಿಸ್ಟೆಂಟ್‌ ಮತ್ತು ಮೆಂಟೇನರ್‌ ಸೇರಿದಂತೆ ಒಟ್ಟು 3431 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್‌ 15ರಿಂದಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್‌ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್‌ 18ರೊಳಗೆ ನಿಗದಿತ ಅರ್ಜಿ ಶುಲ್ಕವನ್ನೂ ಪಾವತಿಸುವಂತೆ ಡಿಎಂಆರ್‌ಸಿ ಸೂಚಿಸಿದೆ. ಕಾರ್ಯಕ್ಷೇತ್ರ ದೆಹಲಿಯಾಗಿದ್ದರೂ, ನಿಗದಿತ ವಿದ್ಯಾರ್ಹತೆ ಹೊಂದಿರುವ ಯಾವುದೇ ರಾಜ್ಯದ ಅಭ್ಯರ್ಥಿಗಳಾಗಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌: ಎಲೆಕ್ಟ್ರಿಕಲ್‌, ಸಿವಿಲ್‌, ಆಪರೇಷನ್ಸ್‌, ಎಚ್‌ಆರ್‌, ಫೈನಾನ್ಸ್‌ ಮತ್ತು ಟ್ರೈನ್‌ ಆಪರೇಟರ್‌ ವಿಭಾಗದಲ್ಲಿ ಒಟ್ಟು 44 ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಬಿಇ/ಬಿಟೆಕ್‌/ಐಸಿಡಬ್ಲ್ಯೂಎ/ಎಂಬಿಎಯನ್ನು ಪ

ಪತ್ರಿಕಾ ಪ್ರಕಟಣೆ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ - 2016*

Image
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 14,000 ಹುದ್ದೆಗಳ ಪೈಕಿ  ಈ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಲು ಸರ್ಕಾರವು ಅನುಮೋದನೆಯನ್ನು ನೀಡಿದೆ. ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ 👉🏻 19-09-2016 ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 👉🏻13-10-2016 🚦 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) :- 398 ಹುದ್ದೆಗಳು [ ಕಮೀಷನರೇಟ್ ವಾರು] 🚦ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (CAR, RSI):- 90 ಹುದ್ದೆಗಳು 🚦 ನಿಸ್ತಂತು ಸಬ್ ಇನ್ಸ್‌ಪೆಕ್ಟರ್ (Wireless, PSI) :- 28 ಹುದ್ದೆಗಳು. 🚦ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (KSRP, RSI) :-28 ಹುದ್ದೆಗಳು.

*ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 53 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿ ಅಧಿಸೂಚನೆ*

ಅರ್ಜಿ ಸಲ್ಲಿಸುವ ದಿನಾಂಕ 15/9/2016 ರಿಂದ 14/10/2016. ವಿದ್ಯಾರ್ಹತೆ :: Puc ಹೆಚ್ಚಿನ ಮಾಹಿತಿಗಾಗಿ http://uttarakannada.nic.in/recruitment/docs/VANotification2016.pdf ಆನ್ ಲೈನ್ ಅರ್ಜಿಗಾಗಿ http://karwar-va.kar.nic.in/

"ವಿಶ್ವ ಓಝೋನ್ ದಿನ".(ಸಪ್ಟಂಬರ 16)

"ವಿಶ್ವ ಓಝೋನ್ ದಿನ". ಈ ಸಂದಭ೯ದಲ್ಲಿ ಓಝೋನ್ ದಿನದ ಮಹತ್ವವನ್ನು ಅರಿಯೋಣ ಬನ್ನಿ....... ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ "ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ-ಸಂಕಷ್ಟ, ಕೀಟ-ಕೋಟಲೆಗಳ ಭಯವೇಕೆ? ಸಂಕಷ್ಟ ಬಂದರೆ ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು." ಎಂಬ ಮಾತಿನಂತೆ ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಜೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ವಿಶ್ವ ಓಜೋನ್ ದಿನವನ್ನು(ಸೆ.16) ಆಚರಿಸಲಾಗುತ್ತಿದೆ. "If earth is our mother, then Ozone is our father" ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ, ಆದ್ದರಿಂದ ಭೂಮಿಯನ್ನು (ಭೂ)ತಾಯಿಗೆ ಹೊಲಿಸುತ್ತೇವೆ. ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗದು. ಜೀವಿಗಳು ಬದುಕಿ ಬಾಳಲು ಭೂಮಿ ಬೇಕು, ಆದರೆ!! ಭೂಮಿ ಬದುಕಲು ಓಝೋನ್ ಬೇಕೇ-ಬೇಕು. ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ(UV-Rays) ಕಿರಣಗಳಿಂದ ರಕ್ಷಿಸುತ್ತದೆ. ಇತಿಹಾಸ: ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್

ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾದ ಮೊಬೈಲ್ APPಗಳು::

ಇದು ಡಿಜಿಟಲ್ ಯುಗ . ನಮ್ಮ ಎಲ್ಲ ಸಂವೇದನಾ ಶಕ್ತಿಯು ಟೆಕ್ನಾಲಜಿಯ ಮೇಲೆ ಅವಲಂಭಿತವಾಗಿದೆ. ಮೆಸೇಜಿಂಗ್, ಚಾಟಿಂಗ್ , ಗೇಮಿಂಗ್ ನಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದ ತಾಂತ್ರಿಕ ಸಂಶೋಧನೆ , ಕಾರ್ಯಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಹಭಾಗಿತ್ವ ಟೆಕ್ನಾಲಜಿಯದ್ದಾಗಿದೆ. ಟೆಕ್ನಾಲಜಿ ಯಿಲ್ಲದ ಬದುಕನ್ನು ಇಂದು ಮಾನವ ಕ್ಷಣದ ಮಟ್ಟಿಗೂ ಊಹಿಸಲಾರ. ದಿನ ನಿತ್ಯವೂ ಹೊಸ ಅವಿಷ್ಕಾರದೊಂದಿಗೆ ನೂತನ ತಂತ್ರಾಂಶಗಳನ್ನು ಕಂಡು ಹಿಡಿದು ತನ್ನ ಕಾರ್ಯಕ್ಷಮತೆಯನ್ನು ಅಲ್ಪ ಸಮಯದಲ್ಲಿ ವಿಶಾಲವಾಗಿ ಪ್ರಕಟಿಸುತ್ತ ಅವಿನಾಭಾವ ಸಾಧನೆ ಮಾಡುತ್ತಿರುವ ಮಾನವ ಮಿದುಳಿಗೆ ಎಷ್ಟು ಸಲಾಂ ಹೇಳಿದರೂ ಸಾಲದು. ಇಂದು ಸ್ಮಾರ್ಟ್ ಪೋನ್ ಎಂಬ ಸಣ್ಣ ವಸ್ತುವಿನಲ್ಲಿ ಇಡೀ ಜಗತ್ತಿನ ಎಲ್ಲ ವಿಚಾರಗಳನ್ನು ಬಚ್ಚಿಟ್ಟುಕೊಳ್ಳ ಬಹುದು . ಹೆಬ್ಬೆರಳಿನ ತುತ್ತ ತುದಿಯಿಂದ ಟ್ಯಾಪ್ ಮಾಡುವ ಮೂಲಕ ಊಹೆಗೂ ನಿಲುಕದ ಹೊಸ ವಿಶ್ವವನ್ನೇ ನಾವು ಕಾಣಬಹುದು. ಟೆಕ್ನಿಕಲ್ ಆಗಿ ಹೇಳಿದರೆ "ಇದು ಸ್ಮಾರ್ಟ್ ಜನರ ಸ್ಮಾರ್ಟ್ ಯುಗ" . ವಿದ್ಯಾರ್ಥಿಯಿಂದ ಹಿಡಿದು ಮುಪ್ಪಿನ ದಿನಗಳನ್ನು ಕಳೆಯುವ ವೃದ್ಧರು ಸಹ ತಮ್ಮ ದೈನಂದಿನ ಜೀವನಕ್ಕೆ ಸ್ಮಾರ್ಟ್ ಮೆರಗು ನೀಡಲು ದಿನ ನಿತ್ಯವೂ ಕಸರತ್ತು ಮಾಡುತ್ತಾರೆ . ಸಾಮಾನ್ಯವಾಗಿ ಹಿರಿಯರು "ನಿಮ್ಮ ಮನೆಯಲ್ಲಿ ಫೋನ್ ಇದೆಯಾ ?" ಎಂಬ ಪ್ರಶ್ನೆ ಕೇಳುತಿದ್ದ ಕಾಲ ಒಂದಿತ್ತು . ಆದರೆ ಇಂದು ಕಿರಿಯರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಶೈಲಿ

Additional increment for high school teachers ana HeadMasters option now avilable in hrms.

