Posts

*KPSC : FDA / SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 06-01-2017ಕ್ಕೆ ವಿಸ್ತರಿಸಿದ ಬಗ್ಗೆ*

Image

ದೇಶದ ಮೊದಲ ಶಿಕ್ಷಕಿ: ಸಾವಿತ್ರಿಬಾಯಿ ಪುಲೆ

Image
*ಅಕ್ಷರಮಾತೆಯ ಯಶೋಗಾಥೆ* ಭಾರತೀಯ ಸಮಾಜವು ವರ್ಣ, ಜಾತಿ, ವರ್ಗವ್ಯವಸ್ಥೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸಿದೆ. ಇಂತಹ ಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗಾಗಿಯೇ ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆರೆದು ಅಕ್ಷರ ಜ್ಞಾನವನ್ನು ನೀಡಿದವರು ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿ. ಮಹಾರಾಷ್ಟ್ರದ ಪುಣೆಯಲ್ಲಿ ಅಸ್ಪೃಶ್ಯರು, ತಳವರ್ಗಗಳು ಹಾಗೂ ಮಹಿಳೆಯರಿಗಾಗಿ ಶಾಲೆಯನ್ನು ಆರಂಭಿಸಿ ಅಕ್ಷರದ ಜ್ಞಾನ ನೀಡಲು ಈ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಜಡ್ಡುಗಟ್ಟಿದ ಸಮಾಜದಿಂದ ಕಿರುಕುಳ ಅನುಭವಿಸಿದ ಫುಲೆ ಅವರು ತಮ್ಮ ಜೀವಿತದ ಅವಧಿಯಲ್ಲಿ ತಳ ಸಮುದಾಯ, ಅಸ್ಪೃಶ್ಯರು ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡರು. ಪೇಶ್ವೆಗಳ ಆಡಳಿತದ ಅವಧಿಯಲ್ಲಿ ಹೂವನ್ನು ಮಾರುತ್ತಿದ್ದರಿಂದ ಇವರ ಕುಟುಂಬಕ್ಕೆ ಫುಲೆ ಎಂಬ ಅಡ್ಡ ಹೆಸರು ಬಂತು. ಹಿಂದುಳಿದ ಹೂಗಾರ ಜಾತಿಗೆ ಸೇರಿದ ಸಾವಿತ್ರಿಬಾಯಿ ಫುಲೆ ಅವರು 1831ರ ಜನವರಿ 3ರಂದು ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಖಂಡೋಜಿ ನೇವಸೆ ಪಾಟೀಲ ಹಾಗೂ ತಾಯಿ ಲಕ್ಷ್ಮಿಬಾಯಿ. ಸಾವಿತ್ರಿಬಾಯಿ ಫುಲೆ ಅವರಿಗೆ 1840ರಲ್ಲಿ ತಮ್ಮ ಸಂಬಂಧಿಕರೇ ಆದ ಜ್ಯೋತಿಬಾ ಫುಲೆ ಅವರೊಂದಿಗೆ ಬಾಲ್ಯವಿವಾಹವಾಯಿತು. ಪ್ರೇರಣೆಯಾದ ಅವಮಾನ: ಬ್ರಾಹ್ಮಣಸ್ನೇಹಿತನ ಮದುವೆಯಲ್ಲಿ ಅವಮಾನಿತರಾಗಿ ಹೊರದೂಡಲ್ಪಟ್ಟ ಜ್ಯೋತಿಬ

*kpsc ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ*

*ಬೆಂಗಳೂರು, ಜನವರಿ 2* *ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ 2017ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಅರ್ಹ ಸರ್ಕಾರಿ ನೌಕರರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.* *ಅರ್ಹ ಅಭ್ಯರ್ಥಿಗಳು 30-01-2017 ರವರೆಗೆ ಆನ್‍ಲೈನ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ತತ್ಸಂಬಂಧ ಶುಲ್ಕವನ್ನು ಸ್ಕ್ಯಾನರ್ ಸೌಲಭ್ಯವಿರುವ ರಾಜ್ಯದ ಯಾವುದೇ ಗಣಕೀಕೃತ ಅಂಚೆ ಕಚೇರಿ ಶಾಖೆಯಲ್ಲಿ ದಿನಾಂಕ 31-01-2017 ರವರೆಗೆ ಪಾವತಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿವರಗಳಿಗಾಗಿ ಆಯೋಗದ ವೆಬ್‍ಸೈಟ್ " http://kpsc.kar.nic.in " ಪ್ರಕಟಿಸಿರುವ ಅಧಿಸೂಚನೆಯನ್ನು ನೋಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-30574944/30574945/30574957 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.* Departmental Examination info file http://kpsc.kar.nic.in/pdf/DEPTL%20EXAM%20%20_FUNCTIONS_.pdf

