●ಡಾ. ಎಂ.ಎಂ.ಕಲಬುರ್ಗಿ. (PSGadyal Teacher Vijayapur ) ಜನನ 1938. ಮರಣ 30-8-2015. ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಾಪುರ ಜಿಲ್ಲೆ ವೃತ್ತಿ ಲೇಖಕ, ಪ್ರಾಧ್ಯಾಪಕ, ಕುಲಪತಿ ರಾಷ್ಟ್ರೀಯತೆ ಭಾರತೀಯ ಪ್ರಕಾರ/ಶೈಲಿ ಕಥೆ, ಕವನ, ಕಾದಂಬರಿ ವಿಷಯ ಕರ್ನಾಟಕ, ರಾಮಾಯಣ, ಸಾಹಿತ್ಯ ಚಳುವಳಿ ನವೋದಯ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ ತಂದೆ ಮಡಿವಾಳಪ್ಪ. ನಾಲ್ಕೈದು ಸೋದರರು. ಮತ್ತು ಅವರ ಹೆಂಡತಿ ಮಕ್ಕಳೊಂದಿಗೆ ಕೂಡಿದ ಕುಟುಂಬ. ತಂದೆಯವರು ವೃದ್ಧಾಪ್ಯದಲ್ಲೂ ಸಧ್ರುಢರಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ. ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದಿ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಅವರು ಕರ್ನಾಟಕ ವಿಶ್ವ...