Image

"ದ್ವಿತೀಯ ಪಿಯುಸಿ ಯಲ್ಲಿ 80% ಗಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ MHRD ವಿದ್ಯಾರ್ಥಿ ವೇತನ" (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.09.2016)

www.pue.kar.nic.in/PUE/PDF_files/scholarship/mhrd_16/Inst_16_Guide.pdf

*ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ – 1921 ಹುದ್ದೆಗಳ ನೇಮಕಾತಿ*

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಮಿತದಿಂದ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿದ್ಯುತ್) : 52 ಸಹಾಯಕ ಇಂಜಿನಿಯರ್ (ವಿದ್ಯತ್) :416 ಸಹಾಯಕ ಇಂಜಿನಿಯರ್ (ಸಿವಿಲ್ ) : 24 ಸಹಾಯಕ ಲೆಕ್ಕಾಧಿಕಾರಿ : 296 ಕಿರಿಯ ಇಂಜಿನಿಯರ್ (ವಿದ್ಯುತ್) : 409 ಕಿರಿಯ ಇಂಜಿನಿಯರ್ (ಸಿವಿಲ್) : 12 ಸಹಾಯಕ  : 422 ಕಿರಿಯ ಸಹಾಯಕ : 290 ವಿದ್ಯಾರ್ಹತೆ , ವಯೋಮಿತಿ ಆಯ್ಕೆ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿclick ಮಾಡಿರಿ http://nebula.wsimg.com/b9e35bb22ed5b8c341ab8a9da17a32e7?AccessKeyId=1262C70BB86294F06778&disposition=0&alloworigin=1 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ  28-09-2016 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿರಿ (ಹೆಸ್ಕಾಂ ವಿಭಾಗ) http://www.hescom.co.in/aee-recruitment.html nebula.wsimg.com/ced6babd837f8de7c7008ed1525f9817?AccessKeyId=1262C70BB86294F06778&disposition=0&alloworigin=1

Press Note: 815 posts of PDO in RPDR

Commencement of entry of online Application-16-09-2016 Last Date to enter online Application 15-10-2016 kea.kar.nic.in/cet2016/notification_kan.pdf

KPTCL 1921 ಸಹಾಯಕ, ಕಿರಿಯ ಎಂಜಿನಿಯರ್ ಮತ್ತು ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ:-

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಎಂಜಿನಿಯರ್ (ಸಿವಿಲ್) ಮತ್ತು ಕಿರಿಯ ಸಹಾಯಕ, ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಒಟ್ಟು 1921 ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳು ಮೀಸಲಾತಿಯನ್ವಯ ಹಂಚಿಕೆಯಾಗಿದ್ದು, ಹೈ.ಕ. ಭಾಗದ ಅಭ್ಯರ್ಥಿಗಳಿಗೂ ಮೀಸಲಾತಿ ನೀಡಲಾಗಿದೆ. ಇದೇ ಸೆಪ್ಟೆಂಬರ್ 8ರಂದು ಕಂಪನಿಗಳ ವೆಬ್ಸೈಟ್ನಲ್ಲಿ ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗುತ್ತದೆ. *ಯಾವ ಹುದ್ದೆ ಎಷ್ಟು?* ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್-52, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್)-440, ಕಿರಿಯ ಎಂಜಿನಿಯರ್ (ವಿದ್ಯುತ್/ಸಿವಿಲ್): 421, ಸಹಾಯಕ ಲೆಕ್ಕಾಧಿಕಾರಿ-296, ಸಹಾಯಕ-422 ಮತ್ತು ಕಿರಿಯ ಸಹಾಯಕ-290 *ಅರ್ಹತೆಗಳೇನು?* ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಅಂಗೀಕೃತ ವಿವಿಯಿಂದ ಬಿ.ಇ ಪದವಿ ಅಥವಾ ಎಎಂಐಇ (ಭಾರತ) ನಡೆಸುವ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಅಂತೆಯೇ ಸಿವಿಲ್ ವಿಭಾಗದಲ್ಲಿ ಸಹಾ