ಹಾಟ್ ಏರ್ ಬೆಲೂನ್‍ನಲ್ಲಿ ಭೂ ಪ್ರದಕ್ಷಿಣೆ ವಿಶ್ವದಾಖಲೆ

Image
  January 2, 2017 ಈ ಜಗತ್ತಿನಲ್ಲಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಅಪಾರ ಪರಿಶ್ರಮದಿಂದ ಇದು ಸಾಧ್ಯ. ರಷ್ಯಾದ ಸಾಹಸಿ ಫೆಡೊರ್ ಕೊನ್‍ಯುಖೋ ಇತ್ತೀಚೆಗೆ ಹಾಟ್ ಏರ್ ಬೆಲೂನ್‍ನಲ್ಲಿ ಭೂ ಪ್ರದಕ್ಷಿಣೆ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ರಷ್ಯಾದ ಸಾಹಸಿ ಫೆಡೊರ್ ಕೊನ್‍ಯುಖೋವ್ ಹಾಟ್ ಏರ್ ಬೆಲೂನ್‍ನಲ್ಲಿ ಕೇವಲ 11 ದಿನಗಳಲ್ಲಿ ಭೂ ಪ್ರದಕ್ಷಿಣೆ ಮೂಲಕ ವಿಶ್ವವಿಕ್ರಮದ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.  ರಷ್ಯಾದ 64 ವರ್ಷಗಳ ಪಾದ್ರಿ ಮತ್ತು ಹಾಟ್ ಏರ್ ಬೆಲೂನ್ ಸಾಹಸಿ ಫೆಡೊರ್ ಕೊನಿಯುಖೊವ್ ಹಿಂದಿನ ವಿಶ್ವ ದಾಖಲೆಯನ್ನು ಮುರಿಯಲು ಒಬ್ಬಂಟಿಯಾಗಿ ಹಾಟ್ ಏರ್ ಬೆಲೂನ್‍ನಲ್ಲಿ ಭುವನ ಪ್ರದಕ್ಷಿಣೆ ಆರಂಭಿಸಿದ್ದರು. 2002ರಲ್ಲಿ ಒಬ್ಬಂಟಿಯಾಗಿ ವಿಮಾನದಲ್ಲಿ ಅಮೆರಿಕದ ವೈಮಾನಿಕ ಸ್ಟೀವ್ ಪೋಸ್ಟೆಟ್ ಯಶಸ್ವಿ ವಿಶ್ವ ಪ್ರದಕ್ಷಿಣೆ ಆರಂಭಿಸಿದ್ದ ಆಸ್ಟ್ರೇಲಿಯಾದ ನೋರ್ಥಾಮ್ ಅದೇ ಸ್ಥಳದಿಂದ ಫೆಡೊರ್ ಹಾಟ್ ಏರ್ ಬೆಲೂನ್ ಮೂಲಕ ಈ ಸಾಹಸ ಕೈಗೊಂಡರು. ಪೋಸ್ಟೆಟ್ಗೆ ಪ್ರಪಂಚ ಪರ್ಯಟನೆ ಮಾಡಲು ಹದಿಮೂರುವರೆ ದಿನಗಳು ಬೇಕಾದವು. ಈ ದಾಖಲೆಯನ್ನು ಅಳಿಸಿ ಹಾಕುವ ದೃಢ ಆತ್ಮವಿಶ್ವಾಸ ಹೊಂದಿದ್ದ ಫೆಡೊರ್ ಕೇವಲ 11 ದಿನಗಳಲ್ಲಿ ಈ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. 1983ರಲ್ಲಿ ಹೆಲಿಕಾಪ್ಟರ್ ಮೂಲಕ ಮೊಟ್ಟಮೊದಲ ಬಾರಿಗೆ ಒಬ್ಬಂಟಿಯಾಗಿ ಪ್ರಪಂಚ ಪರ್ಯಟನೆ ಮಾಡಿದ್ದ ಡಿಕ್ ಸ್ಮಿತ್, ಫೆಡೊರ್ ಸಾಹ

ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ ಸೇನೆಗೆ ಮತ್ತೊಂದು ಪ್ರಬಲ ಅಸ್ತ್ರ

