Posts

Showing posts from May, 2015

ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ. ನೀಡಲು ಸರ್ಕಾರದ ಚಿಂತನೆ

ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ ಬೆಂಗಳೂರು, ಮೇ 31- ಹೆಸರಾಂತ ಸಾಹಿತಿ ಹಾಗೂ ಜನಪ್ರಿಯ ಕವಿ ನಿಸಾರ್ ಅಹಮದ್ ಅವರಿಗೆ ರಾಷ್ಟ್ರಕವಿ ಪಟ್ಟ ಕಟ್ಟಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿರುವ ವಿವೇಚನೆಯ ಅಧಿಕಾರ ಬಳಸಿ ಶೀಘ್ರದಲ್ಲಿಯೇ ರಾಷ್ಟ್ರಕವಿ ಸ್ಥಾನಕ್ಕೆ ನಿಸಾರ್ ಅಹಮದ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಷ್ಟ್ರಕವಿ ಪಟ್ಟವನ್ನು ಅಲಂಕರಿಸಿದವರಲ್ಲಿ ಎಂ.ಗೋವಿಂದ ಪೈ ಮೊದಲಿಗರು. ಆನಂತರ ಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೆಯವರಾಗಿ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ರಾಷ್ಟ್ರಕವಿಯಾಗಿದ್ದರು. ಜಿ.ಎಸ್.ಶಿವರುದ್ರಪ್ಪ ಅವರು ಇತ್ತೀಚೆಗೆ ನಿಧನರಾಗಿರುವುದರಿಂದ ರಾಷ್ಟ್ರಕವಿ ಸ್ಥಾನ ತೆರವಾಗಿದೆ. ತೆರವಾಗಿರುವ ಸ್ಥಾನಕ್ಕೆ ಸಾಹಿತಿ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿ ರಾಷ್ಟ್ರಕವಿ ಪಟ್ಟಕ್ಕೆ ಸಾಹಿತಿಗಳ ಹೆಸರನ್ನು ಶಿಫಾರಸು ಮಾಡುವ ಬದಲು ರಾಷ್ಟ್ರಕವಿ ಪ್ರಶಸ್ತಿ ನೀಡುವುದು ಸರಿಯಲ್ಲ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ವರದಿಯನ್ನು ನೀಡಿದೆ. ಪ್ರಶಸ್ತಿಗೆ ಯಾರ ಹೆ...

ತಿಂಗಳ ತಿರುಳು : ಜೂನ್ ೨೦೧೫

Image

World No Tobacco Day (WNTD) is observed around the world every year on May 31

'ಆಹಾರವಿಲ್ಲದೇ ಬದುಕಲು ಸಾಧ್ಯವಿಲ್ಲ ಆದರೆ ತಂಬಾಕು ಇಲ್ಲದೇ ಬದುಕಬಹುದು' ಆಹಾರ ಬೆಳೆವ ರೈತ ಇನ್ನು ಜೋಪಡಿಯಲ್ಲೇ ಇದ್ದಾನೆ. ಸಿಗರೇಟ್ ತಯಾರಿಕಾ ಕಂಪನಿ ಮಾಲಿಕ ಬಹುಮಹಡಿ ಕಟ್ಟಡದಲ್ಲಿದ್ದಾನೆ'. ಇದು ವಾಸ್ತವದ ಸತ್ಯ. ತಂಬಾಕು ಕ್ಯಾನ್ಸರ್ ಕಾರಕ, ಇಂದೇ ತಂಬಾಕು ತ್ಯಜಿಸಿ, ನಾನು ಮುಖೇಶ್ ಗುಟ್ಕಾ ತಿನ್ನುತ್ತಿದೆ... ಶ್ವಾಸಕೋಶದಲ್ಲಿ ಇಷ್ಟೊಂದು ಟಾರ್, ಈ ಬಗೆಯ ಜಾಗೃತಿ ಜಾಹೀರಾತುಗಳನ್ನು ಎಲ್ಲಿಯಾದರೂ ನೋಡಿಯೇ ಇರುತ್ತೀರಿ. ಮೇ 31 ವಿಶ್ವ ತಂಬಾಕು ದಿನ. ಪ್ರತಿವರ್ಷ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುವ ತಂಬಾಕಿಗೆ ಕರುಣೆ ಎಂಬುದೇ ಇಲ್ಲ. ತಂಬಾಕು ನಿಷೇಧ ದಿನ ಮತ್ತೆ ಬಂದಿದೆ. ಈ ಬಾರಿಯಾದರೂ ವ್ಯಸನಿಗಳು ಧೂಮಪಾನ, ಗುಟ್ಕಾ, ಚೈನಿ, ತಂಬಾಕು ಜಗಿಯುವುದಕ್ಕೆ ಫುಲ್ ಸ್ಟಾಪ್ ಹಾಕಬೇಕಿದೆ. ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆಯಲ್ಲಿ ಕೆಲ ಸಂಗತಿಗಳನ್ನು ಅವಲೋಕಿಸಬೇಕಾಗುತ್ತದೆ. ಇದನ್ನು ಓದುದ ಮೇಲೆ ನೀವು ತಂಬಾಕು ಬಿಡಲು ಮನಸ್ಸು ಮಾಡಿದರೂ ಮಾಡಬಹುದು. ತಂಬಾಕಿಗೆ ಬಲಿಯಾಗುವವರ ಸಂಖ್ಯೆ ಎಷ್ಟು? ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುವಂತೆ ತಂಬಾಕಿನ ಚಟಕ್ಕೆ ಪ್ರತಿವರ್ಷ 6 ಮಿಲಿಯನ್ ಜನ ಬಲಿಯಾಗುತ್ತಿದ್ದಾರೆ. ಇದರಲ್ಲಿನ ಧೂಮಪಾನಿಗಳ ಪಾಲೇ(ಶೇ. 90) ಬಹಳ ದೊಡ್ಡದು. ತಂಬಾಕು ಸೇವನೆ ಅಥವಾ ಧೂಮಪಾನ ಕಡಿಮೆಯಾಗಿದೆಯೇ? ಹೌದು .. ಇದೊಂದು ಸಕಾರಾತ್ಮಕ ಬೆಳವಣಿಗೆ. ಜಗತ್ತಿನ 125 ದೇಶಗಳಲ್ಲಿ ಸಿಗರೇಟ್ ಕೊಳ...

ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಮೈಸೂರು ಮೂಲದ ವನ್ಯಾ ವಿಜೇತೆ

: ವಾಷಿಂಗ್ಟನ್ನಲ್ಲಿ ಶುಕ್ರವಾರ ನಡೆದ ಪ್ರತಿಷ್ಠಿತ 'ಸ್ಪೆಲ್ಲಿಂಗ್ ಬೀ' ಅಂತಿಮ ಸ್ಪರ್ಧೆಯಲ್ಲಿ ವನ್ಯಾ ಶಿವಶಂಕರ್ ಹಾಗೂ ಗೋಕುಲ್ ವೆಂಕಟಾಚಲಂ ಅವರು 2015ರ ಸ್ಕ್ರಿಪ್ಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಟ್ರೋಫಿ ಪಡೆದುಕೊಂಡರು ಎಎಫ್ಪಿ ಚಿತ್ರ ವಾಷಿಂಗ್ಟನ್ (ಪಿಟಿಐ): ವಾಷಿಂಗ್ಟನ್ನಲ್ಲಿ ನಡೆದ ವಿಶ್ವದ ಪ್ರತಿಷ್ಠಿತ 'ಸ್ಪೆಲ್ಲಿಂಗ್ ಬೀ' ಅಂತಿಮ ಸ್ಪರ್ಧೆಯಲ್ಲಿ ಮೈಸೂರು ಮೂಲದ ವಿದ್ಯಾರ್ಥಿನಿ ಸೇರಿದಂತೆ ಭಾರತ ಮೂಲದ ಇಬ್ಬರು ಅಮೆರಿಕ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಸಮಾನ ಅಂಕ ಗಳಿಸಿದ 13 ವರ್ಷದ ವನ್ಯಾ ಶಿವಶಂಕರ್, ಹಾಗೂ 14 ವರ್ಷದ ಗೋಕುಲ್ ವೆಂಕಟಾಚಲಂ ಅವರನ್ನು ಸ್ಕ್ರಿಪ್ಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಜಯಶಾಲಿಗಳೆಂದು ಘೋಷಿಸಲಾಯಿತು.ಚಿನ್ನದ ಟ್ರೋಫಿಯ ಜತೆ ಇಬ್ಬರಿಗೂ ತಲಾ 37 ಸಾವಿರ ಡಾಲರ್ (₨ 23.34 ಲಕ್ಷ) ನಗದು ಬಹುಮಾನ, ಪದಕ ನೀಡಿ ಸನ್ಮಾನಿಸಲಾಯಿತು. ಒಕ್ಲಾಮಾದಲ್ಲಿ ನೆಲೆಸಿರುವ ಭಾರತ ಮೂಲದ ಕೊಲ್ ಶಫೆರ್ ರೇ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 18 ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳ ಪೈಕಿ 14ರಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವ ಮೂಲಕ ತಮ್ಮ ಪಾರಮ್ಯ ಮರೆದಿದ್ದಾರೆ.ವನ್ಯಾ ಶಿವಶಂಕರ್ ಮೂಲತಃ ಮೈಸೂರಿನವರಾಗಿದ್ದು, ಅವರ ಅಕ್ಕ ಕಾವ್ಯಾ ಅವರು 2009ರಲ್ಲಿ ನಡೆದ ಸ್ಪೆಲ್ಲ...

ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್

Posted by: Gururaj | Sat, May 30, 2015, 15:45 [IST] ತುಮಕೂರು, ಮೇ 30 : ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ತುಮಕೂರು ಜಿಲ್ಲೆ ಪಾವಗಡದಲ್ಲಿ ನಿರ್ಮಾಣ ವಾಗಲಿದೆ. ಸುಮಾರು 10 ಸಾವಿರ ಎಕರೆ ಜಾಗದಲ್ಲಿ ಈ ಪಾರ್ಕ್ ತಲೆ ಎತ್ತಲಿದ್ದು, 2 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದೆ. ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ದೇಶದಾದ್ಯಂತ 25 ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗಾಗಿ ಕರ್ನಾಟಕದಲ್ಲಿ ಅತಿಹೆಚ್ಚು ಉಷ್ಣಾಂಶವಿರುವ ಪಾವಗಡ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ 10 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಒಟ್ಟು 2 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಏಷ್ಯಾದಲ್ಲೇ ಇದು ದೊಡ್ಡ ಸೌರ ವಿದ್ಯುತ್ ಪಾರ್ಕ್ ಆಗಲಿದೆ ಎಂದು ರವಿ ಕುಮಾರ್ ವಿವರಣೆ ನೀಡದರು. ಮಧ್ಯಪ್ರದೇಶದಲ್ಲಿ 750 ಮೆ.ವ್ಯಾ, ಆಂಧ್ರಪ್ರದೇಶದಲ್ಲಿ 1 ಸಾವಿರ ಮೆ.ವ್ಯಾ. ಸೋಲಾರ್ ಪಾರ್ಕ್ಗಳಿವೆ. ಇವುಗಳನ್ನು ಹೊರತುಪಡಿಸಿದರೆ ಪಾವಗಡದ 2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಪಾರ್ಕ್ ಏಷ್ಯಾಕ್ಕೇ ಪ್ರಥಮವಾಗಲಿದೆ ಎಂದು ತಿಳಿಸಿದರು. ಸೌರ ವಿದ...

ನೈಜೀರಿಯಾ ಅಧ್ಯಕ್ಷರಾಗಿ ಬುಹಾರ

ಅಬುಜಾ (ಎಎಪ್ಪಿ): ಸೇನಾ ಗೌರವದೊಂದಿಗೆ ನೈಜೀರಿಯಾದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಬುಹಾರಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ಆಡಳಿತ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ್ದು, ವಿರೋಧ ಪಕ್ಷದ ಅಭ್ಯರ್ಥಿ ಬುಹರಿ ಜಯಗಳಿಸುವ ಮೂಲಕ ಅಧ್ಯಕ್ಷರಾಗಿದ್ದಾರೆ. 72 ವರ್ಷದ ಬುಹಾರಿ ಅವರಿಗೆ ನೈಜಿರಿಯಾ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಮಾಣ ವಚನ ಬೋಧಿಸಿದರು. ಆರ್ಥಿಕ ಸಂಕಷ್ಟ ಮತ್ತು ಬೊಕೊ ಹರಮ್ ಉಗ್ರಗಾಮಿಗಳ ಉಪಟಳದಿಂದ ದೇಶ ತತ್ತರಿಸಿದ್ದು, ನೂತನ ಅಧ್ಯಕ್ಷರಿಗೆ ಈ ಎರಡೂ ಸಮಸ್ಯೆಗಳು ಸವಾಲಾಗಿವೆ.

ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯ (ಯು ಎಸ್ ಎ)

Posted by: Madhusoodhan Hegde | Fri, May 29, 2015, 15:49 [IST] ವಾಷಿಂಗ್ ಟನ್, ಮೇ 29: ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯವಾಗಿದೆ. ಇಂಡೋ-ಅಮೇರಿಕನ್ ವನ್ಯಾ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 54 ವರ್ಷದ ನಂತರ ಕಳೆದ ವರ್ಷ(2014) ರಲ್ಲಿ ಸ್ಪೆಲ್ಲಿಂಗ್ ಬೀ ಟೈ ನಲ್ಲಿ ಅಂತ್ಯವಾಗಿತ್ತು. ಈ ಸಾರಿಯೂ ಇಬ್ಬರು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಸಹೋದರಿಯರ ಸಾಧನೆ ಈ ಬಾರಿ ಪ್ರಶಸ್ತಿ ಪಡೆದುಕೊಂಡ ವನ್ಯಾ ಶಿವಶಂಕರ್(13) ಅಕ್ಕ ಕಾವ್ಯಾ 2009ರಲ್ಲಿ ಸ್ಪೆಲ್ಲಿಂಗ್ ಬೀ ವಿಜೇತರಾಗಿದ್ದರು. ಕಾನ್ ಸಾಸ್ ನಿವಾಸಿಯಾಗಿರುವ ವನ್ಯಾ ಅಕ್ಕನ ಸಾಧನೆಯನ್ನು ಸರಿಗಟ್ಟಿದ್ದಾಳೆ. 14 ವರ್ಷದ ವೆಂಕಾಟಾಚಲಂ ಸಾಧನೆ ಅಮೆರಿಕದ ಚೆಸ್ಟರ್ ಫೀಲ್ಡ್ ನಿವಾಸಿ ಗೋಕುಲ್ ವೆಂಕಟಾಚಲಂ ಅವರಿಗೂ ಇದು ಕೊನೆಯ ಅವಕಾಶವಾಗಿತ್ತು. ಇಬ್ಬರು ಸ್ಫರ್ಧಾಳುಗಳು ಐದನೇ ಬಾರಿ ಸ್ಪೆಲ್ಲಿಂಗ್ ಬೀ ನಲ್ಲಿ ಭಾಗಿಯಾಗಿದ್ದರು. ವನ್ಯಾ ಶಿವಕುಮಾರ್ ತನ್ನ ಗೆಲುವನ್ನು ಆಕೆಯ ಅಜ್ಜಿಗೆ ಅರ್ಪಿಸಿದ್ದಾಳೆ. ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣವಾಯಿತು ಎಂದು ವನ್ಯಾ ಹೇಳುತ್ತಾರೆ. ಕೊನೆಯ ಸುತ್ತು ಎಂದು ನಾನು ಮೊದಲು ಸ್ವಲ್ಪ ಆತ್ಮವಿಶ್ವಾಸ ಕಳೆದಯಕೊಂಡಿದ್ದೆ. ಆದರೆ ನಂತರ ತುರುಸಿನಿಂದ ಭಾಗವಹಿಸಿದೆ ಎಂದು ಗೋಕುಲ್ ಹೇಳಿದ್ದಾರೆ. ಅಂತಿಮ ಸುತ್ತ...

