ಚೆನ್ನೈ, ಮಾ.29: ಮಂಗಳಯಾನದ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಮತ್ತೊಂದು ಮೈಲಿಗಲ್ಲು ದಾಟಿದೆ. ಅಮೆರಿಕದ ಜಿಪಿಎಸ್ ಗೆ ಸೆಡ್ಡು ಹೊಡೆಯಬಲ್ಲ ದೇಶಿ ತಂತ್ರಜ್ಞಾನದ ದಿಕ್ಸೂಚಿ ಉಪಗ್ರಹವನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಲಾಗಿದೆ. ಅಮೆರಿಕದ ಜಿಪಿಎಸ್ ಜೊತೆಗೆ ಭಾರತದ ಐಆರ್ ಎನ್ ಎಸ್ಎಸ್ 1-ಡಿ ಹೋಲಿಕೆ ಮಾಡಿ ಪ್ರಶ್ನೆ ಕೇಳಿದಾಗ ಇಸ್ರೋ ಅಧ್ಯಕ್ಷ ಕನ್ನಡಿಗ ಕೆಎಸ್ ಕಿರಣ್ ಕುಮಾರ್ ಅವರು ಉತ್ತರಿಸಿದ್ದು ಹೀಗೆ: The globe comes later, the country comes first. [ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ] ಐಆರ್ ಎನ್ ಎಸ್ಎಸ್ 1-ಡಿ ಯನ್ನು ಪಿಎಸ್ ಎಲ್ ವಿ ಸಿ -27 ಮೂಲಕ ಕಕ್ಷೆಗೆ ತಲುಪಿಸುವ ಮೂಲಕ ದೇಶಿ ತಂತ್ರಜ್ಞರು ಹೆಮ್ಮೆಯಿಂದ ಸಂಭ್ರಮಪಟ್ಟಿದ್ದಾರೆ. ಅದರೆ, ಈ ದಿಕ್ಸೂಚಿ ಯೋಜನೆ ಪೂರ್ಣಗೊಳ್ಳಲು ಈ ಸರಣಿಯ ಇನ್ನೂ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಬೇಕಿದೆ. ಸುಮಾರು 1,420 ಕೋಟಿ ರು ವೆಚ್ಚದ ಐಆರ್ ಎನ್ ಎಸ್ಎಸ್ ಯೋಜನೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಶನಿವಾರ(ಮಾ.28, 2015) ಉಡಾವಣೆಗೂ ಮುನ್ನ ಜುಲೈ1, 2013, ಏ.4 2014 ಹಾಗೂ ಅ.16, 2014ರಂದು ಯಶಸ್ವಿಯಾಗಿ ಉಪಗ್ರಹಗಳು ಕಕ್ಷೆ ಸೇರಿವೆ. ವೆಹಿಕಲ್ ಟ್ರಾಫಿಕಿಂಗ್, ನೌಕೆಗಳ ಪಥ ನಿರ್ವಹಣೆ, ಪ್ರಯಾಣಿಕರಿಗೆ ಮಾರ್ಗ ಸೂಚಿ, ಚಾಲಕರಿಗೆ ದಿಕ್ಸೂಚಿ, ಗಡಿ ಮತ್ತು ಸಾಗರ ದಿಕ್ಸೂಚಿ ಹೀಗೆ ಅಮೆರಿಕದ ಜಿಪಿಎಸ್ ತಂತ್ರಜ್ಞಾನ...