ಬಾಲಸೋರ್, ಜ. ೨- ಇಂದು ನಡೆದ ಅಗ್ನಿ-4 ಕ್ಷಿಪಣಿಯ ಉಡಾವಣೆ ಯಶಸ್ವಿಯಾಗಿದೆ. ಇದು ಇದರ ನಾಲ್ಕನೇ ಹಾಗೂ ಅಂತಿಮ ಉಡಾವಣೆ ಪರೀಕ್ಷೆಯಾಗಿದ್ದು, ಇಂದು ಇದರ ಯಶಸ್ವಿನಿಂದ ಭಾರತೀಯ ಸೇನಾ ಬತ್ತಳಿಕೆಗೆ ಇನ್ನೊಂದು ಪ್ರಬಲ ಅಗ್ನಿ ಅಸ್ತ್ರ ಸೇರಲಿದೆ. ಒಡಿಶಾದ ಬಾಲಸೋರ್ ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರುವ ಉಡಾವಣಾ ಕೇಂದ್ರದಲ್ಲಿ ಕ್ಷಿಪಣಿಯನ್ನು ಇಂದು ಬೆಳಗ್ಗೆ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಭಾರತೀಯ ಸೇನೆ ನಡೆಸಿದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿ ಉಡಾವಣೆಗೊಂಡ ಕೇವಲ 20 ನಿಮಿಷದಲ್ಲಿ 800 ಕಿ.ಮೀ ದೂರ ಕ್ರಮಿಸಿ ನಿಖರ ಗುರಿ ತಲುಪುವ ಮೂಲಕ ಯಶಸ್ವಿಯಾಯಿತು. ಅಗ್ನಿ-4 ಕ್ಷಿಪಣಿ ಘನ ಇಂಧನ ಬಳಕೆ ಮಾಡುವ ಇಂಜಿನ್ ಹೊಂದಿದ್ದು, ಕ್ಷಿಪಣಿ ಉಡಾವಣೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಮೊಬೈಲ್ ಲಾಂಚರ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಈ ಖಂಡಾಂತರ ಕ್ಷಿಪಣಿಯನ್ನು ನಾಲ್ಕನೇ ಬಾರಿಗೆ ಭಾರತೀಯ ಸೇನೆ ಪ್ರಯೋಗಕ್ಕೆ ಒಳಪಡಿಸಿದ್ದು, ಇದು ಈ ಕ್ಷಿಪಣಿಯ ಅಂತಿಯ ಪ್ರಯೋಗವಾಗಿದೆ. ಅಗ್ನಿ-4 ಕ್ಷಿಪಣಿಯು ಸುಮಾರು 17 ಟನ್ ತೂಕವಿದ್ದು, 20 ಮೀಟರ್ ಉದ್ದವಿದೆ. ಸುಮಾರು 4 ಸಾವಿರ ಕಿಮೀ ವ್ಯಾಪ್ತಿಯಲ್ಲಿನ ಯಾವುದೇ ಕಠಿಣ ಗುರಿಯನ್ನು ಕ್ಷಣಮಾತ್ರದಲ್ಲಿ ಛಿದ್ರ ಮಾಡಬಲ್ಲ ತಾಕತ್ತು ಈ ಕ್ಷಿಪಣಿಗಿದೆ. ಕೇವಲ ಒಂದು ವಾರದ ಹಿಂದೆಯಷ್ಟೇ ಭಾರತ ತನ್ನ ಪ್ರಬಲ ಅಗ್ನಿ 5 ಕ್ಷಿಪಣಿಯ

*8,300 ನಾನ್ ಟೆಕ್ನಿಕಲ್ ಹುದ್ದೆಗಳ ನೇಮಕಾತಿ:~*

     ‌‌‌‌ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ)ಯಿಂದ ದೇಶದಾದ್ಯಂತ ಖಾಲಿ ಇರುವ 8,300 ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಹುದ್ದೆಗಳ ಭರ್ತಿಗಾಗಿ ದಿನಾಂಕ 16.04.2017, 30.04.2017, 07.05.2017 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-01-2017 ಹೆಚ್ಚಿನ ವಿವರಕ್ಕಾಗಿ ಇಲ್ಲಿ click ಮಾಡಿರಿ:   http://ssc.nic.in/SSC_WEBSITE_LATEST/notice/notice_pdf/mtsfinalnotice301216.pdf ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ http://ssconline.nic.in/

ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌

Image
ಟೈಮ್ಸ್ ಆಫ್ ಇಂಡಿಯಾ | Updated Dec 31, 2016, 03.26 PM IST Whatsapp Facebook Google Plus Twitter Email SMS ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ A A A ಹೊಸದಿಲ್ಲಿ: ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಶನಿವಾರ ಅಧಿಕಾರ ಸ್ವೀಕರಿಸಿದರು. ಜನರಲ್ ದಲ್ಬೀರ್ ಸಿಂಗ್‌ ಸುಹಾಗ್‌ ಅವರ ಉತ್ತರಾಧಿಕಾರಿಯಾಗಿ 1.3 ದಶಲಕ್ಷ ಯೋಧರ ಪಡೆಯನ್ನು ಅವರು ಮುನ್ನಡೆಸಲಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರೋಧ ಲೆಕ್ಕಿಸದೆ ಎನ್‌ಡಿಎ ಸರಕಾರ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರಾಗಿ ನಿಯೋಜಿಸಿದ ಕ್ರಮ ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಉಮಾಶ್ರೀಗೆ