ಪೇಸ್ಗೆ 700ನೇ ಜಯದ ಮಾಲೆ, ಫೆಡರರ್ 100ನೇ ಜತೆಗಾರ?

Published: 29 May 2015 11:13 AM IST ಲಿಯಾಂಡರ್ ಪೇಸ್ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ. ಸುದೀರ್ಘ 25 ವರ್ಷಗಳ ವೃತ್ತಿ ಜೀವನದಲ್ಲಿ ಪೇಸ್ 700ನೇ ಜಯ ಸಂಪಾದಿಸಿದ್ದಾರೆ. ಈವರೆಗೆ 99 ಜತೆಗಾರರೊಂದಿಗೆ ಆಡಿರುವ ಪೇಸ್ಗೆ 100ನೇ ಜತೆಗಾರ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ. ಬುಧವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾದ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್ ತಮ್ಮ 99ನೇ ಜತೆಗಾರ ಡೇನಿಯಲ್ ನೆಸ್ಟರ್ ಜತೆಗೆ, ಗೆಲವು ದಾಖಲಿಸಿದ್ದು ಅವರ ಡಬಲ್ಸ್ ವೃತ್ತಿಜೀವನದ 700ನೇ ಗೆಲುವಾಗಿತ್ತು. ಇದೀಗ 100ನೇ ಜತೆಗಾರ ಯಾರಾಗುವರು ಎಂಬ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಪೇಸ್ ಅವರು ರೋಜರ್ ಫೆಡರರ್ 100ನೇ ಜತೆಗಾರನಾಗಲಿದ್ದಾರೆ ಎಂಬ ಗಾಳಿಸುದ್ದಿಯಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೇಸ್, ಸದ್ಯಕ್ಕೆ ಡೇನಿಯಲ್ ಜತೆಗಾರ. ಇನ್ನಷ್ಟು ದಿನಗಳ ಕಾಲ ಅವರ ಜತೆಯಲ್ಲಿರುವ ಎಂದಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. 100 ಹಾಗೂ 101ನೇ ಸಂಖ್ಯೆ ವಿಶೇಷವಾಗಿರುವುದರಿಂದ ಸೂಕ್ತ ಜೊತೆಗಾರ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಪೇಸ್ ತಿಳಿಸಿದ್ದಾರೆ. Posted by: Vishwanath S | Source: Online Desk

9999- ನಂ.1 ಫ್ಯಾನ್ಸಿ ನಂಬರ್ ಆಗಿ ಘೋಷಣೆ:-RTO

Image
Posted by: Mahesh | Thu, May 28, 2015, 13:40 [IST] ಬೆಂಗಳೂರು, ಮೇ.28: ವಾಹನಗಳಿಗೆ ಫ್ಯಾನ್ಸಿ ನಂಬರ್ ಪಡೆದುಕೊಳ್ಳುವ ಹುಚ್ಚು ಹಲವು ವಾಹನ ಮಾಲೀಕರಿಗಿರುತ್ತದೆ. ಅದರೆ, ಫ್ಯಾನ್ಸಿ ನಂಬರ್ ಬೇಕೆಂದರೆ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಬೇಕು. ಈ ರೀತಿ ಬಿಡ್ಡಿಂಗ್ ನಡೆದು '9999' ಸಂಖ್ಯೆಗೆ ಅತಿ ಹೆಚ್ಚಿನ ಬಿಡ್ಡಿಂಗ್, ಬೇಡಿಕೆ ಬಂದಿದೆ ಎಂದು ಆರ್ ಟಿಒ ಪ್ರಕಟಿಸಿದೆ. ಸುಮಾರು 22 ಜನ ಬಿಡ್ಡರ್ ಗಳು ಸುಮಾರು 50ಕ್ಕೂ ಅಧಿಕ ಫ್ಯಾನ್ಸಿ ನಂಬರ್ ಗಳ ಮೇಲೆ ಬಿಡ್ ಮಾಡಿದ್ದರು. ಡಲ್ ಹೊಡೆಯುತ್ತಿದ್ದ ಬಿಡ್ ಪ್ರಕ್ರಿಯೆಗೆ ಸಕತ್ ಕಿಕ್ ಸಿಕ್ಕಿದ್ದು ಮಾತ್ರ 9999 ಎಂಬ ಸಂಖ್ಯೆ ಬಿಡ್ಡಿಂಗ್ ಗೆ ಬಂದಾಗ ಮಾತ್ರ. ಬಿಡ್ಡಿಂಗ್ ಕೊನೆಗೆ 1.30 ಲಕ್ಷರು ಪ್ಲಸ್ 75,000 ರು (ಕನಿಷ್ಠ ಬಿಡ್ ಮೊತ್ತ) ನೀಡಿ ತಮ್ಮ ವಾಹನಕ್ಕೆ ನೋಂದಣಿ ಸಂಖ್ಯೆ ( '9999' ಸಂಖ್ಯೆ ಪಡೆದುಕೊಂಡಿದ್ದಾರೆ. ಐಷಾರಾಮಿ ಎಸ್ ಯುವಿ ವಾಹನಕ್ಕೆ ಈ ಸಂಖ್ಯೆಯನ್ನು ಇಡುವುದಾಗಿ ಸಂಖ್ಯೆ ಗೆದ್ದ ನಟರಾಜ್ ನಗರಹಳ್ಳಿ ಹೇಳಿದ್ದಾರೆ. ಇಂದಿರಾನಗರ ಪ್ರಾದೇಶಿಕ ವಾಹನ ನೋಂದಣಿ ಕಚೇರಿಯಲ್ಲಿ ಅತಿ ಹೆಚ್ಚು ಬೆಲೆ ಮಾರಾಟವಾದ ಸಂಖ್ಯೆ (KA 03 9999) ಒಟ್ಟಾರೆ 11 ಫ್ಯಾನ್ಸಿ ಸಂಖ್ಯೆಗಳು 1.80 ಲಕ್ಷ ರು ಮೌಲ್ಯಕ್ಕೆ ಮಾರಾಟವಾಗಿದೆ. ಕನಿಷ್ಠ ಬಿಡ್ಡಿಂಗ್ ಬೆಲೆ 75,000 ರು ಪಾವತಿಸಿ ಬಿಡ್ಡಿಂಗ್ ಕೂಗುವ ಅವಕಾಶ ನ...

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ): ಕಿರು ಮಾಹಿತಿ

Published: 27 May 2015 03:52 PM IST | Updated: 27 May 2015 03:52 PM ISTಮುಂದಿನ ವರ್ಷ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ ಹೊಸ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಏಪ್ರಿಲ್ 1, 2016ಕ್ಕೆ ಜಾರಿಗೆ ಬರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದನ್ನು ಸಂಸತ್ತಿನಿಂದ ಒಪ್ಪಿಗೆ ಪಡೆದು ಜಾರಿಗೆ ತರಲು  ಬೇಕಾದ ಎಲ್ಲಾ ವಿಧಾನಗಳನ್ನು ಅಳವಡಿಸಲಾಗಿದೆ ಮತ್ತು ಅರ್ಧದಷ್ಟು ರಾಜ್ಯಗಳು ಈಗಾಗಲೇ ಒಪ್ಪಿಕೊಂಡಿವೆ ಎಂದು ಅವರು  ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಸರಕು ಮತ್ತು ಸೇವಾ ತೆರಿಗೆ ವಿಧಾನವನ್ನು ನೀವು ಬಹಳಷ್ಟು ಸಾರಿ ಕೇಳಿರಬಹುದು. ಹಾಗಂದರೆ ಏನು? ಅದು ನಮ್ಮ ನಿತ್ಯ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನೋಡೋಣ. ಜಿಎಸ್ ಟಿ ಎಂದರೇನು?: ಉತ್ಪಾದನೆ,ಮಾರಾಟ,ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ...

BJP leader and Rajasthan's Pali MP PP Chaudhary has been selected for the Sansad Ratna 2015 Awards for his performance in the house till the end of the budget session.

ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಪಿಪಿ ಚೌದರಿ Published: 27 May 2015 03:46 PM IST | Updated: 27 May 2015 03:47 PM IST ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಚೆನ್ನೈ: ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ರಾಜಸ್ತಾನದ ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಅವರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಒಲಿದುಬಂದಿದೆ. ಬಿಜೆಪಿ ಸದಸ್ಯ ಪಿಪಿ ಚೌಧರಿ ಅವರು ಸಂಸತ್ತಿನ ಮುಂಗಡಪತ್ರದ ಅಧಿವೇಶನದ ಕೊನೆಯವರೆಗೆ ಸದನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 2015ರ "ಸಂಸದ ರತ್ನ" ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. 16ನೇ ಲೋಕಸಭೆಯಲ್ಲಿ ಮುಂಗಡಪತ್ರ ಕಲಾಪದ ಅಂತ್ಯದವರೆಗೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ್ದಕ್ಕಾಗಿ dtt ರತ್ನ-2015" ಪ್ರಶಸ್ತಿಗೆ ಪಾತ್ರರಾಗಿರುವ ನಾಲ್ವರು ಸrಂಸದರಲ್ಲಿ ಚೌಧರಿ ಕೂಡ ಒಬ್ಬರಾಗಿದ್ದಾರೆ' ಎಂದು ಪ್ರೈಮ್​ಪಾಯಿಂಟ್ ಪೌಂಡೇಷನ್​ನ ಅಧ್ಯಕ್ಷ ಕೆ. ಶ್ರೀನಿವಾಸನ್ ಬುಧವಾರ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸರ್ಕಾರೇತರ ಸಂಘಟನೆಯಾಗಿರುವ ಪ್ರೈಮ್​ಪಾಯಿಂಟ್ ಫೌಂಡೇಷನ್ ಸಂಸ್ಥೆಯು ಸಂಸತ್ತಿನ ಚರ್ಚೆಗಳಲ್...

CET 2015: VERIFICATION ON 3rd JUNE , SEAT MATRIX ON 13th JUNE

ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯಲ್ಲೂ ಬದಲಾವಣೆ ವಿಕ ಸುದ್ದಿಲೋಕ | May 28, 2015, 04.08AM IST ಜೂನ್ 3ರಿಂದ ದಾಖಲಾತಿ ಪರಿಶೀಲನೆ ಆರಂಭ, 13ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಬೆಂಗಳೂರು: ಜೂನ್ 1ಕ್ಕೆ ಸಿಇಟಿ ಫಲಿತಾಂಶ ಮುಂದೂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತರೆ ಕೌನ್ಸೆಲಿಂಗ್ ಪ್ರಕ್ರಿಯೆಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಿದೆ. ಜೂನ್ 3ರಂದು ವಿಶೇಷಚೇತನ ಅಭ್ಯರ್ಥಿಗಳ ವೈದ್ಯ ಪರೀಕ್ಷೆ, ಎನ್ಸಿಸಿ ಅಭ್ಯರ್ಥಿಗಳ ಹಾಗೂ ಕ್ರೀಡಾ ಕೋಟಾ ದಾಖಲಾತಿ ಪರಿಶೀಲನೆ ಜೂನ್ 4ರಂದು ಬೆಳಗ್ಗೆ 11 ಗಂಟೆ ನಂತರ ಪ್ರಾಧಿಕಾರದ ಕಚೇರಿ ಆವರಣದಲ್ಲಿ ನಡೆಯಲಿದೆ. ಹೊರನಾಡು/ ಗಡಿನಾಡು, ಜಮ್ಮು ಮತ್ತು ಕಾಶ್ಮೀರದ ವಲಸಗರು, ಸೈನಿಕರು/ಮಾಜಿ ಸೈನಿಕರ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್, ಕೇಂದ್ರ ಸಶಸ್ತ್ರ ಪೊಲೀಸ್ ದಳ/ ದಳದ ಮಾಜಿ ಸಿಬ್ಬಂದಿ, ಎನ್ಸಿಸಿ (ಪ್ರಿಫರೆನ್ಸ್-80) ಮತ್ತು ಕ್ರೀಡೆ (ಪ್ರಿಫರೆನ್ಸ್-5) ಅಭ್ಯರ್ಥಿಗಳು ಬೆಂಗಳೂರು ಕೇಂದ್ರದಲ್ಲಿಯೇ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು. ಉಳಿದವರು ಈಗಾಗಲೇ ಪ್ರಕಟಿಸಿರುವ 13 ಸಹಾಯ ಕೇಂದ್ರಗಳಲ್ಲಿ ಜೂನ್ 5ರಿಂದ 20ರವರೆಗೆ ನಡೆಯುವ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ ಸುತ್ತಿನ ಆಪ್ಷನ್ ಎಂಟ್ರಿ ವೇಳಾಪಟ್ಟಿ: ಜೂನ್ 1...

ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ

Written by: ಬಿ.ಎಂ. ಲವಕುಮಾರ್, ಮೈಸೂರು | Wed, May 27, 2015, 14:56 [IST] ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಸುಮಾರು ಅರ್ಧ ಸಹಸ್ರಮಾನಕ್ಕೂ ಹೆಚ್ಚು ಕಾಲ ಕರ್ನಾಟಕವನ್ನು, ಸಂಸ್ಕೃತಿಯನ್ನು, ಶ್ರೀಮಂತಿಕೆಯನ್ನು ಮೆರೆದಾಡಿಸಿದ ಹೆಗ್ಗಳಿಕೆ ಮೈಸೂರು ಅರಸರದು. ಈ ಅವಧಿಯಲ್ಲಿ ಯಾವ್ಯಾರ ರಾಜರು ಮೈಸೂರು ಪ್ರಾಂತ್ಯವನ್ನು ಆಳಿ ಮೆರೆದಾಡಿದರು ಎಂಬುದರತ್ತ ಒಂದು ನೋಟ ಇಲ್ಲಿದೆ. ಶ್ರೀಕಂಠದತ್ತ ಒಡೆಯರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತುಂಬುತ್ತಿದ್ದು, ಮೈಸೂರಿನ ಭವ್ಯ ಪರಂಪರೆ ಮುಂದುವರಿಯುತ್ತಿದೆ. ಮೈಸೂರು ಮಹಾರಾಜರ ಭವ್ಯ ಇತಿಹಾಸದ ಪುಟಗಳನ್ನು ಇಲ್ಲಿ ಓದಿರಿ - ಸಂಪಾದಕ. *** ಮೈಸೂರು ರಾಜರ ಆಡಳಿತಾವಧಿ ಚರಿತ್ರೆ ಪ್ರಕಾರ 1399ರಿಂದ ಆರಂಭವಾಗುತ್ತದೆ. ಯದುರಾಯರನ್ನು ಯದುವಂಶದ ಸ್ಥಾಪಕರೆಂದು ಹೇಳಲಾಗುತ್ತದೆ. ಯದುರಾಯ ಮತ್ತು ಕೃಷ್ಣರಾಯರು ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಕ್ಕಳಾಗಿದ್ದು, ಇವರು ಪುರಾಣ ಪ್ರಸಿದ್ಧ ಯಾದವಗಿರಿ(ಮೇಲುಕೋಟೆ)ಗೆ ತಮ್ಮ ಮನೆ ದೇವರಾದ ಚೆಲುವನಾರಾಯಣ ಸ್ವಾಮಿಯ ದರ್ಶನ ಮಾಡಲು ಆಗಮಿಸುತ್ತಾರೆ. ದರ್ಶನ ಮುಗಿಸಿಕೊಂಡು ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ. ಈ ಸಂದರ್ಭ ಮೈಸೂರಿನಲ್ಲಿ ಪಾಳೆಗಾರರಾಗಿದ್ದ ಚಾಮರಾಜ ಎಂಬುವರು ಆಡಳಿತ ನಡೆಸಿ ತೀರಿಕೊಂಡಿದ್ದರು. ಇವರಿಗೆ ಹೆಂಡತಿ ಹಾ...