ಭಾಗ್ಯಗಳಿಲ್ಲದ ಹೊತ್ತಲ್ಲಿ ಮೇಷ್ಟ್ರೇ ಭಾಗ್ಯದೇವತೆ*

Image
_01 Sep 2016_ ಗುರು-ಶಿಷ್ಯರ ನಡುವೆ ತಾದಾತ್ಮ್ಯ ಏರ್ಪಡುವುದು ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು. ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿದಾಗ ಆಗುವ ಖುಶಿಯೇ ಬೇರೆ.ಗುರುದೃಷ್ಟಿಗೆ ಇರುವ ಕಾರುಣ್ಯದಿಂದಾಗಿ 'ಹರ ಮುನಿಯಲ್, ಗುರು ಕಾಯ್ವನ್' ಎಂಬ ಮಾತು ಹುಟ್ಟಿದೆ.  ನಮ್ಮ ನಾಡಿನಲ್ಲಿ ಆಗಿಹೋದ ಮಹಾನ್ ಚೇತನಗಳಲ್ಲಿ ಅಂತರ್ಗತವಾಗಿದ್ದ ಅಗಾಧ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿ ಬೆಳೆಸಿದ ಮೂಲಗಳನ್ನು ಹುಡುಕುತ್ತಾ ಹೋದರೆ ಖಂಡಿತವಾಗಿ ಆ ಮೂಲದಲ್ಲಿ ಗೋಚರಿಸುವವರು -ಳ-ಳನೆ ಹೊಳೆಯುವ ಅವರ ಗುರುಗಳು! ಟೀಚರು, ಮೇಷ್ಟ್ರು, ಲೆಕ್ಚರರು, ಸರ್ರು, ಪ್ರೊ-ಸರು.... ಯಾವುದೇ ಹಂತದಲ್ಲಿಯೂ ಈ ಗುರು ತನ್ನ ಶಿಷ್ಯನನ್ನು ಪ್ರಭಾವಿಸಿ ತನ್ನ ಪ್ರಭಾವಲಯದಲ್ಲಿ ಬೆಳೆಸಿ ಆ ಶಿಷ್ಯ ಏರಿದ ಎತ್ತರವನ್ನು ಕಂಡು ಹೆಮ್ಮೆ ಪಡುವ ಅಪರೂಪದ ಸಹೃದಯಿ. ಎಲೆಮರೆಯ ಕಾಯಿಯ ಹಾಗೆ ಹಳ್ಳಿಯ ಮೂಲೆ ಮೂಲೆಗಳಲ್ಲಿದ್ದ 'ಕನ್ನಡ ಶಾಲೆಯ' ಮೇಷ್ಟ್ರುಗಳಿಗೆ ಕನ್ನಡ ನಾಡಿನ ಒಂದು ಸಭ್ಯ, ಶಿಷ್ಟ, ಸುಸಂಸ್ಕೃತ ತಲೆಮಾರನ್ನೇ ಕಟ್ಟಿ ನಿಲ್ಲಿಸಿದ ಕೀರ್ತಿ ಸಲ್ಲಬೇಕು. ನಾನೀ ವಾರದ ಅಂಕಣಕ್ಕೆ ಪೆನ್ನು ಕೈಗೆತ್ತಿಕೊಂಡಾಕ್ಷಣ ನೆನಪಿಗೆ ಬಂದವರು ನನ್ನ ಕನ್ನಡ ಶಾಲೆಯಲ್ಲಿ ನಮಗೆ ಅಕ್ಷರ ಕಲಿಸಿದ ಮೇಷ್ಟ್ರು. ನಮ್ಮ 'ಕಾಗೆ ಕಾಲು ಗುಬ್ಬಿ ಕಾಲು' ಲಿಪಿಯನ್ನು ಅದು ಹೇಗೆ ಓದಿ ಅರ್ಥೈಸಿಕೊಳ್ಳುತ್ತಿದ್ದರೋ, ಇವತ್ತು ನಿನ್ನೆಗಿಂತ ಚಂದವಾಗಿದೆ ಅಕ್ಷರ ಎನ್ನುತ್ತಲೇ