Image
ಜಿಲ್ಲೆಯ ಉಸ್ತುವಾರಿಉಮಾಶ್ರೀಗೆ ಮುಖ್ಯಮಂತ್ರಿ ಪತ್ರದ ಅನ್ವಯ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದು, ಜಿಲ್ಲೆಯ ತೇರ ದಾಳ ವಿಧಾನಸಭಾ ಕ್ಷೇತ್ರ ವನ್ನು ಉಮಾಶ್ರೀ ಅವರಿಗೆ ಜಿಲ್ಲೆ ಯ ಉಸ್ತುವಾರಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಹೊಂದಿ ದ್ದ ಅಬಕಾರಿ ಸಚಿವ ಎಚ್.ವೈ.ಮೇಟಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಡಿಸೆಂಬರ್ 14ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ದ್ವಿತೀಯ PUC ಪರೀಕ್ಷೆ ವೇಳಾಪಟ್ಟಿ ಪ್ರಕಟ: ಮಾರ್ಚ್ 9ರಿಂದ 27;

Image
    ಬೆಂಗಳೂರು:  2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9ರಿಂದ 27ರವರೆಗೆ ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಮಾರ್ಚ್ 9ರಿಂದ 27ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ.  ಪಿಯು ಇಲಾಖೆಯ ವೆಬ್ ಸೈಟ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿ ವಿವರ : ಮಾರ್ಚ್ 9: ಜೀವಶಾಸ್ತ್ರ, ಇತಿಹಾಸ ಮಾರ್ಚ್10; ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮಾರ್ಚ್ 11; ತರ್ಕಶಾಸ್ತ್ರ, ಎಜುಕೇಷನ್, ಬೇಸಿಕ್ ಮ್ಯಾಥ್ಸ್ ಮಾರ್ಚ್ 13: ಸಮಾಜಶಾಸ್ತ್ರ, ಲೆಕ್ಕಶಾಸ್ರ್ರ  ಮಾರ್ಚ್14: ಗಣಿತ ಮಾರ್ಚ್15: ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್ ಮಾರ್ಚ್16:ಅರ್ಥಶಾಸ್ತ್ರ, ಜಿಯಾಲಜಿ  ಮಾರ್ಚ್ 17: ಭೌತಶಾಸ್ತ್ರ ಮಾರ್ಚ್ 18:ಮನೋವಿಜ್ಞಾನ ಮಾರ್ಚ್ 20:ಕೆಮಿಸ್ಟ್ರಿ, ಐಚ್ಚಿಕ ಕನ್ನಡ, ಬ್ಯುಸಿನೆಸ್ ಸ್ಟಡೀಸ್ ಮಾರ್ಚ್ 21:ರಾಜ್ಯಶಾಸ್ತ್ರ ಮಾರ್ಚ್ 22: ಹಿಂದಿ ಮಾರ್ಚ್ 23: ಕನ್ನಡ, ತಮಿಳು, ಮಲಯಾಳಂ ಮಾರ್ಚ್ 24:ಸಂಸ್ಕೃತ, ಮರಾಠಿ, ಉರ್ದು ಮಾರ್ಚ್ 25:ಜಿಯೋಗ್ರಫಿ, ಸಂಖ್ಯಾಶಾಸ್ತ್ರ, ಹೋಂಸೈನ್ಸ್ ಮಾರ್ಚ್ 27: ಇಂಗ್ಲಿಷ್