👆2015-16 ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಕೈಕೊಳ್ಳಬೇಕಾದ ಸಿದ್ದತೆ ಹಾಗೂ ನಿರ್ವಹಿಸಬೇಕಾದ ದಾಖಲೆಗಳು.

Image
👆2015-16 ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಕೈಕೊಳ್ಳಬೇಕಾದ  ಸಿದ್ದತೆ ಹಾಗೂ ನಿರ್ವಹಿಸಬೇಕಾದ ದಾಖಲೆಗಳು.

ಕಿಯೋನಿಕ್ಸ್ - ಎನ್ಇಸಿ ಜತೆ ದೇಶದ ಪ್ರಥಮ ಸೈಬರ್ ತರಬೇತಿ ಕೇಂದ್ರ

Published 26-May-2015 14:14 IST ಮಂಗಳೂರು: ರಾಜ್ಯದ ಕಿಯೋನಿಕ್ಸ್ ಹಾಗೂ ಜಪಾನಿನ ಎನ್ಇಸಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸೈಬರ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಿದೆ. ಈ ಕುರಿತಂತೆ ನಗರದ ಕೊಟ್ಟಾರದಲ್ಲಿರುವ ಕಿಯೋನಿಕ್ಸ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಯು. ಬಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಕಿಯೋನಿಕ್ಸ್ ಹಾಗೂ ಜಪಾನ್ನ ನ್ಯಾಶನಲ್ ಎಲೆಕ್ಟ್ರಾನಿಕ್ ಕಾರ್ಪೊರೇಶನ್ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು ಮುಂದಿನ 3 ತಿಂಗಳಲ್ಲಿ ಸೈಬರ್ ತರಬೇತಿ ಕೇಂದ್ರ ಆರಂಭಿಸಲಾಗುವುದು. ನಂತರ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ನಗರದ ಎ.ಜೆ. ಮಂಗಳೂರಿನ ಎ.ಜೆ. ಆಸ್ಪತ್ರೆ ಹಿಂಭಾಗದಲ್ಲಿರುವ ಕಿಯೋನಿಕ್ಸ್ ಹೊಂದಿರುವ ಐದು ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಐಟಿ ಪಾರ್ಕ್, ಒಂದೂವರೆ ಎಕರೆ ಪ್ರದೇಶದಲ್ಲಿ ಎಸ್ಟಿಪಿಐ ಪಾರ್ಕ್ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು ಎಂದರು. ಈ ಸಂದರ್ಭ ಕಿಯೋನಿಕ್ಸ್ ಮಂಗಳೂರು ಕೇಂದ್ರದ ಮ್ಯಾನೇಜರ್ ಸದಾನಂದ, ಸುಧಾಕರ ನಾಯಕ್, ಪ್ರವೀಣ್ಚಂದ್ರ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
Image
ಗದಗದಲ್ಲೊಂದು ಮಾದರಿ ಗ್ರಾಮ(ಹುಲಕೋಟಿ) : 40 ವರ್ಷದಿಂದ ಚುನಾವಣೆಯನ್ನೇ ಕಂಡಿಲ್ಲ ಈ ಗ್ರಾಮ ಪಂಚಾಯತ್.. ಗದಗ (ಮೇ 26) : ನಾಲ್ಕು ದಶಕಗಳಿಂದ ಆ ಗ್ರಾಮ ಚುನಾವಣೆಯನ್ನೇ ಕಂಡಿಲ್ಲ.. ಅಲ್ಲಿ ಈಗಲೂ ಪ್ರಭಾವಿಗಳ ಮಾತೇ ವೇದವಾಕ್ಯ.. ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಗ್ರಾಮ ಈಗ ರಾಜ್ಯದಲ್ಲೇ ಮಾದರಿ ಗ್ರಾಮವಾಗ್ತಾ ಇದೆ.. ಅದ್ಯಾವ ಗ್ರಾಮ ಅಂತಿರಾ..? ಹಾಗಾದ್ರೆ ಈ ಸ್ಟೋರಿ ನೋಡಿ... ಇದು ಗದಗ ತಾಲೂಕಿನ ಹುಲಕೋಟಿ ಗ್ರಾಮ.. ಇಲ್ಲಿ ಮಂಡಲ ಪಂಚಾಯತ್'​ನಿಂದ ಹಿಡಿದು ಇಂದಿನ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆವರೆಗೂ ಯಾವುದೇ ಚುನಾವಣೆ ನಡೆದಿಲ್ಲ. ಈ ಗ್ರಾಮ ಪಂಚಾಯತ್ 28 ಸದಸ್ಯರನ್ನ ಒಳಗೊಂಡಿದೆ. 26 ಜನ ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಬಾರಿ ಕೇವಲ ಎರಡು ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ. ಅದು ರಾಜಿ ಸಂಧಾನ ಮಾಡುವ ಮೂಲಕ ಅವಿರೋಧ ಆಯ್ಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ. ಹುಲಕೋಟಿ ಹುಲಿ ಎಂದು ಹೆಸರು ವಾಸಿಯಾದ ದಿವಂಗತ ಕೆ.ಹೆಚ್. ಪಾಟೀಲರಿಂದ ಈಗಿನ ಸಚಿವ ಹೆಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ಮಾತು ಈ ಗ್ರಾಮದಲ್ಲಿ ವೇದವಾಕ್ಯ.. ಅವರ ಮಾತನ್ನ ಯಾರು ತಳ್ಳಿ ಹಾಕುವಂತಿಲ್ಲ. ಯಾರ ಹೆಸರನ್ನ ಸೂಚಿಸ್ತಾರೋ ಅವರೇ ಅಧ್ಯಕ್ಷ ಹಾಗೂ ಸದಸ್ಯರಾಗಬೇಕು. ಜೊತೆಗೆ ಯಾರಿಗೂ ಅನ್ಯಾಯವಾಗದಂತೆ ಎಲ್ಲಾ ಜಾತಿ ಧರ್ಮದಿಂದಲೂ ಒಬ್ಬೊಬ್ಬ ಸದಸ್ಯರನ್ನ ಆ...

ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಸೈಕೊಮೆಟ್ರಿಕ್ ಪರೀಕ್ಷೆ

ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಸೈಕೊಮೆಟ್ರಿಕ್ ಪರೀಕ್ಷೆ May 26,2015, 04.59am ಹೊಸದಿಲ್ಲಿ: ಸಾರ್ವಜನಿಕ ಬ್ಯಾಂಕ್ಗಳ ಉನ್ನತ ಮಟ್ಟದ ಹುದ್ದೆಗಳ ಆಕಾಂಕ್ಷಿಗಳಿಗೆ ಎರಡು ವಿಧದ ಸೈಕೊ ಮೆಟ್ರಿಕ್ ಪರೀಕ್ಷೆಗಳನ್ನು ನಡೆಸಲು ಸರಕಾರ ನಿರ್ಧರಿಸಿದೆ. ವಸೂಲಾಗದ ಸಾಲಗಳ (ಅನುತ್ಪಾದಕ ಸಾಲ) ಹೊರೆಯಿಂದ ಬಳಲುತ್ತಿರುವ ಬ್ಯಾಂಕ್ಗಳ ನಾಯಕತ್ವವನ್ನು ಅಭ್ಯರ್ಥಿಗಳು ವಹಿಸಲು ಶಕ್ತರೇ ಎಂಬುದನ್ನು ಪರಿಶೀಲಿಸುವುದು ಇದರ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಅಭ್ಯರ್ಥಿಯ ಹಿನ್ನೆಲೆ ತಪಾಸಣೆ, ವೈಯಕ್ತಿಕ ಸಂದರ್ಶನ, ವಿಷಯ ಪರಿಣತಿಯ ಪರೀಕ್ಷೆಯ ಭಾಗವಾಗಿ ಸೈಕೊಮೆಟ್ರಿಕ್ ಕೂಡ ಇರಲಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕಚ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ 5 ಪಿಎಸ್ಯು ಬ್ಯಾಂಕ್ಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 50 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸೈಕೊಮೆಟ್ರಿಕ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ನಾಯಕತ್ವ ಗುಣ, ಸಾಂದರ್ಭಿಕ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ, ಒಟ್ಟಾರೆ ವ್ಯಕ್ತಿತ್ವದ ಪರೀಕ್ಷೆ ನಡೆಯಲಿದೆ.

Sad news. John F. Nash Jr., awarded the 1994 Prize in Economic Sciences, dies in car crash.(86yrs)

Image
By ERICA GOODE MAY 24, 2015 John F. Nash Jr., a mathematician who shared a Nobel Prize in 1994 for work that greatly extended the reach and power of modern economic theory and whose decades-long descent into severe mental illness and eventual recovery were the subject of a book and a 2001 film, both titled “A Beautiful Mind,” was killed, along with his wife, in a car crash on Saturday in New Jersey. He was 86. Dr. Nash, and his wife, Alicia, 82, were in a taxi on the New Jersey Turnpike when the driver lost control while trying to pass another car and hit a guard rail and another vehicle, said Sgt. Gregory Williams of the New Jersey State Police. The couple were ejected from the cab and pronounced dead at the scene. The taxi driver and the driver of the other car were treated for non-life threatening injuries. No criminal charges have been filed. Dr. Nash was widely regarded as one of the great mathematicians of the 20th century, k...

ಜಾರಿದ ಶಿರ ಜೋಡಿಸಿದ ಡಾ|| ಅನಂತ ಕಾಮತ್

Image
ಲಂಡನ್: ಬೆನ್ನಹುರಿಯಿಂದ ಶಿರ (ತಲೆಬುರುಡೆ) ಜಾರಿ ಸಂಪರ್ಕ ಕಳೆದುಕೊಂಡರೆ ವ್ಯಕ್ತಿ ಬದುಕಿ ಉಳಿಯಲು ಸಾಧ್ಯವೇ? ಆದರೆ ಜಾರಿದ ಶಿರವನ್ನು ಮತ್ತೆ ಸ್ವಸ್ಥಾನದಲ್ಲಿ ಕೂರಿಸಿ ವ್ಯಕ್ತಿಯನ್ನು ಬದುಕಿಸಿದ ಅಪರೂಪದ ಸಾಧನೆಯನ್ನು ಭಾರತೀಯ ವೈದ್ಯರೊಬ್ಬರು ಮಾಡಿದ್ದಾರೆ. ಕಾರು ಅಪಘಾತದಲ್ಲಿ ಬೆನ್ನ ಹುರಿಯ ತುದಿಯಿಂದ ಜಾರಿದ ಬ್ರಿಟಿಷ್ ವ್ಯಕ್ತಿಯೊಬ್ಬನ ಶಿರವನ್ನು ಮತ್ತೆ ಸ್ವಸ್ಥಾನದಲ್ಲಿ ಕೂರಿಸಿ ಬದುಕಿಸಿದ ಸಾಧನೆಯನ್ನು ಮಿರರ್ ಆನ್​ಲೈನ್ ವರದಿ ಭಾನುವಾರ ಮಾಡಿದೆ. ಭಾರತೀಯ ಮೂಲದ ನರ ಶಸ್ತ್ರಚಿಕಿತ್ಸಕ (ನ್ಯೂರೋ ಸರ್ಜನ್) ಡಾ. ಅನಂತ ಕಾಮತ್ ಅವರು ಟೋನಿ ಕೋವನ್ ಅವರ ತಲೆಬುರುಡೆಯನ್ನು ಲೋಹದ ತಟ್ಟೆ ಮತ್ತು ಬೋಲ್ಟ್ ಬಳಸಿ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಬೆನ್ನ ಹುರಿ ಮೇಲಿನ ಸ್ವಸ್ಥಾನದಲ್ಲಿ ಕೂರಿಸಿದ್ದಾರೆ. ಗುಣಮುಖರಾಗುತ್ತಿರುವ ಕೋವನ್ ಶೀಘ್ರ ಮನೆಗೆ ತೆರಳುವ ಭರವಸೆಯಿಂದಿದ್ದಾರೆ. ನ್ಯೂಕ್ಯಾಸಲ್ ನಗರದ ನಿವಾಸಿ ಟೋನಿ ಕೋವನ್ ಕಳೆದ ವರ್ಷ ಸೆಪ್ಟೆಂಬರ್ 9ರಂದು ಅಪಘಾತಕ್ಕೆ ಈಡಾಗಿದ್ದರು. ಅವರ ಕಾರು ಸ್ಪೀಡ್ ಬಂಪ್​ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಟೆಲಿಫೋನ್ ಕಂಬವೊಂದಕ್ಕೆ ಗುದ್ದಿತ್ತು. ಅಪಘಾತದಲ್ಲಿ ಗಾಯಗೊಂಡ ಟೋನಿ ಅವರ ಹೃದಯ ಬಡಿತ ನಿಂತು ಹೋಗಿತ್ತು. ಆಸ್ಪತ್ರೆಗೆ ಒಯ್ಯುವ ಮೊದಲು ಅವರಿಗೆ ಕೃತಕ ಶ್ವಾಸೋಚ್ಛಾಸ ಮಾಡಿಸಲಾಗಿತ್ತು. ಟೋವನ್ ಅ...

