Jun 10, 2015, 04.56AM IST * ಪ್ರಸ್ತುತ: ಲಕ್ಷ್ಮೀಕಾಂತ ಮಿರಜಕರ ಎಲ್ಲಿಯೂ ಉದ್ಯೋಗ ಸಿಗದವರು ಶಿಕ್ಷಣ ಕ್ಷೇತ್ರ ಪ್ರವೇಶಿಸು ತ್ತಾರೆ, ಅದು ವೃತ್ತಿ ಪ್ರೀತಿಯಿಂದ ಅಲ್ಲ,ಉದರನಿಮಿತ್ತಂ ಮಾತ್ರ-ಎಂಬುದು ಸಾರ್ವಜನಿಕರಿಂದ ಕೇಳಿ ಬರುವ ಮಾತು. ಇಂದು ಪರಿಸ್ಥಿತಿ ಹೀಗಿಲ್ಲ. ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿಯೇ ಈಗ ಕೆಲಸ ಪಡೆಯುತ್ತಾರೆ. ಇಂದು ಸಂಬಳ, ಭತ್ಯೆ ತಪ್ತಿಕರವಾಗಿವೆ. ಶಿಕ್ಷಕ ವೃತ್ತಿ ನೀರಸವಾದುದಲ್ಲ. ಅದೊಂದು ಸಜೀವ ಕಾರಂಜಿ. ನಿರ್ಭಾವ ಕಡತಗಳ ಮಧ್ಯೆ ಕುಳಿತು ಕೆಲಸ ಮಾಡುವುದಕ್ಕೂ, ಚಿಗುರೆಲೆಗಳ ಮಧ್ಯೆ ಮಕ್ಕಳ ಭವಿಷ್ಯ ನಿರ್ಮಾಣ ದಲ್ಲಿ ತೊಡಗುವುದಕ್ಕೂ ಅಜಗಜಾಂತರ ವ್ಯತ್ಯಾಸ. ಆದರೆ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಅಥವಾ ಅದನ್ನು ನಿರ್ವಹಿಸುತ್ತಲೇ ಬೇರೆ ಬೇರೆ ಕೆಲಸಗಳತ್ತ ಗಮನ ಹರಿಸ ಬೇಕು. ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲಿಗೆ ಹಲವು ಜವಾಬ್ದಾರಿಗಳು ಏರುತ್ತವೆ. ಅವರಿಗೆ ಯೋಜನಾ ಹೊರೆ ಜಾಸ್ತಿ ಯಾಗಿದೆ. ಜತೆಗೆ ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿಗಳನ್ನು ಸಮಯದ ಪರಿಮಿತಿಯೊಳಗೆ ನೀಡುತ್ತಾ, ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳುವ ಸವಾಲು ಅವರ ಎದುರಿಗೆ ಇರುತ್ತದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂದೋಲನ, ಸಮುದಾಯದತ್ತ ಶಾಲೆ, ಜನಗಣತಿ, ಮಕ್ಕಳ ಗಣತಿ, ಆರ್ಥಿಕ ಗಣತಿ,ಆನೆಕಾ...