*ನಿಮ್ಮ SBI ಖಾತೆಯನ್ನು ON ಅಥವಾ OFF ಮಾಡುವ ವಿಧಾನ*

*ನಿಮ್ಮ  SBI ಖಾತೆಯನ್ನು ON ಅಥವಾ OFF ಮಾಡುವ ವಿಧಾನ* www.freegksms.blogspot.in 1) ಮೊದಲು ನಿಮ್ಮ ಮೊಬೈಲ್ ನಂಬರ್ ನ್ನು SBI ಖಾತೆಯೊಂದಿಗೆ ನೋಂದಾಯಿಸಿಕೊಳ್ಳಿ .. ನೋಂದಾಯಿಸಲು ಈ ಕೆಳಗಿನಂತೆ SMS ಬರೆದು 9223488888 ಗೆ ಕಳಿಸಿ. REG(space)A/c.No 2) *ಬ್ಯಾಲೆನ್ಸ್ ನೋಡಲು*- BAL ಎಂದು ಬರೆದು 9223766666ಗೆ SMS ಕಳಿಸಿ.. 3) *ಮಿನಿ ಸ್ಟೇಟ್ಮೆಂಟ್ ಪಡೆಯಲು*  MSMST ಎಂದು ಬರೆದು 9223866666ಗೆ SMS ಕಳಿಸಿ..(ಅಥವಾ MISCALL ಕೊಡಿ). 4) *ATM ಕಾರ್ಡ್ ಬ್ಲಾಕ್ ಮಾಡಲು* BLOCK(space)XXXX (ಇಲ್ಲಿ  XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು) ಎಂದು ಬರೆದು 567676 ಗೆ SMS ಕಳಿಸಿ.. 5) *ATM ಕಾರ್ಡ್ ON ಮಾಡಲು* SWON(space)ATM(space)XXXX (ಇಲ್ಲಿ  XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು) ಎಂದು ಬರೆದು 9223966666ಗೆ SMS ಕಳಿಸಿ. 6) *ATM ಕಾರ್ಡ್ OFF ಮಾಡಲು* SWOFF(space)ATM(space)XXXX (ಇಲ್ಲಿ  XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು) ಎಂದು ಬರೆದು 9223966666ಗೆ SMS ಕಳಿಸಿ. 7)ನಿಮ್ಮ ATM ಕಾರ್ಡ್ ನ್ನು ಸ್ವೈಫ್ ಮಶಿನ್ ನಲ್ಲಿ ಬಳಕೆ ಮಾಡದಂತೆ ನಿರ್ಬಂಧಿಸಲು  SWOFF(space)POS(space)XXXX (ಇಲ್ಲ

ಪೇಟಿಎಂಗೆ ಪೈಪೋಟಿ ನೀಡಲು ಬರುತ್ತಿದೆ ಆಧಾರ್‌ ಪೇಮೆಂಟ್‌ ಆ್ಯಪ್‌ ..!

Image
 December 24, 2016   ನವದೆಹಲಿ. ಡಿ-24:  ಕೇಂದ್ರ ಸರ್ಕಾರದ ಬಹು ಆಕಾಂಕ್ಷಿತ ಡಿಜಿಟಲ್ ಇಂಡಿಯಾದ ಭಾಗವಾದ ಆಧಾರ್ ಪೇಮೆಂಟ್ ಅಪ್ಲಿಕ್ಷೇನ್ಅನ್ನು ನಾಳೆ ಬಿಡುಗಡೆ ಮಾಡುತ್ತಿದೆ. ಈ ಮೂಲಕ ನೀವು ಇನ್ನುಮುಂದೆ ಯಾವುದೇ ಡೆಬಿಟ್ ಕಾರ್ಡ್ ಅಥವಾ ಕೆಡಿತ್ ಕಾರ್ಡ್ ಇಲ್ಲದೆ ವ್ಯವಹಾರ ಮಾಡಬಹುದು. ನಿಮಗೆ ನಿಮ್ಮ ಆಧಾರ್ ಸಂಖ್ಯೆಯೊಂದು ನೆನಪಿನಲ್ಲಿದ್ದರೆ ಸಾಕು ಎಲ್ಲಿಬೇಕಾದರೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.  ಐಡಿಎಫ್ ಸಿ ಬ್ಯಾಂಕ್‌ ಮತ್ತು ಯುಐಡಿಎಐ (ಆಧಾರ್‌) ಜತೆಗೂಡಿ ಸಿದ್ಧಪಡಿಸಿರುವ, ಸರಳವಾಗಿರುವ ಈ ಆ್ಯಪನ್ನು ವ್ಯಾಪಾರಿಗಳು ತಮ್ಮ ಆಂಡ್ರಾಯ್ಡ ಸ್ಮಾರ್ಟ್‌ ಫೋನ್‌ಗಳಿಗೆ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಇದಕ್ಕೆ ಕೇವಲ 2,000 ರೂ. ಬೆಲೆಗೆ ಲಭ್ಯವಿರುವ ಬೆರಳಚ್ಚು ಬಯೋಮೆಟ್ರಿಕ್‌ ಸಾಧನವನ್ನು ಜೋಡಿಸಿಕೊಳ್ಳಬೇಕು. ಖರೀದಿದಾರ ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌ ನಂಬರ್ ನ್ನು ವ್ಯಾಪಾರಿಗೆ ಕೊಟ್ಟಾಗ ಅವರು ಅದನ್ನು ಆ್ಯಪ್‌ಗೆ ಫೀಡ್‌ ಮಾಡುತ್ತಾರೆ. ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಹೊಂದಿರುವ ಗ್ರಾಹಕರ ಬ್ಯಾಂಕ್‌ ಖಾತೆಯು ಈ ಪಾವತಿ ವ್ಯವಹಾರಕ್ಕೆ ಆ್ಯಪ್‌ ಮೂಲಕ ಒಳಪಡುತ್ತದೆ. ಆಗ ಗ್ರಾಹಕರು ತಮ್ಮ ಬೆರಳಚ್ಚನ್ನು ಬಯೋಮೆಟ್ರಿಕ್‌ ಸಾಧನದಲ್ಲಿ ದಾಖಲಿಸಬೇಕು. ಇದುವೇ ಪಾಸ್‌ವರ್ಡ್‌ ಆಗಿ ಕೆಲಸ ಮಾಡುತ್ತದೆ. ಆಗ ವ್ಯಾಪರಿಗೆ ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ಪಾವತಿಯಾಗುತ್ತದೆ. ಈ ವ್ಯವಸ್ಥೆಯಲ್ಲಿ ಡೆಬಿಟ್‌, ಕ್ರೆಡಿಟ್‌