Pry School Teacher for the 6-8 Classes Computer Literacy Ppr keys

126. Temporary 127. Semiconductor 128. 11 129. IBM 130. 1984 131. Second Generation computer 132. IBM 1401 133. Binary codes 134. Fetch 135. Application software 136. Paper tape 137. Execution time 138. Overlapped processing 139. Memory 140. Power PC 141. Input 142. Magnetic or Optical 143. CU, ALU & primary storage 144. 256 145. All the above 146. Data 147. Super computer 148. 1024MB 149. Monitor 150. Kannada Ganaka Parishat -(Siddu Sajjan, Vijayapur)

1129 posts callformed by UPSC

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2015ನೇ ಸಾಲಿನ ಸಿವಿಲ್ ಸರ್ವೀಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1129 ಸ್ಥಾನಗಳ ಭರ್ತಿಗಾಗಿ ಪರೀಕ್ಷೆ ನಡೆಸಲಾಗುತ್ತದೆ. ನಾಗರಿಕ ಸೇವಾ ಪ್ರಿಲಿಮ್ಸ ಪರೀಕ್ಷೆಯಲ್ಲಿ ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್(ಸಿಸ್ಯಾಟ್) ಮುಂದುವರಿಸಲಾಗುವುದು ಹಾಗೂ ಉತ್ತೀರ್ಣವಾಗಲು ಶೇ.33 ಅಂಕಗಳನ್ನು ಪಡೆಯಬೇಕೆಂದು ಸರ್ಕಾರ ಮೇ 13ರಂದು ಪ್ರಕಟಣೆ ಹೊರಡಿಸಿತ್ತು. 2011ರಲ್ಲಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಸಿಸ್ಯಾಟ್ಗೆ ಸಂಬಂಧಿಸಿದಂತೆ ಉಂಟಾದ ಗೊಂದಲಗಳ ಕಾರಣದಿಂದಾಗಿ ಮೇ 16ರಂದು ಪ್ರಕಟವಾಗಬೇಕಿದ್ದ ಪರೀಕ್ಷಾ ಪ್ರಕಟಣೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು. ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ನಡೆಸಲಾಗುತ್ತದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ ಇತರೆ ಸೇವೆಗಳ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ. *** ಒಟ್ಟು ಸ್ಥಾನ: 1129 ಅರ್ಜಿ ಸಲ್ಲಿಕೆಗೆ ಕೊನೇ ದಿನ: ಜೂನ್ 19 ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 23 ವೆಬ್ಸೈಟ್: www.upsc.gov.in *** ಅರ್ಜಿ ಶು...

ವಿಶ್ವದ ದೊಡ್ಡ ಹೋಟೆಲ್ ಮೆಕ್ಕಾದಲ್ಲಿ ನಿರ್ಮಾಣವಾಗಲಿರುವ ‘ಅರ್ಬಾಜ್ ಕುದಾಯ್’ ಹೋಟೆಲ್ ರಿಯಾದ್ (ಸೌದಿ ಅರೇಬಿಯಾ):

Image
ಪವಿತ್ರ ಮೆಕ್ಕಾಗೆ ಬರುವ ಲಕ್ಷಾಂತರ ಪ್ರವಾ ಸಿಗರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರ ₹22, 300 ಕೋಟಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಹೋಟೆಲ್ ನಿರ್ಮಿಸಲು ಮುಂದಡಿ ಇಟ್ಟಿದೆ. 4 ಹೆಲಿಪ್ಯಾಡ್, 10 ಸಾವಿರ ಕೊಠಡಿ, 70 ರೆಸ್ಟೋರೆಂಟ್ ಉಳ್ಳ 'ಅರ್ಬಾಜ್ ಕುದಾಯ್' ಹೋಟೆಲ್ ನಿರ್ಮಾಣ ಕಾರ್ಯವು ಮೆಕ್ಕಾದಲ್ಲಿ ಆರಂಭವಾಗಿದ್ದು, 2017ರ ಸುಮಾರಿಗೆ ಬಳಕೆಗೆ ಸಿಗುವ ಅಂದಾಜು ಇದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ಬುರ್ಜ್ ಖಲೀಫಾವನ್ನು ಈ ಹೋಟೆಲ್ ಮೀರಿಸಲಿರುವುದು ಇದರ ವಿಶೇಷ. 14 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಈ ಹೋಟೆಲ್ನಲ್ಲಿ 44 ಅಂತಸ್ತುಗಳು ಇದ್ದು, 12 ಗೋಪುರಗಳನ್ನು ಒಳಗೊಳ್ಳಲಿದೆ. ಸೌದಿಯ ರಾಜಮನೆತನಕ್ಕಾಗಿಯೇ ವಿಶೇಷ ಕೊಠಡಿಗಳನ್ನು ವಿನ್ಯಾಸ ಮಾಡಲಾಗುತ್ತಿದ್ದು, ಪ್ರಧಾನ ಗೋಪುರದ ಗುಮ್ಮಟವು ವಿಶ್ವದಲ್ಲಿಯೇ ದೊಡ್ಡದು ಎನ್ನಲಾಗುತ್ತಿದೆ. ಇದು ಕೇವಲ ಹೋಟೆಲ್ಗೆ ಮಾತ್ರ ಸೀಮಿತವಾಗಿಲ್ಲ. ವಿಶಾಲ ವೇದಿಕೆ ಒಳ ಗೊಂಡ ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಹಾಗೂ ಪುಡ್ ಕೋರ್ಟ್ಗಳೂ 'ಅರ್ಬಾಜ್ ಕುದಾಯ್'ನಲ್ಲಿರುತ್ತದೆ. ಲಾಸ್ ವೆಗಾಸ್ ನಲ್ಲಿರುವ ದಿ ವೆನಿಷಿಯನ್ ಹಾಗೂ ದಿ ಪಲಾಝೊ ಹೋಟೆಲ್ಗಳು ವಿಶ್ವದಲ್ಲೇ ದೊಡ್ಡವು ಎಂದು ಹೆಗ್ಗಳಿಗೆ ಕಾರಣವಾಗಿದ್ದವು. ಈಗಾಗಲೇ ಸೌದಿ ಸರ್ಕಾರದ ಹಣ...

ಗ್ರಾ.ಪಂ.ಚುನಾವಣೆಯಲ್ಲಿ ಎಡಗೈ ಹೆಬ್ಬೆರಳಗೆ ಶಾಯಿ ಹಾಕಲು ರಾಜ್ಯ ಚುನಾವಣೆ ಆಯೋಗ ಸೂಚನೆ.

Image
ಗ್ರಾ.ಪಂ.ಚುನಾವಣೆಯಲ್ಲಿ ಎಡಗೈ ಹೆಬ್ಬೆರಳಗೆ ಶಾಯಿ ಹಾಕಲು ರಾಜ್ಯ ಚುನಾವಣೆ ಆಯೋಗ ಸೂಚನೆ.

ಬೆಂಗಳೂರಿನ ಛಾಯಾಚಿತ್ರಗಾರ ಹ ಸ ಬ್ಯಾಕೋಡರಿಗೆ ರಾಷ್ಟ್ರೀಯ ಪ್ರಶಸ್ತಿ

Image
ಕೆ.ಆರ್.ಪುರ,ಮೇ23-ಪಶ್ಚಿಮ ಬಂಗಾಳದ ಬರೊಬಿಶಾದಲ್ಲಿನ ನಡೆದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಂಗಳೂರಿನ ಹ.ಸ. ಬ್ಯಾಕೋಡ ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. ವನ್ಯಜೀವಿ ವಿಭಾಗದಲ್ಲಿ ಬೆಸ್ಟ್ ಬರ್ಡ್ ಅವಾರ್ಡ್ ಜೇನುಕುಟುಕ ಹಕ್ಕಿಗಳ ಮಿಲನ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಲಭಿಸಿದೆ. ಕಪ್ಪುಬಿಳುಪು (ಬ್ಲ್ಯಾಕ್ ಆಂಡ್ ವೈಟ್) ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಶ ಶೀರ್ಷಿಕೆಯ ಚಿತ್ರಕ್ಕೆ ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ. ಬರೊಬಿಶಾದ ಷಟರ್ ಸ್ಪೀಡ್ ಫೋಟೋ ಕ್ಲಬ್ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಎರಡು ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಬಂದಿದ್ದವು. ಅದರಲ್ಲಿ ಹ.ಸ. ಬ್ಯಾಕೋಡ ಅವರ ಒಟ್ಟು ಹತ್ತು ಛಾಯಾಚಿತ್ರಗಳು ರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಮುಂದಿನ ಜೂನ್ ತಿಂಗಳ ಮೊದಲ ವಾರದಲ್ಲಿ ಬರೊಬಿಶಾದಲ್ಲಿ ಪ್ರಶಸ್ತಿ ವಿಜೇತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಅಂತಾರಾಷ್ಟ್ರೀಯ ಛಾಯಾಗ್ರಾಹಕರಾದ ಸುಬ್ರತಾ ದಾಸ್, ಅಭಿಜೀತ್ ದೇ, ಸಂತೋಷ ಕುಮಾರ್ ಜಾನಾ ಹಾಗೂ ಅಮಿಥಾಬ್ ಸಿಲ್ ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ದೀಪಾ ಕುಮಾರಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯಾಗಿ ಬಡ್ತಿ

Image
ಅಂತರರಾಷ್ಟ್ರೀಯ ಹಾಕಿ ಅಂಪೈರ್ ನವದೆಹಲಿ (ಐಎಎನ್ಎಸ್): ಭಾರತದ ಹಾಕಿ ಅಂಪೈರ್ ದೀಪಾ ಕುಮಾರಿ ಅವರಿಗೆ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) ಅಂಪೈರ್ ಸಮಿತಿ ಬಡ್ತಿ ನೀಡಿದೆ. ಈ ಬೆನ್ನಲ್ಲೇ ದೀಪಾ ಅವರಿಗೆ ಹಾಕಿ ಇಂಡಿಯಾ ಅಭಿನಂದನೆ ತಿಳಿಸಿದೆ. 'ಭಾರತದ ಹಾಕಿಗೆ ಇದೊಂದು ಹೆಮ್ಮೆಯ ದಿನವಾಗಿದೆ. ದೀಪಾ ಅವರ ಈ ಸಾಧನೆಗೆ ಹಾಕಿ ಇಂಡಿಯಾ ಅವರನ್ನು ಅಭಿನಂದಿಸಲು ಬಯಸುತ್ತದೆ' ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಷ್ತಾಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾರಿವರು ದೀಪಾ ಕುಮಾರಿ: ದೀಪಾ ಅವರು ದೆಹಲಿಯವರು. 2010ರಿಂದ ವೃತ್ತಿ ಜೀವನ ಆರಂಭಿಸಿದ್ದ ದೀಪಾ, ಸಾಕಷ್ಟು ದೇಶಿ ಟೂರ್ನಿಗಳಲ್ಲಿ ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಭಾರತೀಯ ಬಾಲಕನಿಗೆ ಸಿಕ್ತು 11 ವರ್ಷಕ್ಕೆ ಪದವಿ !

Image
ಭಾರತೀಯ ಬಾಲಕನಿಗೆ ಸಿಕ್ತು 11 ವರ್ಷಕ್ಕೆ ಪದವಿ ! (PSGadyal Teacher Vijayapur) ಲಾಸ್‌ ಎಂಜಲೀಸ್ (ಪಿಟಿಐ): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 11 ವರ್ಷದ ಬಾಲಕ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದಿದ್ದಾರೆ. ಕ್ಯಾಲಿಪೊರ್ನಿಯಾದ ತಾನಿಷ್ಕ್‌ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಅಮೆರಿಕನ್‌ ರಿವರ್‌ ಕಾಲೇಜಿನಲ್ಲಿ ಅಬ್ರಹಾಂ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 1800 ವಿದ್ಯಾರ್ಥಿಗಳ ಜತೆ ಅಬ್ರಹಾಂ ತೇರ್ಗಡೆಯಾಗಿದ್ದಾರೆ. ಓದಿನಲ್ಲಿ ಸದಾ ಮುಂದಿರುವ ಅಬ್ರಹಾಂ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ಅಧ್ಯಯನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕನ್‌ ರಿವರ್‌ ಕಾಲೇಜಿನ ಇತಿಹಾಸದಲ್ಲೇ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಬ್ರಹಾಂ ಅವರ ಸಾಧನೆಗೆ  ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈದ್ಯ ಅಥವಾ ವೈದ್ಯಕೀಯ ಸಂಶೋಧಕನಾಗುವ ಗುರಿಯನ್ನು ಹೊಂದಿರುವ ಅಬ್ರಹಾಂ ಅಮೆರಿಕದ ಅಧ್ಯಕ್ಷನಾಗುವ ಕನಸು ಕಟ್ಟಿಕೊಂಡಿದ್ದಾರೆ.

ಶತಮಾನದ ಬಳಿಕ ಸಿಂಧದುರ್ಗ ಬಳಿ ಕಂಡ ನೀಲಿ ತಿಮಿಂಗಿಲ(1914-2015)

Image
ಮುಂಬೈ (ಪಿಟಿಐ): ಮಹಾರಾಷ್ಟ್ರದ ಸಿಂಧದುರ್ಗ ಕರಾವಳಿಯಲ್ಲಿ ಅಪರೂಪದ ಜೋಡಿ ನೀಲಿ ತಿಮಿಂಗಿಲಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಕಳೆದೊಂದು ಶತಮಾನದಲ್ಲಿ ಇದೇ ಮೊದಲ ಬಾರಿಗೆ ಈ ಬಗೆಯ ತಿಮಿಂಗಿಲಗಳು ಇಲ್ಲಿ ಕಂಡುಬಂದಿವೆ. ಇದು ತಾಯಿ ಮತ್ತು ಮರಿ ಇರುವ ನೀಲಿ ತಿಮಿಂಗಿಲಗಳಾಗಿವೆ ಎಂದು ಅರಣ್ಯ ಮುಖ್ಯ ಸಂರಕ್ಷಕ ಎನ್. ವಾಸುದೇವನ್ ತಿಳಿಸಿದ್ದಾರೆ. ಮಹಾರಾಷ್ಟ್ರ ಕರಾವಳಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಜಾತಿ ತಿಮಿಂಗಿಲ ಪತ್ತೆಯಾಗಿವೆ. 1914ರಲ್ಲಿ ನೀಲಿ ತಿಮಿಂಗಿಲಗಳು ಈ ಪ್ರದೇಶದಲ್ಲಿ ಕೊನೆಯ ಬಾರಿ ಕಂಡುಬಂದಿದ್ದವು. ಮಾರ್ಚ್ನಿಂದ ಮೇ ತಿಂಗಳ ಅವಧಿಯಲ್ಲಿ ಸಿಂಧುದುರ್ಗ ಕರಾವಳಿಯ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸಂಶೋಧಕರ ತಂಡಕ್ಕೆ ತಿಮಿಂಗಿಲಗಳು ಗೋಚರಿಸಿವೆ. ಈ ಸಮಯದಲ್ಲಿ ನಾಲ್ಕು ಬ್ರೂಡಸ್ ಜಾತಿಯ ತಿಮಿಂಗಿಲಗಳೂ ಪತ್ತೆಯಾಗಿವೆ. ಸಿಂಧುದುರ್ಗ ಕರಾವಳಿಯಲ್ಲಿ ಆರು ತಿಂಗಳಿನಿಂದ ತಿಮಿಂಗಿಲ ಸಂಖ್ಯೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ತಂಡವು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಂಶೋಧನೆ ನಡೆಸುತ್ತಿದೆ.

ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ: ಭಾರತಕ್ಕೆ 24ನೇ ಸ್ಥಾನ

ವಾಷಿಂಗ್ಟನ್ (ಪಿಟಿಐ): ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 70 ರಾಷ್ಟ್ರಗಳ ಪೈಕಿ ಭಾರತ 24ನೇ ಸ್ಥಾನ ಪಡೆದಿದೆ. ಲಿಥುವಿನಿಯಾ ಅಗ್ರಸ್ಥಾನದಲ್ಲಿದೆ. ಪರಿಸರ ಸಂಬಂಧಿತ ನಿರ್ಧಾರಕ ವಿಷಯಗಳಲ್ಲಿ ಪಾದರ್ಶಕತೆ, ಉತ್ತರದಾಯಿತ್ವ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಕಾಯ್ದೆಗಳ ಅನುಷ್ಠಾನದಲ್ಲಿನ ರಾಷ್ಟ್ರಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಿದೆ. ವಾಷಿಂಗ್ಟನ್ ಮೂಲದ ವರ್ಲ್ಡ್ ರಿಸೋರ್ಸಿಸ್ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್ಐ) ಹಾಗೂ ಎಕ್ಸೆಸ್ ಇನಿಶಿಯೇಷಿಟಿವ್ ಈ ಪಟ್ಟಿ ಬಿಡುಗಡೆಗೊಳಿಸಿದೆ. ಅಮೆರಿಕ, ದಕ್ಷಿಣ ಆಫ್ರಿಕಾ ಹಾಗು ಇಂಗ್ಲೆಂಡ್ ಮೊದಲ ಹತ್ತರಲ್ಲಿ ಸ್ಥಾನ ಪಡೆದಿವೆ. 70 ರಾಷ್ಟ್ರಗಳಲ್ಲಿ ಪರಿಸರ ಪ್ರಜಾಪ್ರಭುತ್ವವು 75 ಕಾನೂನು ಬದ್ಧ ಹಾಗೂ 24 ಅಭ್ಯಾಸ ಸೂಚನೆಗಳು ಸೇರಿದಂತೆ ಅಂತರರಾಷ್ಟ್ರೀಯ ಗುಣಮಟ್ಟಗಳಿಗೆ ಅನುಗುಣವಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೇ, ಶೇಕಡ 93ರಷ್ಟು ರಾಷ್ಟ್ರಗಳು ಪರಿಸರ ಮಾಹಿತಿ ಹಕ್ಕಿನ ಅವಕಾಶ ಕಲ್ಪಿಸಿವೆ

ಬ್ಯಾಡ್ಮಿಂಟನ್: ಅಗ್ರಸ್ಥಾನಕ್ಕೆ ಮರಳಿದ ಸೈನಾ

ಹೈದರಾಬಾದ್ (ಪಿಟಿಐ): ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಗುರುವಾರ ಬಿಡುಗಡೆಗೊಳಿಸಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಹೈದರಾಬಾದ್ನ ಈ ಆಟಗಾರ್ತಿ ಕಳೆದ ತಿಂಗಳು ಮೊದಲ ಬಾರಿಗೆ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅವರ ರ್ಯಾಂಕ್ನಲ್ಲಿ ಕುಸಿತ ಕಂಡಿತ್ತು. ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ, ಗುರುವಾರ ಮತ್ತೆ ಮೊದಲ ಸ್ಥಾನಕ್ಕೆ ಮರಳಿದ್ದಾರೆ. ಕಳೆದ ವಾರ ನಡೆದ ಸುದೀರಮನ್ ಕಪ್ನಲ್ಲಿ ತೋರಿದ ಉತ್ತಮ ಪ್ರದರ್ಶನ ಅಗ್ರಸ್ಥಾನಕ್ಕೆ ಮರಳುವಲ್ಲಿ ಸೈನಾ ಅವರಿಗೆ ನೆರವಾಗಿದೆ. ಇದೇ ತಿಂಗಳ 26ರಿಂದ ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭಗೊಳ್ಳಲಿದ್ದು, ಅಗ್ರಪಟ್ಟವು ಸೈನಾ ಅವರ ವಿಶ್ವಾಸ ಹೆಚ್ಚಿಸಿದೆ. ಈ ನಡುವೆ, ಉದಯೋನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಅವರು ಒಂದು ಸ್ಥಾನ ಕುಸಿದು 12ನೇ ಸ್ಥಾನದಲ್ಲಿದ್ದಾರೆ. ಇನ್ನು, ಪುರುಷರ ವಿಭಾಗದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಗಿನ್ನಿಸ್ ದಾಖಲೆ ಮುರಿದ ಒಬಾಮಾ ಟ್ವಿಟರ್ ಖಾತೆ

ಏಜೆನ್ಸೀಸ್ | May 20, 2015, 12.52Pm ವಾಷಿಂಗ್ಟನ್: ಅತಿ ಕಡಿಮೆ ಅವಧಿಯಲ್ಲಿ ಟ್ವಿಟರ್ನಲ್ಲಿ 10ಲಕ್ಷಕ್ಕೂ ಹೆಚ್ಚು ಫಾಲೋಯರ್ಗಳನ್ನು ಹೊಂದುವ ಮೂಲಕ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಸ್ವಂತ ಟ್ವಿಟರ್ ಖಾತೆ ತೆರೆದ ಐದು ತಾಸಿನೊಳಗೆ ಅವರ ಫಾಲೋಯರ್ಗಳ ಸಂಖ್ಯೆ 10 ಲಕ್ಷ ದಾಟಿದ್ದು, ಪ್ರೆಸಿಡೆಂಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಬರಾಕ್ ಒಬಾಮಾ ಅಥವಾ @POTUS ಖಾತೆ ಮೂಲಕ ಒಬಾಮಾ ಜನರೊಂದಿಗೆ ನೇರವಾಗಿ ಸಂಪರ್ಕದಲ್ಲಿರಲಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ತಿಳಿಸಿದೆ. 2016ರಲ್ಲಿ ಮುಂದಿನ ಅಧ್ಯಕ್ಷರಿಗೆ ಈ ಖಾತೆ ವರ್ಗಾವಣೆ ಆಗಲಿದೆ. ಟ್ವಿಟರ್ ಖಾತೆ ತೆರೆದ ಕೆಲವೇ ತಾಸುಗಳಲ್ಲಿ ವಿಶ್ವದ ನಾನಾ ಭಾಗಗಳ ಜನರು ಒಬಾಮಾ ಅವರನ್ನು ಫಾಲೋ ಮಾಡಲು ಆರಂಭಿಸಿದ ಗ್ರಾಫಿಕ್ಅನ್ನು ಟ್ವಿಟರ್ ಬಿಡುಗಡೆ ಮಾಡಿದೆ. 2014 ಏಪ್ರಿಲ್ನಲ್ಲಿ ಟ್ವಿಟರ್ಗೆ ಎಂಟ್ರಿ ನೀಡಿದ ನಟ ರಾಬರ್ಟ್ ಡೌನಿ ಜೂನಿಯರ್ 24 ತಾಸಿಗೂ ಕಡಿಮೆ ಅವಧಿಯಲ್ಲಿ 10 ಲಕ್ಷ ಫಾಲೋಯರ್ಗಳನ್ನು ಹೊಂದುವ ಮೂಲಕ ಈ ಮೊದಲು ಗಿನ್ನಿಸ್ ದಾಖಲೆ ಮಾಡಿದ್ದರು. ಒಬಾಮಾ ಈಗ ಹಿಂದಿನ ದಾಖಲೆ ಮುರಿದಿದ್ದಾರೆ.

ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳ ಮುಂದುಡಿದ ಕುರಿತು. ಸೂತ್ತೊಲೆ. 26/05/15 ರ ಬದಲು 08/06/15ಕ್ಕೆ ಪ್ರಾರಂಭ.

Image
ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳ ಮುಂದುಡಿದ ಕುರಿತು. ಸೂತ್ತೊಲೆ. 26/05/15 ರ ಬದಲು 08/06/15ಕ್ಕೆ ಪ್ರಾರಂಭ.

Admission Notification : First Year Diploma (2015-16 )of Dpt of Technical Edn

Image

New service tax rate of 14% to come into effect from June 1

PTI | May 19, 2015, 10.56PM IST -------------------------------- The new rate of 14 per cent announced by finance minister Arun Jaitley in his Budget for 2015-16 would come into effect from June 1. Text resize:A A A NEW DELHI: The new service tax rate of 14 per cent will come into effect from June 1, government on Tuesday said, in a move that will make eating out in restaurants, insurance and phone bills expensive, among many other things. The service tax is currently levied at the rate 12.36 per cent including education cess. Top official sources said that the new rate of 14 per cent announced by finance minister Arun Jaitley in his Budget for 2015-16 would come into effect from June 1. In his Budget speech, Jaitley had said that to facilitate a smooth transition to levy of tax on services by both the Centre and the States, "it is proposed to increase the present rate" of service tax plus education cess from 12.36 per cent to a c...

ಬಡತನದಲ್ಲಿಯೂ ಅರಳಿದ ಹೂವು: SSLC 2015 : ವಿನಾಯಕ ಈಶ್ವರ ಕರಲಟ್ಟಿ SRA HIGHSCHOOL BANAHATTI (Dist : Bagalkot) ಗೆ ಪ್ರಥಮ(606/625)

Image

World's first underwater tennis court to be built in Dubai

Image
UdayavaniEnglish.com, May 19, 2015, 6:48 PM IST Dubai:  Dubai, which boasts of the world's highest tennis court, may also become home to the first underwater tennis centre where spectators can watch games from below or above the sea life through a massive glass dome.   Krzysztof Kotala, a Polish architect who owns a studio in Warsaw, is currently seeking investment from local players to make the ambitious project a reality.   Interestingly, the proposed location for the project (arguably one of the world's lowest tennis courts) is just next door to the highest tennis court atop the Burj al Arab skyscraper in Dubai.   "There is not an investor but I would like to get interest (from them) as I think it is a good idea," Kotala, 30, was quoted as saying by a local magazine.   When asked why he chose Dubai for his project, Kotala said the Gulf city had a rich tradition of tennis.   "This will be something original. This should be somewhere wher...

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2015 ಮತದಾನ ದಿನದಂದು ಚುನಾವಣೆ ನಡೆಯುವ ಗ್ರಾಮೀಣ ಪ್ರದೇಶಗಳಲ್ಲಿ ರಜೆ ಘೋಷಿಸುವ ಬಗ್ಗೆ.

Image
 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2015 ಮತದಾನ ದಿನದಂದು ಚುನಾವಣೆ ನಡೆಯುವ ಗ್ರಾಮೀಣ ಪ್ರದೇಶಗಳಲ್ಲಿ ರಜೆ ಘೋಷಿಸುವ ಬಗ್ಗೆ.

Now, Call STD Mobile Numbers Without Adding '0' or '+91' Prefix:-

A major roadblock to implementing full mobile number portability (MNP) across the country has been removed. Several telecom operators have begun simplifying the process of dialling STD mobile numbers in the country. Until now, calling mobile numbers registered and situated outside one's home network would require adding '0' or '+91' as a prefix. That is not true any longer. Customers of most telecom operators can now call any mobile number in the country without adding any prefix. We tested this with various numbers on Airtel, Vodafone and MTNL's networks and can confirm that the prefix is no longer necessary. There's a small chance that some operators haven't yet implemented the simplified dialling pattern and their numbers may still require a prefix. But that is likely to change before July, when the full MNP deadline comes into effect.

ದೇಶದ ಪ್ರಥಮ ಹಲಸು ಉದ್ದಿಮೆ ಕೇರಳದಲ್ಲಿ ಆರಂಭ..

- ಶ್ರೀ ಪಡ್ರೆ ಹಲಸು ಉತ್ಪನ್ನಗಳೊಂದಿಗೆ ಸುಭಾಷ್ ಹಲಸಿಗೇ ಮೀಸಲಾದ ದೇಶದ ಪ್ರಪ್ರಥಮ ಸುಸಜ್ಜಿತ ಉದ್ದಿಮೆ ಕೇರಳದಲ್ಲಿ ತಲೆಯೆತ್ತಿದೆ. ಈ ಸಾಹಸ ಮೂವತ್ತೊಂದರ ಉತ್ಸಾಹಿ ಸುಭಾಷ್ ಕೊರೋತ್ ಅವರದು. ಅವರು ಇದಕ್ಕಾಗಿಯೇ ತಳಿಪರಂಬದಲ್ಲಿ ನಾಲ್ಕು ಸಾವಿರ ಚದರಡಿಯ ಕಟ್ಟಡ ಕಟ್ಟಿದ್ದಾರೆ. ಹಲಸಿನ ಹಣ್ಣಿನ ವರಟ್ಟಿ (ಹಲ್ವದಂತಿರುತ್ತದೆ, ಆದರೆ ಹಲ್ವವಲ್ಲ, ಕನ್ನಡದಲ್ಲಿ ಬೆರಟ್ಟಿ), ಹಣ್ಣಿನದೇ ಲಘುಪೇಯ, ಚಾಕೊಲೇಟ್, ನಿರ್ಜಲೀಕೃತ ಒಣ ಮತ್ತು ಕಾಯಿಸೊಳೆ, ಬೀಜದಿಂದ ಮಾಡಿದ ದಿಢೀರ್ ಗಂಜಿ- ಇವಿಷ್ಟು ಆರಂಭ ದಲ್ಲಿ ಮಾರುಕಟ್ಟೆಗಿಳಿಯುವ ಉತ್ಪನ್ನಗಳು. ದಿಢೀರ್ ಗಂಜಿ ಯನ್ನು ಬಿಸಿನೀರಿನಲ್ಲಿ ಹಾಕಿ ಕೂಡಲೇ ಸೇವಿಸಬಹುದು. ಈ ಕಂಪೆನಿಯ ಹೆಸರು ಕೇಳಿ - ಆರ್ಟೋಕಾರ್ಪಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್. ಹಲಸಿನ ಸಸ್ಯಶಾಸ್ತ್ರೀಯ ನಾಮವೇ ಆರ್ಟೋಕಾರ್ಪಸ್. ಕಂಪೆನಿಯ ಉತ್ಪನ್ನಗಳ ವ್ಯಾಪಾರನಾಮ ಹೆಬಾನ್. ಸುಭಾಷ್ ಈ ಕಂಪೆನಿಯ ನಿರ್ವಾಹಕ ನಿರ್ದೇಶಕರು. ಹಲಸಿನ ಹಣ್ಣಿನ ತೊಳೆ ಮಾತ್ರವಲ್ಲ, ಉಳಿದವರು ಬಿಸಾಕುವ ಬೀಜವನ್ನೂ ಇವರು ಬಳಸುತ್ತಾರೆ. ಬೇಕರಿಯಲ್ಲಿ ತಯಾರಿಸುವ ಎಲ್ಲಾ ವಿಧದ ಕೇಕ್ ಮತ್ತು ಬಿಸ್ಕೆಟ್ಗಳಲ್ಲಿ ಮೈದಾಗೆ ಬದಲು ಬಳಸಬಹುದಾದ ಹಲಸಿನಬೀಜದ ಹುಡಿ (ಹಬೀ ಹುಡಿ) ಇವರ ವಿನೂತನ ಉತ್ಪನ್ನ. 'ಇಷ್ಟರಲ್ಲಿಯೇ ಹಲವು ಬಾರಿ ಹಲಸಿನಬೀಜದ ಹುಡಿಯಿಂದ ಈ ಎರಡು ಉತ್ಪನ್ನ ಮಾಡಿದ್ದು, ತಿಂದವ ರೆಲ್ಲ...

