ಬೆಂಗಳೂರು, ಅಕ್ಟೋಬರ್ 18 ಜಾನಪದ ಅಕಾಡೆಮಿಯು 2012 ಮತ್ತು 2013ರ ಸಾಲಿನ ಜಾನಪದ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಳಿಗೆ ಜಿಲ್ಲೆಗೆ ಇಬ್ಬರಂತೆ ಒಟ್ಟು 30 ಜಿಲ್ಲೆಗಳಿಂದ 60 ಮಂದಿ ಕಲಾವಿದರನ್ನು ಹಾಗೂ 4 ಮಂದಿ ವಿದ್ವಾಂಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ತಲಾ 5000/-ರೂ, ಪ್ರಶಸ್ತಿ ಪತ್ರ, ಫಲಕಗಳೊಂದಿಗೆ ಗೌರವಿಸಲಾಗುವುದು. ಜಾನಪದ ವಿದ್ವಾಂಸರುಗಳಿಗೆ ತಲಾ 10000/-ರೂ, ಪ್ರಶಸ್ತಿ ಪತ್ರ ಫಲಕಗಳೊಂದಿಗೆ ಪುರಸ್ಕರಿಸಲಾಗುವುದು ಎಂದು ತಿಳಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ. 2012 ರ ತಜ್ಞ ಪ್ರಶಸ್ತಿಗಳು 1.ಡಾ.ಜೀಶಂಪ ಹೆಸರಿನಲ್ಲಿ ನೀಡುವ ತಜ್ಞ ಪ್ರಶಸ್ತಿಗಾಗಿ ಡಾ. ಸೈಯದ್ ಝಮೀರುಲ್ಲಾ ಷರೀಫ್, ಉತ್ತರ ಕನ್ನಡ ಜಿಲ್ಲೆ 2.ಡಾ.ಬಿ.ಎಸ್.ಗದ್ದಗಿಮಠ ಹೆಸರಿನಲ್ಲಿ ನೀಡುವ ತಜ್ಞ ಪ್ರಶಸ್ತಿಗಾಗಿ ಶ್ರೀ ದೇಶಾಂಶ ಹುಡಗಿ, ಬೀದರ್ ಜಿಲ್ಲೆ 2012 ರ ಗೌರವ ಪ್ರಶಸ್ತಿಗಳು ಕ್ರ.ಸಂ ಕಲಾವಿದರ ಹೆಸರು ಕಲಾಪ್ರಕಾರ ಜಿಲ್ಲೆ 01. ಶ್ರೀ ಅರ್ಜುನ ಮರಾಠ ಹೆಗ್ಗಿನಾಳ ಗ್ರಾಮ, ಸೊನ್ನ ಅಂಚೆ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ ಮೊಹರಂ ಪದ ಗುಲ್ಬರ್ಗಾ 02. ಶ್ರೀ ಬಸಪ್ಪ ಕಲ್ಲಪ್ಪ ಗುಡಿಗೇರ ಸುಳ್ಳ ಗ್ರಾಮ, ಹುಬ್ಬಳ್ಳಿ ತಾಲ್ಲೂಕು ಧಾರವಾಡ ಜಿಲ್ಲೆ, ಜಗ್ಗಲಿ...