ಅಶ್ವಿನ್‌ ಐಸಿಸಿ ವರ್ಷದ ಕ್ರಿಕೆಟಿಗ

2015-16ನೇ ಸಾಲಿನ ಐಸಿಸಿ ಪ್ರಶಸ್ತಿ ಪ್ರಕಟ | ವರ್ಷದ ಏಕದಿನ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ ದುಬೈ: ಭಾರತದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ ವರ್ಷದ ಏಕದಿನ ಆಟಗಾರ ಎಂಬ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. 2015ರ ಸೆಪ್ಟೆಂಬರ್‌ 14ರಿಂದ 2016ರ ಸೆಪ್ಟೆಂಬರ್‌ 20ರ ಅವಧಿಯಲ್ಲಿ ಆಟಗಾರರು ತೋರಿದ ಪ್ರದರ್ಶನದ ಆಧಾರದಲ್ಲಿ ಐಸಿಸಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಾಜಿ ಕ್ರಿಕೆಟ್‌ ದಿಗ್ಗಜರಾದ ಭಾರತದ ರಾಹುಲ್‌ ದ್ರಾವಿಡ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಐಸಿಸಿ ಆಯ್ಕೆ ಸಮಿತಿಯಲ್ಲಿದ್ದರು. ವರ್ಷದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ಪಾಕಿಸ್ತಾನ ಟೆಸ್ಟ್‌ ತಂಡದ ನಾಯಕ ಮಿಸ್ಬಾ ಉಲ್‌ ಹಕ್‌ ಪಾಲಾಗಿದೆ. ಈ ಪ್ರಶಸ್ತಿ ಪಡೆದ ಪಾಕ್‌ನ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಿಸ್ಬಾ ಅವರದ್ದಾಗಿದೆ. ವಿರಾಟ್‌ಗೆ ಏಕದಿನ ತಂಡದ ಸಾರಥ್ಯ ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿರುವ ವಿರಾಟ

Karnataka SSLC exam time table 🏹2017

Image

ನಿಮ್ಮ SBI ATM ಕಾರ್ಡ್ ನ್ನು SMS ಮೂಲಕ ON ಅಥವಾ OFF ಮಾಡುವ ವಿಧಾನ (operator charges apply for sms)

Image

ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ* January 8, 2 016 ರಂದು

*ಜವಾಹರ್ ನವೋದಯ ವಿದ್ಯಾಲಯಕ್ಕೆ 6 ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆ ಜನವರಿ 8. 2017 ರಂದು ಬೆಳಿಗ್ಗೆ 11-30 ರಿಂದ 1-30 ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ.* *ಆಯಾ ಜಿಲ್ಲೆಯ ನೋಂದಾಯಿತ ವಿದ್ಯಾರ್ಥಿಗಳು ಪ್ರವೇಶಪತ್ರಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.*

Expected new IT slabs .. ವಾರ್ಷಿಕ 4 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ?