Ksrp- Recruitment- 2014 Viva-Voce Selected List

Image
Ksrp- Recruitment- 2014 Viva-Voce Selected List

ದ.ಕೊರಿಯಾ ಜತೆ 7 ಒಪ್ಪಂದಗಳಿಗೆ ಸಹಿ

ದ.ಕೊರಿಯಾ ಜತೆ 7 ಒಪ್ಪಂದಗಳಿಗೆ ಸಹಿ ಸೋಲ್‌ (ಪಿಟಿಐ): ದುಪ್ಪಟ್ಟು ತೆರಿಗೆ ತಪ್ಪಿಸುವುದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವುದೂ ಸೇರಿದಂತೆ ಸಾರಿಗೆ, ವಿದ್ಯುತ್‌, ಚಲನಚಿತ್ರ ಕ್ಷೇತ್ರವನ್ನು ಒಳಗೊಂಡ ಒಟ್ಟು 7 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ದಕ್ಷಿಣ ಕೊರಿಯಾ  ಮಂಗಳವಾರ ಇಲ್ಲಿ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದ.ಕೊರಿಯಾ ಅಧ್ಯಕ್ಷೆ ಪಾರ್ಕ್‌ ಜೆನ್‌ ಹೆ ಅವರು ಈ ಒಪ್ಪಂದಗಳಿಗೆ ಸಹಿ ಹಾಕಿದರು. ಎರಡೂ ದೇಶಗಳಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದಕ್ಕೆ 1985ರಲ್ಲೇ ಸಹಿ ಹಾಕಲಾಗಿತ್ತು. ಈಗ ಈ ಒಡಂಬಡಿಕೆಯನ್ನು ಇನ್ನಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಲಿದೆ. ಈಗಾಗಲೇ ಜಾರಿಯಲ್ಲಿರುವ ಸಮಗ್ರ ಆರ್ಥಿಕ ಸಹಭಾಗಿತ್ವ (ಸಿಇಪಿಎ) ಒಪ್ಪಂದದಡಿ, ಚಲನಚಿತ್ರ, ಪ್ರಸಾರ ಒಳಗೊಂಡ ಆಡಿಯೊ-ವಿಡಿಯೊ ಕೊ ಪ್ರೊಡೆಕ್ಷನ್‌ ಕ್ಷೇತ್ರದಲ್ಲಿ ಸಹಕಾರ ನೀಡಲು ಉಭಯ ದೇಶಗಳು ಸಮ್ಮತಿ ಸೂಚಿಸಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣ,  ಪರ್ಯಾಯ ಇಂಧನ ಅಭಿವೃದ್ಧಿ, ಸ್ಮಾರ್ಟ್‌ ಗ್ರಿಡ್‌  ಅಳವಡಿಕೆ ಸೇರಿದಂತೆ ವಿದ್ಯುತ್‌ ವಲಯದಲ್ಲಿ ಮತ್ತು ರಪ್ತು ವಹಿವಾಟು ಕ್ಷೇತ್ರದಲ್ಲೂ ಎರಡೂ ದೇಶಗಳು  ಒಡಂಬಡಿಕೆ ಮಾಡಿಕೊಂಡಿವೆ. ಅಂತರರಾಷ್ಟ್ರೀಯ ಯುವಜನ ವಿನಿಮಯ ಕಾರ್ಯಕ್ರಮಕ್ಕೂ  ಈ ಜಾಗತಿಕ ನಾಯಕರು ಹಸಿರು ನಿಶಾನೆ ತೋರಿದರು.

ಐಸಿಎಸ್ ಸಿ: ದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಬೆಸ್ಟ್.

Image
ಐಸಿಎಸ್ ಸಿ: ದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಬೆಸ್ಟ್. (PSGadyal Teacher Vijayapur ) ಬೆಂಗಳೂರು, ಮೇ 18: ಕರ್ನಾಟಕದ ವಿದ್ಯಾರ್ಥಿಗಳು ಐಸಿಎಸ್ ಸಿ(10 ನೇ ತರಗತಿ) ಐಸಿಎಸ್(12 ನೇ ತರಗತಿ) ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯದ ವಿದ್ಯಾರ್ಥಿಗಳ ಶೇಕಡಾವಾರು ಸಾಧನೆಯೇ ಅಧಿಕವಾಗಿದೆ. ರಾಜ್ಯದ 99.67 ವಿದ್ಯಾರ್ಥಿಗಳು ಐಸಿಎಸ್ ಸಿಯಲ್ಲಿ ತೇರ್ಗಡೆಯಾಗಿದ್ದು ಇದು ದೇಶದ ಶೇ. 98.49 ಕ್ಕೂ ಅಧಿಕವಾಗಿದೆ. ಇನ್ನು ಐಸಿಎಸ್ ವಿಭಾಗದಲ್ಲಿ ಶೇ. 98.61 ಸಾಧನೆ ಮಾಡಿದ್ದು ದೇಶದಲ್ಲಿ ಶೇ. 96.28 ಜನ ಪಾಸಾಗಿದ್ದಾರೆ. ಇಲ್ಲೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ ಶೇ. 99.75 ಬಾಲಕಿರು ಪಾಸ್ ಆಗಿದ್ದರೆ, ಪರೀಕ್ಷೆ ಬರೆದ ಶೇ. 99.59 ಬಾಲಕರು ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನ ಗ್ರೀನ್ ವುಡ್ ವಿದ್ಯಾಲಯದ ಅನುರಾಗ್ ಆದಿತ್ಯ ಶರ್ಮಾ ಮತ್ತು ಪಲ್ಲವಿ ವಿ ಮೆನನ್ ಶೇ. 98.80 ಸ್ಕೋರ್ ಮಾಡಿ ದೇಶದಲ್ಲೇ ಐಸಿಎಸ್ ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹೆಬ್ಬಾಳದ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿನಿ ಎಸ್. ಕಾವ್ಯಾ ಶೇ.99.50 ಸಾಧನೆ ಮಾಡಿದ್ದು ಐಎಸ್ ಸಿ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ಎಸ್ ಎಮ್ ಎಸ್ ಮೂಲಕ ಪಿ.ಯು.ಸಿ ದ್ವಿತೀಯ ಫಲಿತಾಂಶ ಉಚಿತವಾಗಿ ಪಡೆಯಲು @puc2015Register No ನ್ನು ೯೨೪೩೩೪೨೦೦೦ ಗೆ ಕಳುಹಿಸಿ.. (works with vodafone)

Image

ಜಿಲ್ಲಾವಾರು PUC Result 2015

ಜಿಲ್ಲಾವಾರು PUC Result 2015 (PSGadyal Teacher Vijayapur) ಯಾವುದಕ್ಕೆ ಯಾವ ದಿನಾಂಕ ಉತ್ತರ ಪತ್ರಿಕೆಯ ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 25 ಮರು ಮೌಲ್ಯಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30 ಕೊನೆ ದಿನ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30 ಜೂನ್ 25ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 27 ಗರಿಷ್ಟ ಎಷ್ಟು? ಕಲಾ ವಿಭಾಗದಲ್ಲಿ ಗರಿಷ್ಠ ಅಂಕ – 579 ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ – 593 ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ – 595 ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ 01. ದಕ್ಷಿಣ ಕನ್ನಡ 02. ಉಡುಪಿ 03. ಉತ್ತರ ಕನ್ನಡ 04. ಕೊಡಗು 05. ಚಿಕ್ಕಮಗಳೂರು 06. ಶಿವಮೊಗ್ಗ 07. ಬೆಂಗಳೂರು ದಕ್ಷಿಣ 08. ಬೆಂಗಳೂರು ಉತ್ತರ 09. ಚಾಮರಾಜನಗರ 10. ಹಾವೇರಿ 11. ಬಾಗಲಕೋಟೆ 12. ಬೆಂಗಳೂರು ಗ್ರಾಮಾಂತರ 13. ಚಿಕ್ಕಬಳ್ಳಾಪರು 14. ಧಾರವಾಡ 15. ಹಾಸನ 16. ಮೈಸೂರು 17. ಬೆಳಗಾವಿ 18. ಕೋಲಾರ 20. ಬಳ್ಳಾರಿ 21. ದಾವಣೆಗೆರೆ 22. ಯಾದಗಿರಿ 23. ಕಲ್ಬುರ್ಗಿ 24. ತುಮಕೂರು 25. ವಿಜಯಪುರ 26. ಮಂಡ್ಯ 27. ಕೊಪ್ಪಳ 28. ಚಿತ್ರದುರ್ಗ 29. ರಾಯಚೂರು 30. ಬೀದರ್ 31. ಗದಗ

ಕಾಲೇಜ್ ಹಾಸ್ಟೆಲ್’ನಲ್ಲಿ ಅಟೆಂಡರ್’ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್.

Image
ಕಾಲೇಜ್ ಹಾಸ್ಟೆಲ್'ನಲ್ಲಿ ಅಟೆಂಡರ್'ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್. (PSGadyal Teacher Vijayapur) ಕಾಲೇಜ್ ಹಾಸ್ಟೆಲ್'ನಲ್ಲಿ ಅಟೆಂಡರ್'ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್ ಬೆಂಗಳೂರು (ಮೇ 18) : ಇಂದು 2014-15ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಆದರೆ ಇತ್ತೀಚಿಗೆ ಬೆಂಗಳೂರಿನ ಹಾಸ್ಟೆಲ್ ಒಂದರಲ್ಲಿ ನಡೆದಿದ್ದ ಶೂಟ್ ಔಟ್'ನಲ್ಲಿ ಮೃತಪಟ್ಟಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾಳೆ. ಪ್ರಗತಿ ಕಾಲೇಜಿನಲ್ಲಿ ಅಟೆಂಡರ್‌'ನಿಂದ ಹತ್ಯೆಯಾಗಿದ್ದ ಗೌತಮಿ, 472 ಅಂಕ ಗಳಿಸಿದ್ದಾಳೆ. ಮಾರ್ಚ್ 31ರ ರಾತ್ರಿ ವಿದ್ಯಾರ್ಥಿನಿ ಗೌತಮಿಯನ್ನು ಪ್ರಗತಿ ಪಿಯು ಕಾಲೇಜು ಹಾಸ್ಟೆಲ್‌'ಗೆ ನುಗ್ಗಿ ಅದೇ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕೊಲೆ ಮಾಡಿದ್ದ. ಆ ನತದೃಷ್ಟ ವಿದ್ಯಾರ್ಥಿನಿ ಗಳಿಸಿರುವ ಅಂಕಗಳು ಹೀಗಿದೆ ನೋಡಿ

ಜಾರ್ಖಂಡ್‌ ಮೊದಲ ಮಹಿಳಾ ರಾಜ್ಯಪಾಲರಾಗಿ ದ್ರೌಪದಿ ಮುರ್ಮು. (PSG)

ಜಾರ್ಖಂಡ್‌ ಮೊದಲ ಮಹಿಳಾ ರಾಜ್ಯಪಾಲರಾಗಿ ದ್ರೌಪದಿ ಮುರ್ಮು. (PSG) ರಾಂಚಿ: ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನ‌ ಮೊದಲ ಮಹಿಳಾ ರಾಜ್ಯಪಾಲರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುರ್ಮು ಅವರು ಸೈಯದ್‌ ಅಹ್ಮದ್‌ ಅವರ ಉತ್ತರಾಧಿಕಾರಿಯಾಗಿದ್ದಾರೆ. ಸೈಯದ್‌ ಅಹ್ಮದ್‌ ಅವರು ಮಣಿಪುರ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಒಡಿಶಾದ ಎರಡು ಬಾರಿಯ ಬಿಜೆಪಿ ಶಾಸಕಿಯಾಗಿರುವ ಮುರ್ಮು ಅವರು ನವೀನ್‌ ಪಟ್ನಾಯಕ್‌ ಅವರ ಸಚಿವ ಸಂಪುಟದಲ್ಲಿ ಸಚಿವೆಯಾಗಿದ್ದರು. ಆಗ ಬಿಜೆಪಿಯ ಬೆಂಬಲದಲ್ಲಿ ಬಿಜು ಜನತಾ ದಳವು ರಾಜ್ಯವನ್ನು ಆಳುತ್ತಿತ್ತು. ಮುರ್ಮು ಅವರು ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷೆಯಾಗಿದ್ದರಲ್ಲದೆ ಒಡಿಶಾ ವಿಧಾನಸಭೆಯ ರಾಯಿರಂಗಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜಾರ್ಖಂಡ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೀರೇಂದ್ರ ಸಿಂಗ್‌ ಅವರು ಜಾರ್ಖಂಡ್‌ ರಾಜ್ಯಪಾಲೆಯಾಗಿರುವ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ರಘುವರದಾಸ್‌, ಅವರ ಸಂಪುಟ ಸದಸ್ಯರು, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಮತ್ತು ಅರ್ಜುನ್‌ ಮುಂಡಾ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ICSR/ISE RESULTS NOW ON WEB

To get ICSE Results 2015 on your Mobile SMS ICSE<Space><Unique Id> to 09248082883. To get ISC Results 2015 on your Mobile SMS ISC<Space><Unique Id> to 09248082883.

42 ವರ್ಷಗಳಿಂದ ಕೋಮಾದಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಸಾವು

Image
42 ವರ್ಷಗಳಿಂದ ಕೋಮಾದಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಸಾವು ಸೋಮವಾರ - ಮೇ -18-2015 ಮುಂಬೈ, ಮೇ 18: ಕಳೆದ 1973ರಲ್ಲಿ ಆಸ್ಪತ್ರೆಯ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾಗಿ 42 ವರ್ಷಗಳಿಂದ ಕೋಮಸ್ಥಿತಿಯಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಇಂದು ಬೆಳಗ್ಗಿನ ಜಾವ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕರ್ನಾಟಕದ ಹೊನ್ನಾವರ ಮೂಲದ 68 ವರ್ಷ ವಯಸ್ಸಿನ ಶಾನಭಾಗ್‌ಳನ್ನು 42 ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋಹನ್‌ಲಾಲ್ ಭಾರ್ತಾ ವಾಲ್ಮಿಕಿ ಎಂಬಾತ ಈಕೆಯ ಕೊರಳಿಗೆ ನಾಯಿಗೆ ಹಾಕುವ ಚೈನ್‌ನ್ನು ಹಾಕಿ ಅತ್ಯಾಚಾರವೆಸಗಿದ್ದರಿಂದ ಆಕೆ ಆಘಾತಗೊಂಡು ಕೋಮಾಕ್ಕೆ ಜಾರಿದ್ದಳು. ಜೀವನ್ಮರಣ ಹೋರಾಟದಲ್ಲಿದ್ದ ಈಕೆಯನ್ನು ಚಿಕಿತ್ಸೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಡಲಾಗಿದ್ದು, ಇಂದು ಬೆಳಗ್ಗಿನ ಜಾವ ಅರುಣಾ ಶಾನ್‌ಬಾಗ್‌ ಸಾವನ್ನಪ್ಪಿದ್ದಾರೆ.

TENNIS :ITALIAN OPEN : SHARPOVA WON WOMEN'S SINGLE TITLE

ಇಟಾಲಿಯನ್‌ ಓಪನ್‌: ಶರಪೋವಾಗೆ ಪ್ರಶಸ್ತಿ ಉದಯವಾಣಿ, May 18, 2015, 3:45 AM IST [image][image] ರೋಮ್‌:ಮೂರನೇ ಶ್ರೇಯಾಂಕದ ಮರಿಯಾ ಶರಪೋವಾ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಕೂಟದ ವನಿತೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್‌ ಹೋರಾಟದಲ್ಲಿ ಅವರು ಸ್ಪೇನ್‌ನ ಕಾರ್ಲಾ ಸೂರೆಜ್‌ ನವಾರೊ ಅವರನ್ನು 4-6, 7-5, 6-1 ಸೆಟ್‌ಗಳಿಂದ ಉರುಳಿಸಿದರು. ಶರಪೋವಾ ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಡಾರಿಯಾ ಗ್ಯಾವ್ರಿಲೋವಾ ಅವರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿದ್ದರೆ ಸೂರೆಜ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಿಮೋನಾ ಹಾಲೆಪ್‌ ಅವರನ್ನು 2-6, 6-3, 7-5 ಸೆಟ್‌ಗಳಿಂದ ಉರುಳಿಸಿದ್ದರು. ಫೆಡರರ್‌ ಫೈನಲಿಗೆ ಸ್ವಿಸ್‌ನ ರೋಜರ್‌ ಫೆಡರರ್‌ ಅವರು ತನ್ನದೇ ದೇಶದ ಸ್ಟಾನ್‌ ವಾವ್ರಿಂಕ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ಇಟಾಲಿಯನ್‌ ಓಪನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದರು. ಫೈನಲ್‌ನಲ್ಲಿ ಅವರು ಸರ್ಬಿಯಾದ ಎದುರಾಳಿ ನೊವಾಕ್‌ ಜೊಕೋವಿಕ್‌ ಅವರನ್ನು ಎದು ರಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಆವೆ ಅಂಗಣದ ರಾಜ ರಫೆಲ್‌ ನಡಾಲ್‌ ಅವರನ್ನು ಸೋಲಿಸಿ ಅಚ್ಚರಿಗೊಳಿಸಿದ್ದ ವಾವ್ರಿಂಕ ಸೆಮಿಫೈನಲ್‌ನಲ್ಲಿ ಯಾವುದೇ ಹೋರಾಟ ನೀಡದೇ 4-6, 2-6 ಸೆಟ್‌ಗಳಿಂದ ಫೆಡರರ್‌ಗೆ ಶರಣಾದರು. ಇಲ್ಲಿ ಏಳು ಬಾರಿ ಪ್ರಶಸ್ತಿ ಜಯಿಸಿದ್ದ ನಡಾಲ್‌ ವಿರುದ್ಧ ವಾವ್ರಿಂಕ ಆವೆ ಅಂಗಣದಲ್ಲಿ ಮೊದಲ ಗೆಲುವು ಒಲಿಸಿಕ...

ಐಸಿಎಸ್‌ಇ 10, 12ನೇ ತರಗತಿ ಫ‌ಲಿತಾಂಶವೂ ಇಂದು ಪ್ರಕಟ.

ಐಸಿಎಸ್‌ಇ 10, 12ನೇ ತರಗತಿ ಫ‌ಲಿತಾಂಶವೂ ಇಂದು ಪ್ರಕಟ.(PSG) ಬೆಂಗಳೂರು: ಐಸಿಎಸ್‌ಇ ಪಠ್ಯಕ್ರಮದ 10ನೇ ತರಗತಿ ಮತ್ತು 12ನೇ ತರಗತಿ ಫ‌ಲಿತಾಂಶಗಳೂ ಕೂಡ ಸೋಮವಾರ ಪ್ರಕಟವಾಗಲಿದೆ. ಬೆಳಗ್ಗೆ 11.30ಕ್ಕೆ ಎರಡೂ ಫ‌ಲಿತಾಂಶಗಳು ಐಸಿಎಸ್‌ಇ ವೆಬ್‌ಸೈಟ್‌ www.cisce.org   ನಲ್ಲಿ ಸಿಗಲಿವೆ. ಪ್ರಾಂಶುಪಾಲರುಗಳು ತಮ್ಮ ಕರಿಯರ್‌ ಪೋರ್ಟಲ್‌ನಲ್ಲಿ ಲಾಗಿನ್‌ ಆಗುವ ಮೂಲಕ ತಮ್ಮ ಶಾಲೆ ಅಥವಾ ಕಾಲೇಜಿನ ಒಟ್ಟಾರೆ ಫ‌ಲಿತಾಂಶವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಐಸಿಎಸ್‌ಇ ವೆಬ್‌ಸೈಟ್‌ನಲ್ಲಿ ಲಾಗ್‌ಇನ್‌ ಆಗಿ ತಮ್ಮ ಫ‌ಲಿತಾಂಶವನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಬಹುದು. 10ನೇ ತರಗತಿ ವಿದ್ಯಾರ್ಥಿಗಳಾದರೆ ವೆಬ್‌ಸೈಟ್‌ನಲ್ಲಿ ಲಾಗ್‌ಇನ್‌ ಆಗಿ "ರಿಸಲ್ಟ್ 2015' ಆಯ್ಕೆ ಕ್ಲಿಕ್‌ ಮಾಡಿ, ನಂತರ ಐಸಿಎಸ್‌ಇ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. 12ನೇ ತರಗತಿ ವಿದ್ಯಾರ್ಥಿಗಳು "ಐಎಸ್‌ಇ' ಕ್ಲಿಕ್‌ ಮಾಡಿ ತಮ್ಮ ಯೂನಿಕ್‌ ಐಡಿ ಸಂಖ್ಯೆಯನ್ನು ನಮೂದಿಸಿ ಫ‌ಲಿತಾಂಶ ಪಡೆಯಬಹುದು. ಹೆಚ್ಚಿನ ವಿವರಗಳನ್ನು ವೆಬ್‌ಪೇಜ್‌ನಲ್ಲಿ ವೀಕ್ಷಿಸಬಹುದು ಎಂದು ಕೌನ್ಸಿಲ್‌ ಫಾರ್‌ ದ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌(ಐಸಿಎಸ್‌ಇ) ಘೋಷಿಸಿದೆ.

10 ನೇ ತರಗತಿ ಪಾಸ್ ಮಾಡಿದ 9 ವರ್ಷದ ಬಾಲಕ..!(PSG)

Image
10 ನೇ ತರಗತಿ ಪಾಸ್ ಮಾಡಿದ 9 ವರ್ಷದ ಬಾಲಕ..!(PSG) ಹೈದರಾಬಾದ್: 9 ವರ್ಷದ ಪ್ರತಿಭಾವಂತ ಬಾಲಕನೊಬ್ಬ 10 ನೇ ತರಗತಿ ಪರೀಕ್ಷೆಯನ್ನು 10 ಕ್ಕೆ 7.5 ಗ್ರೇಡ್ ಪಡೆಯುವ ಮೂಲಕ ಪಾಸ್ ಮಾಡಿದ್ದು, ದಾಖಲೆ ನಿರ್ಮಿಸಿದ್ದಾನೆ. ತೆಲಂಗಾಣ ಪರೀಕ್ಷಾ ಮಂಡಳಿ ನಡೆಸಿದ್ದ ಪರೀಕ್ಷಾ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಬಾಲಕನ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ. ಹೈದರಾಬಾದ್ ನ ಅಗಸ್ತ್ಯಾ ಜೈಸ್ವಾಲ್ ಈ ಸಾಧನೆ ಮಾಡಿರುವ ಪುಟ್ಟ ಬಾಲಕನಾಗಿದ್ದು, 2005 ಆಗಸ್ಟ್ 13 ರಂದು ಜನಿಸಿರುವ ಈತ ಬಾಲ್ಯದಿಂದಲೂ ತನ್ನ ಪ್ರತಿಭೆ ಕಾರಣಕ್ಕಾಗಿ ಎಲ್ಲರ ಗಮನ ಸೆಳೆದಿದ್ದ. ಈತನ ಬುದ್ದಿಮತ್ತೆಯನ್ನು ಗಮನಿಸಿದ್ದ ಪೋಷಕರು ಹೈದರಾಬಾದಿನ ಚಂದ್ರಯಾನಗುತ್ತದಲ್ಲಿರುವ ಸೇಂಟ್ ಹಿಲ್ಸ್ ಹೈಸ್ಕೂಲಿನಲ್ಲಿ ಈ ಬಾರಿಯ 10 ನೇ ತರಗತಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈತನ ಪ್ರತಿಭೆಯನ್ನು ಗಮನಿಸಿದ ಶಿಕ್ಷಣ ಮಂಡಳಿಯೂ ಇದಕ್ಕೆ ಅವಕಾಶ ನೀಡಿದ್ದು, ಇದೀಗ ಈ ಪುಟ್ಟ ಬಾಲಕ ತನ್ನ 9 ನೇ ವಯಸ್ಸಿನಲ್ಲಿಯೇ 10 ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ಅದ್ವೀತಿಯ ಸಾಧನೆ ಮಾಡಿದ್ದಾನೆ. ಗಣಿತ ಹಾಗೂ ಭಾಷಾ ಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿರುವ ಬಾಲಕನಿಗೆ ಒತ್ತಾಸೆಯಾಗಿ ನಿಂತಿರುವ ಪೋಷಕರು ಅದಕ್ಕಾಗಿ ಮನೆಯಲ್ಲಿಯೇ ಸೂಕ್ತ ತರಬೇತಿ ನೀಡುತ್ತಿದ್ದಾರೆ.

ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ.

ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ. ಉಲಾನ್ ಬಟರ್, ಮೇ.17: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಂಗೋಲಿಯಾದ ಅಧ್ಯಕ್ಷ ತ್ಸಖಿಯಾಗಿನ್ ಎಲ್ಬೆಗ್ದೊರ್ಜ್ ಅವರಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 13ನೇ ಶತಮಾನದ ಹಸ್ತಪ್ರತಿಯನ್ನು ಉಡುಗೊರೆ ನೀಡಿದ ಮೋದಿ ಅವರಿಗೆ ಮುದ್ದಾದ ಕುದುರೆ ಪ್ರತಿಯಾಗಿ ಸಿಕ್ಕಿದೆ. 13ನೇ ಶತಮಾನದ ಮಂಗೋಲ್ ಚರಿತ್ರೆ ಸಾರುವ ಹಸ್ತಪ್ರತಿ ರಾಮಪುರದ ರಾಜಾ ಗ್ರಂಥಾಲಯದಿಂದ ಪಡೆಯಲಾಗಿದೆ. 80ಕ್ಕೂ ಅಧಿಕ ಪುಟ್ಟ ದೃಷ್ಟಾಂತಗಳನ್ನು ಒಳಗೊಂಡ ಅಮೂಲ್ಯ ರಚನೆ ಇದಾಗಿದೆ. ಜಮಾಯಿತ್ ತವಾರಿಖ್ ಎಂದು ಕರೆಯಲಾಗುವ ಈ ಯೋಜನೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮೋದಿ ಅವರು ವಿವರಣೆ ನೀಡಿದ್ದಾರೆ. ಇದಕ್ಕೆ ಬದಲಾಗಿದೆ ನರೇಂದ್ರ ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಮುದ್ದಾದ ಕುದುರೆಯನ್ನು ಗಿಫ್ಟ್ ಆಗಿ ನೀಡಿದೆ. ಉಲಾನ್ ಬಟರ್ ನಲ್ಲಿ ನಡೆದ ಮಿನಿ ನಾದಾಮ್ ಹಬ್ಬದಲ್ಲಿ ಪಾಲ್ಗೊಂಡ ಮೋದಿ ಆವರು ಮಂಗೋಲಿಯಾ ಸಾಂಪ್ರದಾಯಿಕ ಉಡುಪು ತೊಟ್ಟು ಅಲ್ಲಿನ ಸಂಗೀತವಾದ್ಯಗಳನ್ನು ನುಡಿಸಿದರು.

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾದಿಂದ "ACT FOR MAHSEER" ಯೋಜನೆ

Image
ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ ಮಹಸೀರ್ ಪ್ರಭೇದದ ಮೀನುಗಳನ್ನು ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ ರೂಪಿಸಿಕೊಂಡು ಬಂದಿದೆ. ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ. 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್ ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ. * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು ತೊಡಗಿಸಿಕೊಳ್ಳುವುದು ಮತ್ತು ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. * ಜಾಗ...

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾ 'ಪವರ್'ನಿಂದ "ACT FOR MAHSEER" ಯೋಜನೆ

Image
ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ ಮಹಸೀರ್ ಪ್ರಭೇದದ ಮೀನುಗಳನ್ನು ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ ರೂಪಿಸಿಕೊಂಡು ಬಂದಿದೆ. ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ. 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್ ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ. * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು ತೊಡಗಿಸಿಕೊಳ್ಳುವುದು ಮತ್ತು ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. * ಜಾಗ...

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾದಿಂದ "ACT FOR MAHSEER" ಯೋಜನೆ

On May 17, 2015 4:24 PM, wrote: > > > ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ > ಮಹಸೀರ್ ಪ್ರಭೇದದ ಮೀನುಗಳನ್ನು > ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ > ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ > ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ > ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ > ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ > ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ > ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ > ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ > ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ > ರೂಪಿಸಿಕೊಂಡು ಬಂದಿದೆ. > ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ. > 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ > ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ > ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್ > ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ > ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ > ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ > ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ. > * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು...

ಮಂಗೋಲಿಯಾ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು: ಪ್ರಧಾನಿ ನರೇಂದ್ರ ಮೋದಿ

ಮಂಗೋಲಿಯಾ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು: ಪ್ರಧಾನಿ ನರೇಂದ್ರ ಮೋದಿ ಉಲಾನ್‌ ಬಟರ್‌, ಮೇ 17: ರವಿವಾರದಿಂದ ಮಂಗೋಲಿಯಾಕ್ಕೆ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಭಿವೃದ್ಧಿಗೆ ಸುಮಾರು ಒಂದು ಬಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ. ಮಂಗೋಲಿಯಾದ ರಾಜಧಾನಿ ಉಲಾನ್ ಬಟರ್ ನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ  ಗಂದಾನ್ ತೆಗ್‌ಚಿನ್‌ಲೆಂಗ್ ಬೌದ್ಧಧಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಮಂಗೋಲಿಯಾ ಭಾರತದ ಆಧ್ಯಾತ್ಮಿಕ ನೆರೆ ರಾಷ್ಟ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ತಾವಾಗಿದ್ದು,  ದೊರೆತ ಸ್ವಾಗತಕ್ಕೆ ತಾವು  ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮಂಗೋಲಿಯಾ ಭೇಟಿಯಿಂದ ಭಾರತ-ಮಂಗೋಲಿಯಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ 20 ವೆಬ್‌ಸೈಟಲ್ಲಿ ಪಿಯು ಫ‌ಲಿತಾಂಶ

Image
ನಾಳೆ 20 ವೆಬ್‌ಸೈಟಲ್ಲಿ ಪಿಯು ಫ‌ಲಿತಾಂಶ (PSGadyal Teacher Vijayapur) ಬೆಂಗಳೂರು: ಮೇ 18ರ ಸೋಮವಾರ ಪ್ರಕಟವಾಗಲಿರುವ ದ್ವಿತೀಯ ಪಿಯುಸಿ ಫ‌ಲಿತಾಂಶ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂರು ವೆಬ್‌ಸೈಟ್‌ಗಳು ಸೇರಿದಂತೆ ಒಟ್ಟು 20 ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ, ದೂರವಾಣಿ ಕರೆ ಹಾಗೂ ಎಸ್‌ಎಂಎಸ್‌ ಮೂಲಕವೂ ಫ‌ಲಿತಾಂಶ ಪಡೆಯಬಹುದಾಗಿದೆ. ಸೋಮವಾರ ಬೆಳಗ್ಗೆ 11.30ಕ್ಕೆ ಫ‌ಲಿತಾಂಶ ಪ್ರಕಟವಾಗಲಿದ್ದು, ತಕ್ಷಣದಿಂದಲೇ ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫ‌ಲಿತಾಂಶ ಪಡೆದುಕೊಳ್ಳಬಹುದು ಎಂದು ಪ.ಪೂ.ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ವೆಬ್‌ಸೈಟ್‌ಗಳು. http://www.pue.kar.nic.in http://www.karresults.nic.in http://www.puc.kar.nic.in www.knowyourresult.com www.indiaresults.com www.examresults.net www.karnatakaeducation.net http://results.karnatakaeducation.net www.bangaloreeducation.net www.results.amarujala.com www.BangaloreEducation.com www.resultsat.com www.resultout.com www.optraservice.com www.schools9.com www.collegeforyou.com www.goresults.net www.digied.com www.ace-online.co.in ಎಸ್‌ಎಂಎಸ್‌ ಮೂಲಕ ಹೇಗೆ? ಎಸ್‌ಎಂಎಸ...