ವಾರ್ಷಿಕ 4 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ? ಏಜೆನ್ಸೀಸ್ | Dec 20, 2016, 03.00 AM IST ಹೊಸದಿಲ್ಲಿ:ನೋಟು ರದ್ದಿನ ಲಾಭವನ್ನು ಜನರಿಗೆ ವರ್ಗಾಯಿಸುವುದಾಗಿ ಪ್ರಧಾನಿ ಹೇಳಿದ ಬೆನ್ನಿಗೆ ಆದಾಯ ತೆರಿಗೆ ಪದ್ದತಿಯಲ್ಲಿ ಭಾರೀ ಬದಲಾವಣೆಯ ಸುಳಿವು ಲಭಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ವಾರ್ಷಿಕ 2.5 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗಳಿಗೆ ಹೆಚ್ಚಿಸಲು ಮತ್ತು 4ರಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.10ರಷ್ಟು, 10ರಿಂದ 15 ಲಕ್ಷ ರೂ.ವರೆಗಿನ ವರಮಾನಕ್ಕೆ ಶೇ.15, 15ರಿಂದ 20 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.20, 20ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲು ಕೇಂದ್ರ ಚಿಂತನೆ ನಡೆಸಿದೆ. ಸದ್ಯವೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ನೀತಿಸಂಹಿತೆ ಜಾರಿಗೆ ಬರುವುದರಿಂದ ಅದಕ್ಕಿಂತ ಮೊದಲು ಹೊಸ ಆದಾಯ ತೆರಿಗೆ ನಿಯಮವನ್ನು ಘೋಷಿಸುವ ಸಾಧ್ಯತೆ ಇದೆ. ಹೊಸ ನಿಯಮ ಜಾರಿಗೆ ಬಂದರೆ ದೇಶದ ಬಹುಸಂಖ್ಯಾತ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ರಿಲೀಫ್‌ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ತೆರಿಗೆ ನೀತಿಯಲ್ಲಿ ಬದಲಾವಣೆ ವರದಿಯನ್ನು ಸರಕಾರ ತಳ್ಳಿಹಾಕಿದೆ. ಇದೊಂದು ಆಧಾರರಹಿತ ವರದಿ ಎಂದು ಸರಕಾರದ ವಕ್ತಾರ ಫ್ರಾಂಕ್‌ ನರ್ಹೋನಾ ಹೇಳಿದ್ದಾರೆ The proposed tax slabs, as reported by the channel belonging to Network18, are as follows: Income of Rs 4 lakh to 10 lakh m

ಭಾರತೀಯ ಭೂಸೇನೆ, ವಾಯುಪಡೆಗೆ ನೂತನ ದಳಪತಿಗಳು

Image
ಹೊಸದಿಲ್ಲಿ: ಭಾರತೀಯ ಭೂಸೇನೆ ಮತ್ತು ವಾಯುಪಡೆಗೆ ನೂತನ ದಳಪತಿಗಳ ನೇಮಕ ನಡೆದಿದೆ. ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಅವರು ಭೂಸೇನೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅದೇ ರೀತಿ ಏರ್‌ ಮಾರ್ಷಲ್‌ ಬಿ ಎಸ್‌ ಧನೋವಾ ಅವರು ವಾಯುಪಡೆಯ ಸಾರಥ್ಯವಹಿಸಿಕೊಳ್ಳಲಿದ್ದಾರೆ. ಹಾಲಿ ಮುಖ್ಯಸ್ಥರಾದ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಮತ್ತು ಏರ್‌ ಮಾರ್ಷಲ್‌ ಅರೂಪ್‌ ರಾಹಾ ಅವರ ಅಧಿಕಾರಾವಧಿ ಶೀಘ್ರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರ ನೇಮಕ ನಡೆದಿದೆ. ಜನವರಿ 10ರಂದು ಭೂಸೇನಾ ಮುಖ್ಯಸ್ಥ ಜನರಲ್‌ ಸುಹಾಗ್‌ ನಿವೃತ್ತಿಗೊಳ್ಳುತ್ತಿದ್ದು, ಅವರ ಉತ್ತರಾಧಿಕಾರಿಯಾಗಿ ರಾವತ್‌ ನೇಮಕ ನಡೆದಿದೆ. ವಿಳಂಬವಾಗಿ ಪ್ರಕಟ ನಿಯಮದ ಪ್ರಕಾರ ಹಾಲಿ ಭೂಸೇನಾ ಮುಖ್ಯಸ್ಥರು ಹುದ್ದೆಯಿಂದ ನಿವೃತ್ತರಾಗುವುದಕ್ಕೆ ಕನಿಷ್ಠ 60 ದಿನ ಮೊದಲು ಹೊಸ ಮುಖ್ಯಸ್ಥರ ಹೆಸರು ಪ್ರಕಟಿಸಬೇಕು. ಸಶಸ್ತ್ರಪಡೆಯ ಎಲ್ಲರಿಗೂ ಹೊಸ ಮುಖ್ಯಸ್ಥರು ಪರಿಚಿತರಾಗಲು ಮತ್ತು ಸೇನಾ ಮುಖ್ಯಸ್ಥರ ಕೆಲಸಗಳನ್ನು ಹೊಸ ಮುಖ್ಯಸ್ಥರು ಅರಿತುಕೊಳ್ಳಲು ಸಹಾಯವಾಗಬೇಕು ಎಂಬ ಕಾರಣದಿಂದ ಈ ನಿಯಮ ರೂಪಿಸಲಾಗಿದೆ. ಆದರೆ, ಜ. ದಲ್ಬೀರ್‌ ನಿವೃತ್ತರಾಗುವುದಕ್ಕೆ ಒಂದು ತಿಂಗಳೂ ಉಳಿದಿಲ್ಲ. ಹೊಸ ಮುಖ್ಯಸ್ಥರ ನೇಮಕ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ನುರಿತ ಸೇನಾನಿ ರಾವತ್‌ ಲೆ.ಜ.ರಾವತ್‌ ಒಬ್ಬ ನುರಿತ ಸೇನಾನಿ. ಡೆಹ್ರಾಡೂನ್‌ನ ಸೈನಿಕ ಶಾಲೆಯಲ್ಲಿ ಪದವಿ ಪಡೆದ ಲೆ.ಜ.ರಾವತ್‌ 19