ಆದಿಲ್‌ಗೆ ಸಿಂಗಲ್ಸ್‌ ಗರಿ

ಆದಿಲ್‌ಗೆ ಸಿಂಗಲ್ಸ್‌ ಗರಿ ಬೆಂಗಳೂರು: ಕರ್ನಾಟಕದ ಆದಿಲ್‌ ಕಲ್ಯಾಣಪುರ ಹೈದರಾಬಾದ್‌ನಲ್ಲಿ ನಡೆದ 16 ವರ್ಷದ ಒಳಗಿನವರ ಎಐಟಿಎ ರಾಷ್ಟ್ರೀಯ ಸರಣಿ ಜೂನಿಯರ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಫೈನಲ್‌ ಹೋರಾಟದಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಆದಿಲ್‌ 7–5, 6–2ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕ ಹೊಂದಿದ್ದ ಆಂಧ್ರಪ್ರದೇಶದ ಶಿವದೀಪ್‌ ಕೋಸರಾಜು ಅವರನ್ನು ಸೋಲಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಆಡಿದ ಆದಿಲ್‌ ಮೊದಲ ಸೆಟ್‌ನಲ್ಲಿ 4–5ರ ಹಿನ್ನಡೆ ಅನುಭವಿಸಿದ್ದರು.  ಬಳಿಕ ಚೇತರಿಕೆಯ ಆಟ ಆಡಿದ ಅವರು 10 ಮತ್ತು 12ನೇ ಗೇಮ್‌ಗಳಲ್ಲಿ ಜಯ ಸಾಧಿಸಿ ಸೆಟ್‌ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಮತ್ತಷ್ಟು ವಿಶ್ವಾಸದಿಂದ ಆಡಿದ ರಾಜ್ಯದ ಆಟಗಾರ ಎದುರಾಳಿಯನ್ನು ಸುಲಭವಾಗಿ ಮಣಿಸಿ ಸಂಭ್ರಮಿಸಿದರು. ಈ ಋತುವಿನಲ್ಲಿ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗ ಸೇರಿದಂತೆ ಆದಿಲ್‌ ಗೆದ್ದ ಎಂಟನೇ ಪ್ರಶಸ್ತಿ ಇದಾಗಿದೆ.

ಜಾತಿ ಸಮೀಕ್ಷೆ: ಮತ್ತೊಂದು ಅವಕಾಶ

ಜಾತಿ ಸಮೀಕ್ಷೆ: ಮತ್ತೊಂದು ಅವಕಾಶ ಬೆಂಗಳೂರು: ಜಾತಿ ಸಮೀಕ್ಷೆ ಶುಕ್ರವಾರಕ್ಕೆ ಕೊನೆಗೊಂಡಿದ್ದರೂ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನೀಡಲು ರಾಜ್ಯದ ಜನರಿಗೆ ಇನ್ನೊಂದು ಅವಕಾಶ ನೀಡಲು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತೀರ್ಮಾನಿಸಿದೆ. ಯಾವುದೇ ಕುಟುಂಬ ಕಾರಣಾಂತರಗಳಿಂದ ಸಮೀಕ್ಷೆಯಿಂದ ಹೊರಗುಳಿದಿದ್ದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಕುಟುಂಬದ ಮುಖ್ಯಸ್ಥರು ಮೇ 18ರಿಂದ ಮೇ 27ರವರೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಆಯೋಗವು  ತಿಳಿಸಿದೆ. ಬಿಬಿಎಂಪಿಯಲ್ಲಿ ಇವರನ್ನು ಸಂಪರ್ಕಿಸಿ * ಅಜಿತ್ ಕುಮಾರ್ ಹೆಗಡೆ, ಜಂಟಿ ಆಯುಕ್ತ, ಬಿಬಿಎಂಪಿ ಪೂರ್ವವಲಯ, ಮೇಯೋ ಹಾಲ್, ದೂರವಾಣಿ: 94495 59122, 080 - 2297 5801 * ಲಕ್ಷ್ಮೀನರಸಯ್ಯ, ಜಂಟಿ ಆಯುಕ್ತ, ಬಿಬಿಎಂಪಿ ಪಶ್ಚಿಮ ವಲಯ, ಸಂಪಿಗೆ ರಸ್ತೆ, ಮಲ್ಲೇಶ್ವರ, ದೂ: 94806 85411, 080 - 2297 5648 * ಎ.ಬಿ. ಹೇಮಚಂದ್ರ, ಜಂಟಿ ಆಯುಕ್ತ, ದಕ್ಷಿಣ ವಲಯ, ಕಮರ್ಷಿಯಲ್ ಕಾಂಪ್ಲೆಕ್ಸ್‌, 2ನೇ ಬ್ಲಾಕ್‌, ಜಯನಗರ, ದೂ: 94806 83777, 080 - 2297 5701 * ವಿ. ದೊಡ್ಡಪ್ಪ, ಹೆಚ್ಚುವರಿ ಆಯುಕ್ತ, ದಾಸರಹಳ್ಳಿ, ಪೋಸ್ಟ್‌ ಆಫೀಸ್‌ ಹತ್ತಿರ, ದೂ: 94806 84467, 080 - 2297 5901 * ವೀರಭದ್ರಪ್ಪ, ಜಂಟಿ ಆಯುಕ್ತ, ರಾಜರಾಜೇಶ್ವರಿ ನಗರ ವಲಯ, ದೂ: 98807 68148, 080 - 2860 4652 * ಎನ್‌. ಮುನಿರಾಜು, ಜಂಟಿ ಆಯುಕ್ತ, ಬೊಮ್ಮನಹಳ...

ಕರಿಯರ್‌ ಬೇಡ, ಅನುಭವ ಕೊಡಿ ಸಾಕು:- RBI GOVERNOR

ಉದಯವಾಣಿ, May 15, 2015, 3:40 AM IST ನಾನು ಡಿಗ್ರಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದುವಾಗ ಒಂಥರಾ "ಕೆಟ್ಟ' ಹುಡುಗನಾಗಿದ್ದೆ. ಯಾಕೆಂದರೆ ಯಾವ ಸಿದ್ಧಾಂತವನ್ನೂ ಮೇಲ್ನೋಟಕ್ಕೆ ಒಪ್ಪಿಕೊಳ್ಳುತ್ತಿರಲಿಲ್ಲ. ನಿಜಕ್ಕೂ ಈ ಸಿದ್ಧಾಂತದಲ್ಲಿ ಏನಾದರೂ ಹುರುಳಿದೆಯೇ, ಇದರಿಂದ ಜನರಿಗೆ ಲಾಭವಿದೆಯೇ ಎಂದು ಪರೀಕ್ಷೆ ಮಾಡುತ್ತಿದ್ದೆ. ಹಾಗೆ ಮಾಡುವಾಗ ಶಿಕ್ಷಕರಿಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ. ಅರ್ಥಶಾಸ್ತ್ರವೆಂದರೆ ಮಾದರಿಗಳ ಮೇಲೆ ನಿಂತಿರುವ ಶಾಸ್ತ್ರ. ಬೇರೆ ದೇಶಗಳಿಗೆ ಹೊಂದಿಕೆಯಾದ ಮಾದರಿ ನಮ್ಮ ದೇಶಕ್ಕೂ ಹೊಂದಿಕೆಯಾಗಬೇಕು ಎಂದೇನಿಲ್ಲ. ಅವುಗಳನ್ನು ಪ್ರಶ್ನೆ ಮಾಡುತ್ತ ಹೋಗಿದ್ದರಿಂದಲೇ ಈ ಕ್ಷೇತ್ರದಲ್ಲಿ ಅಷ್ಟಿಷ್ಟು ಸಾಧನೆ ಮಾಡಲು ನನ್ನಿಂದ ಸಾಧ್ಯವಾಯಿತು. ನನಗೊಬ್ಬ ಜಗತøಸಿದ್ಧ ಅರ್ಥಶಾಸ್ತ್ರಜ್ಞ ಸ್ನೇಹಿತನಿದ್ದಾನೆ. ಜಾನ್‌ ಕಾಕ್ರೇನ್‌ ಅಂತ ಅವನ ಹೆಸರು. ಅವನು ಯಾವಾಗಲೂ "ನಾನೊಬ್ಬ ಸ್ಟುಪಿಡ್‌' ಎಂದು ಹೇಳಿಕೊಳ್ಳುತ್ತಿರುತ್ತಾನೆ. ತನಗೆ ಏನೂ ತಿಳಿಯುವುದಿಲ್ಲ, ಎಲ್ಲವನ್ನೂ ಆರಂಭದಿಂದ ಅರ್ಥಮಾಡಿಕೊಳ್ಳಬೇಕಾದಷ್ಟು ದಡ್ಡ ತಾನು ಎಂಬುದು ಅವನ ಭಾವನೆ. ಆದ್ದರಿಂದಲೇ ಅವನು ಅಷ್ಟು ದೊಡ್ಡ ಅರ್ಥಶಾಸ್ತ್ರಜ್ಞನಾಗಿದ್ದಾನೆ ಎಂಬುದು ನನ್ನ ಭಾವನೆ. ಏಕೆಂದರೆ ನನಗೇನೂ ಗೊತ್ತಿಲ್ಲ ಎಂದು ಎಲ್ಲವನ್ನೂ ಆಮೂಲಾಗ್ರವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವಿದೆಯಲ್ಲ, ಅದೇ ನಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಮೇಲಕ್ಕ...

ಹಸುವಿನ ಬಗ್ಗೆ ಸರಳ ಪ್ರಬಂಧ ಬರೆಯಲಾಗದ ಶಿಕ್ಷಕ: ಜಮ್ಮು -ಕಾಶ್ಮೀರ ಹೈಕೋರ್ಟಗೆ ನಿರಾಶೆ

ಹಸುವಿನ ಬಗ್ಗೆ ಸರಳ ಪ್ರಬಂಧ ಬರೆಯಲಾಗದ ಶಿಕ್ಷಕ: ಜಮ್ಮು ಕಾಶ್ಮೀರ ಹೈಕೋರ್ಟ್ಗೆ ನಿರಾಸೆ ಏಜೆನ್ಸೀಸ್ | May 16, 2015, 01.01PM IST ಲೇಖನ ಅನಿಸಿಕೆಗಳು (1) 1 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ನಲ್ಲಿ ಅಪರೂಪದ ಪ್ರಕರಣವೊಂದು ನಡೆದಿದ್ದು, ಶಿಕ್ಷಕನೊಬ್ಬ ಹಸುವಿನ ಬಗ್ಗೆ ಸಂಕ್ಷಿಪ್ತ ಪ್ರಬಂಧ ಬರೆಯಲೂ ವಿಫಲನಾಗಿ ಪೀಠಕ್ಕೆ ನಿರಾಸೆ, ಜುಗುಪ್ಸೆ ಮೂಡಿಸಿದ್ದಾನೆ. ಶಿಕ್ಷಕನ ಸಾಮರ್ಥ್ಯದ ಬಗ್ಗೆ ಸವಾಲು ಹಾಕಿ ದೂರು ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಆತನಿಗೆ ಸರಳ ಪರೀಕ್ಷೆಗಳನ್ನು ಶುಕ್ರವಾರ ನೀಡಿತ್ತು. ಅವೆಲ್ಲದರಲ್ಲೂ ಪರೀಕ್ಷಾರ್ಥಿ ಶಿಕ್ಷಕ ವಿಫಲನಾಗಿದ್ದು ಕಂಡು ರಾಜ್ಯದ ಶಿಕ್ಷಣ ವಲಯದಲ್ಲಿ ಬದಲಾವಣೆಗಳು ಆಗಬೇಕಿರುವುದನ್ನು ಸಾಬೀತು ಪಡಿಸಿತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮುಝಫರ್ ಹುಸೇನ್ ಅತ್ತರ್ ಈ ಸಂಬಂಧ ರಾಜ್ಯ ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಆಗಿದ್ದಿಷ್ಟು: ದಕ್ಷಿಣ ಕಾಶ್ಮೀರದ ಶಾಲೆಯೊಂದರಲ್ಲಿ ರೆಹಬಾರ್ ತಾಲೀಮ್ ಎಂಬ ಹೆಸರಿನ ಶಿಕ್ಷಣ ಮಾರ್ಗದರ್ಶಕ ಹುದ್ದೆಗೆ ಮೊಹಮ್ಮದ್ ಇಮ್ರಾನ್ ಖಾನ್ ಆಯ್ಕೆಯಾಗಿದ್ದ. ಆದರೆ ಆತನಿಗೆ ಆ ಹುದ್ದೆ ನಿಭಾಯಿಸುವ ಯಾವುದೇ ಸಾಮರ್ಥ್ಯ ಇಲ್ಲ ಎಂದು ಅರ್ಜಿದಾರನಿಗೆ ಅರಿವಾಗಿದೆ. ಆತ ನೌಕರಿ ಗಿಟ್ಟಿಸಿಕೊಂಡಾಗ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದ ದಿಲ್ಲಿಯ ಪ್ರೌಢಶಿ...

AIR NEWS FREE SMS SERVICE:

Image
By sending SMS to 7738299899 in the following format AIR<space>language code *LANGUAGE CODES: ENGLISH – EN HINDI – HI MARATHI – MH DOGRI – DO SANSKRIT – SK NEPALI – NP ASSAMESE – AS GUJARATI -GJ MALAYALAM – ML TAMIL – TM Newly Added Languages URDU - UR ODIYA - OD BENGALI – BN KASHMIRI - KS ARUNACHALI - AL PUNJABI - PN