ಪಂಕಜ್‌ಗೆ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ Monday, 12.12.2016

ಬೆಂಗಳೂರು:  ಭಾರತದ ಅಗ್ರ ಬಿಲಿಯರ್ಡ್ಸ್ ಆಟಗಾರ ಪಂಕಜ್ ಆಡ್ವಾಣಿ ತನ್ನ ವೃತ್ತಿ ಜೀವನದ 11 ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು ಪೀಟರ್ ಗಿಲ್‌ಕ್ರಿಸ್ಟ್ ಅವರನ್ನು ಸುಲಭದಲ್ಲಿ ಸೋಲಿಸಿದರು. ಫೈನಲ್‌ನಲ್ಲಿ ಆಡ್ವಾಣಿ ಎರಡು ಬಾರಿಯ ವಿಶ್ವಚಾಂಪಿಯನ್ ಗಿಲ್‌ಗ್ರಿಸ್ಟ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದರು. ಅವರು ಗಿಲ್‌ಕ್ರಿಸ್ಟ್ ಅವರನ್ನು 151-33, 150-95, 124-150, 101-150, 150-50, 152-37, 86-150, 151-104, 150-15 ಅಂತರದಿಂದ ಸೋಲಿಸಿದರು. ಆರಂಭದ ಎರಡು ಗೇಮ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂಕಜ್ 150-33, 150-95 ಅಂತರದಿಂದ ಜಯಿಸಿದ್ದರು. ಬಳಿಕ ತಿರುಗಿ ಬಿದ್ದ ಗಿಲ್‌ಗ್ರಿಸ್ಟ್ ಸತತ ಮೂರು ಗೇಮ್‌ಗಳನ್ನು ಗೆಲ್ಲುವ ಮೂಲಕ ಪಂಕಜ್‌ರವರನ್ನು ಒತ್ತಡಕ್ಕೆ ತಳ್ಳಿದರು. ಆದರೆ ಅನುಭವಿ ಪಂಕಜ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿದ್ದು, ಸತತ ಗೇಮ್‌ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿದರು. ಸೆಮಿಫೈನಲ್‌ನಲ್ಲಿ ಪಂಕಜ್ ಮ್ಯಾನ್ಮರ್‌ನ ಹಾಟೆ ವಿರುದ್ಧ 5-0 ಅಂಯತರದಿಂದ ಜಯಿಸಿದರು. ಗಿಲ್‌ಕ್ರಿಸ್ಟ್ ಧ್ವಜ್ ಹರಿಯಾ ವಿರುದ್ಧ 5-1 ಅಂತರದಿಂದ ಜಯಿಸಿ ಫೈನಲ್‌ಗೇರಿದ್ದರು.

2017ರ ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Image
ಬೆಂಗಳೂರು ಡಿ.12 :  2017ರ ಮೇ ತಿಂಗಳಿನಲ್ಲಿ ನಡೆಯುವ ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟ ಮಾಡಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಸೀಟುಗಳಿಗೆ ನೀಟ್ ಕಡ್ಡಾಯವಾಗಿರುವ ಕಾರಣ ವೈದ್ಯಕೀಯ ಸೀಟು ಹೊರತುಪಡಿಸಿ ಎಂಜಿನಿಯರಿಂಗ್, ಆಯುಷ್ ಹಾಗೂ ಕೃಷಿ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ. ಬೆಳಗ್ಗೆ ನಡೆಯುವ ಪರೀಕ್ಷೆಗಳು ಬೆಳಗ್ಗೆ 10.30ರಿಂದ 11.50ರವರೆಗೆ ನಡೆದರೆ ಮಧ್ಯಾಹ್ನದ ಪರೀಕ್ಷೆಗಳು 2.30ರಿಂದ 3.50ರವರೆಗೆ ನಡೆಯಲಿದೆ.  ಹೊರ ನಾಡು, ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಮಾತ್ರ ನಡೆಯುವ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯಲಿದೆ.

105 ಗ್ರಾಮಲೆಕ್ಕಾಧಿಕಾರಿ ಹುದ್ದೆ ಗಳಿಗೆ ನೇಮಕಾತಿ ಅಧಿಸೂಚನೆ(ಮೈಸೂರು ಜಿಲ್ಲೆಯಲ್ಲಿ)

Image